5ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಬಂಪರ್! ವಿಶೇಷ ಯೋಜನೆ ಘೋಷಿಸಿದ ಕೇರಳದ ಬಿಷಪ್

ವರ್ಚುವಲ್ ಮೀಟಿಂಗ್ ಒಂದರಲ್ಲಿ ಬಿಷಪ್ ಈ ಯೋಜನೆಯನ್ನು ಘೋಷಿಸಿದಾರೆ. ಆಗ ಎಲ್ಲರ ಹುಬ್ಬುಗಳೂ ಅಚ್ಚರಿಯಿಂದ ಮೇಲೇರಿದವಂತೆ. ಆದರೆ ಬಿಷಪ್ ತಾವು ಮಾಡಿದ ಘೋಷಣೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.

5ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಬಂಪರ್! ವಿಶೇಷ ಯೋಜನೆ ಘೋಷಿಸಿದ ಕೇರಳದ ಬಿಷಪ್
ಬಿಷಪ್ ಜೊಸೆಫ್
Follow us
TV9 Web
| Updated By: guruganesh bhat

Updated on: Jul 27, 2021 | 4:01 PM

ತಿರುವನಂತಪುರಂ: ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೊಳಿಸುವ ಕುರಿತು ತೀವ್ರತರದ ಚರ್ಚೆಗಳು ನಡೆಯುತ್ತಿವೆ. ಕಡಿಮೆ ಮಕ್ಕಳನ್ನು ಹೊಂದಿದ ಕುಟುಂಬಕ್ಕಷ್ಟೇ ಸರ್ಕಾರಿ ಯೋಜನೆಗಳನ್ನು ನೀಡುವುದಾಗಿ ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ಘೋಷಿಸಿವೆ. ಈ ಹೊತ್ತಲ್ಲೇ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಕೆಲವು ಉತ್ತೇಜನಕಾರಿ ಯೋಜನೆಗಳನ್ನು ಒದಗಿಸುವುದಾಗಿ ಕೇರಳದ ಚರ್ಚ್ ಒಂದರ ಬಿಷಪ್ (Kerala Bishop) ಘೋಷಿಸಿದ್ದಾರೆ.

ಸಿರೋ ಮಲಬಾರ್ ಚರ್ಚ್​ನ ಮಾರ್ ಜೊಸೆಫ್ ಅವರೇ ಈ ಘೋಷಣೆ ಮಾಡಿದವರು. ತಮ್ಮ ಚರ್ಚ್​ನ ವ್ಯಾಪ್ತಿಯಲ್ಲಿ ಬರುವ ದಂಪತಿಗಳಿಗೆ 5 ಅಥವಾ 5ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಬಂಪರ್ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ 2000ನೇ ಇಸವಿಯ ನಂತರ ಮದುವೆಯಾದ ದಂಪತಿಗಳು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ ಎಂದು ಸಹ ಕೆಲ ನಿಯಮವನ್ನೂ ಅವರು ರೂಪಿಸಿದ್ದಾರೆ.

2000ನೇ ಇಸವಿಯ ನಂತರ ಮದುವೆಯಾದ ದಂಪತಿಗಳ 4ನೆ ಮಗುವಿನಿಂದ ನಂತರದ ಮಕ್ಕಳೆಲ್ಲರೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಚರ್ಚ್​ನ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಈ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುವುದು, ಅದೂ ಪ್ರತಿ ತಿಂಗಳು ₹1500 ಪ್ರೋತ್ಸಾಹ ಧನವನ್ನೂ ಒದಗಿಸಿ ಶಿಕ್ಷಣ ನೀಡಲಾಗುವುದು ಎಂದು ಬಿಷಪ್ ಘೋಷಿಸಿದ್ದಾರೆ. ದಂಪತಿಗಳ ನಾಲ್ಕನೇ ಮಗುವಿನಿಂದ ನಂತರದ ಎಲ್ಲಾ ಮಕ್ಕಳಿಗೆ ವೈದ್ಯಕೀಯ ಸೌಲಭ್ಯವನ್ನು ಸಹ ಚರ್ಚ್​ ನಡೆಸುತ್ತಿರುವ ಆಸ್ಪತ್ರೆಯೇ ನೋಡಿಕೊಳ್ಳಲಿದೆ ಎಂದು ಸಹ ಅವರು ತಿಳಿಸಿದ್ದಾರೆ.

ವರ್ಚುವಲ್ ಮೀಟಿಂಗ್ ಒಂದರಲ್ಲಿ ಬಿಷಪ್ ಈ ಯೋಜನೆಯನ್ನು ಘೋಷಿಸಿದಾರೆ. ಆಗ ಎಲ್ಲರ ಹುಬ್ಬುಗಳೂ ಅಚ್ಚರಿಯಿಂದ ಮೇಲೇರಿದವಂತೆ. ಆದರೆ ಬಿಷಪ್ ತಾವು ಮಾಡಿದ ಘೋಷಣೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.

ಇದನ್ನೂ ಓದಿ: 

Viral News: ಕೈಕಾಲುಗಳನ್ನು ವಿಸ್ತರಿಸುವ ಮೂಲಕ ಮಾನವರನ್ನು 5.6 ಇಂಚು ಎತ್ತರವಾಗಿಸಬಹುದು! ವಿಲಕ್ಷಣ ಹೇಳಿಕೆ ನೀಡಿ ವೈರಲ್​ ಆದ ವೈದ್ಯ

‘ಲಂಚವನ್ನು ನಾನು ಸ್ವೀಕರಿಸುವುದೂ ಇಲ್ಲ, ಕೊಡುವುದೂ ಇಲ್ಲ’; ವೈರಲ್​ ಆಯ್ತು ರಾಜ್​ ಕುಂದ್ರಾ ಹಳೆಯ ವಿಡಿಯೋ

(Kerala Bishop announces special project if there are more than 5 children! )

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ