‘ಭಾರತದ ಮಾಜಿ ರಾಷ್ಟ್ರಪತಿಗಳು, ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಭಾರತರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಜನತೆಯ ರಾಷ್ಟ್ರಪತಿ ಎನಿಸಿಕೊಂಡಿದ್ದ ಕಲಾಂ ಅವರ ವ್ಯಕ್ತಿತ್ವ, ಸಾಧನೆ ಅವಿಸ್ಮರಣೀಯ. ದೇಶಕ್ಕೆ ಅವರ ಕೊಡುಗೆ ಅಪಾರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇಂದು ಯಾವುದೇ ಸಭೆ, ಆಡಳಿತ ಸಂಬಂಧ ಕಾರ್ಯಕ್ರಮಗಳಿಲ್ಲ
ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹಂಗಾಮಿ ಸಿಎಂ ಆಗಿ ಮುಂದುವರೆದಿರುವ ಬಿ.ಎಸ್.ಯಡಿಯೂರಪ್ಪ ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲೇ ಉಳಿದುಕೊಂಡಿದ್ದಾರೆ. ಯಾವುದೇ ಸಭೆ, ಸಮಾರಂಭ, ಆಡಳಿತ ಸಂಬಂಧ ಕಾರ್ಯಕ್ರಮಗಳನ್ನು ನಿಗದಿಪಡಿಸಿಕೊಳ್ಳದ ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಮೌನವಾಗಿ ನಿವಾಸದಲ್ಲೇ ಉಳಿದಿದ್ದಾರೆ. ಏತನ್ಮಧ್ಯೆ, ಸಿಎಂ ಅಧಿಕೃತ ನಿವಾಸ ಕಾವೇರಿಗೆ ಗುಪ್ತಚರ ಇಲಾಖೆಯ ಮುಖ್ಯಸ್ಥ ದಯಾನಂದ್ ಭೇಟಿ ನೀಡಿ ಕೆಲಕಾಲ ಇದ್ದು ವಾಪಾಸ್ಸಾಗಿದ್ದಾರೆ.
ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಒಬ್ಬೊಬ್ಬರೇ ನಾಯಕರು ಆಗಮಿಸುತ್ತಿದ್ದು, ಎಂ.ಪಿ.ರೇಣುಕಾಚಾರ್ಯ, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕರು ಬರುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಮುರುಗೇಶ್ ನಿರಾಣಿ ಕೂಡಾ ಯಡಿಯೂರಪ್ಪ ಭೇಟಿಗೆ ಕಾಲಾವಕಾಶ ಕೇಳಿ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ.
(BS Yediyurappa admire APJ Abdul Kalam on his Death Anniversary as Chief Minister of Karnataka Even after resignation)
ಇದನ್ನೂ ಓದಿ:
ಬಿಎಸ್ವೈ ರಾಜೀನಾಮೆಯಿಂದ ಮನನೊಂದು ರವಿ ಅಲಿಯಾಸ್ ರಾಜಾಹುಲಿ ಆತ್ಮಹತ್ಯೆ; ನೇಣಿಗೆ ಶರಣಾದ ಯಡಿಯೂರಪ್ಪ ಅಭಿಮಾನಿ
ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್