ವೇಟ್​ಲಿಫ್ಟಿಂಗ್​ ಮಾಡಿದ ಪುಟ್ಟ ಬಾಲಕಿ! ಮೀರಾಬಾಯಿ ಚಾನು ಅವರ ಪ್ರತಿಕ್ರಿಯೆ ಏನಿತ್ತು ನೋಡಿ

ಬಾಲಕಿಯ ತಂದೆ ವೇಟ್ಲಿಫ್ಟರ್. ಹಾಗಿರುವಾಗ ವೇಟ್​ಲಿಫ್ಟಿಂಗ್​ ಕಲೆ ಅವಳ ರಕ್ತದಲ್ಲಿಯೇ ಬಂದಿದೆ. ಮೀರಾಬಾಯಿ ಚಾನು ಅವರೂ ಸಹ ಈ ಪುಟ್ಟ ಬಾಲಕಿಯ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೇಟ್​ಲಿಫ್ಟಿಂಗ್​ ಮಾಡಿದ ಪುಟ್ಟ ಬಾಲಕಿ! ಮೀರಾಬಾಯಿ ಚಾನು ಅವರ ಪ್ರತಿಕ್ರಿಯೆ ಏನಿತ್ತು ನೋಡಿ

ಟೋಕಿಯೊ ಒಲಂಪಿಕ್ಸ್​ನಲ್ಲಿ ಗೆದ್ದ ಭಾರತದ ವೇಟ್​ಲಿಫ್ಟರ್​ ಮೀರಾಬಾಯಿ ಚಾನು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದಿನ ಪೀಳಿಗೆಗೆ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಿದ ಇವರ ಸಾಧನೆಯನ್ನು ನೋಡಿ ಪುಟ್ಟ ಮಕ್ಕಳೂ ಸಹ ಇವರಂತೆಯೇ ಆಗಲು ಇಚ್ಛಿಸುತ್ತಿದ್ದಾರೆ. ಇಲ್ಲೋರ್ವ ಪುಟ್ಟ ಬಾಲಕಿ ವೇಟ್​ಲಿಫ್ಟ್​ ಹಿಡಿದು ಮೀರಾಬಾಯಿ ಚಾನು ಅವರ ಹಾಗೆ ವೇಟ್​ಲಿಫ್ಟಿಂಗ್​ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಗಮನಿಸುವಂತೆ ಪುಟ್ಟ ಬಾಲಕಿ ವೇಟ್​ಲಿಫ್ಟಿಂಗ್​ ಮಾಡುತ್ತಿದ್ದಾಳೆ. ಅವಳ ಹಿಂದಿರುವ ಟಿವಿಯಲ್ಲಿ ಮೀರಾಬಾಯಿ ಚಾನು ವೇಟ್​ಲಿಫ್ಟಿಂಗ್ ಮಾಡುತ್ತಿರುವ ದೃಶ್ಯ ಕಾಣಬಹುದು. ಪದಕ ಗೆದ್ದು ಖುಷಿಯಂತೆಯೇ, ಬಾಲಕಿಯೂ ಸಹ ಅಭಿನಯಿಸುತ್ತಿದ್ದಾಳೆ. ಮೀರಾಬಾಯಿ ಚಾನು ಅವರಂತೆಯೇ ಆಗುವ ಬಾಲಕಿಯ ಕನಸಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಕಿಯ ತಂದೆ ವೇಟ್​ಲಿಫ್ಟರ್​. ಹಾಗಿರುವಾಗ ವೇಟ್​ಲಿಫ್ಟಿಂಗ್ ಕಲೆ ಅವಳ ರಕ್ತದಲ್ಲಿಯೇ ಬಂದಿದೆ. ಮೀರಾಬಾಯಿ ಚಾನು ಅವರೂ ಸಹ ಈ ಪುಟ್ಟ ಬಾಲಕಿಯ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೋ.. ಕ್ಯೂಟ್. ಜಸ್ಟ್ ಲವ್ ದಿಸ್ ಎಂದು ಬರೆದುಕೊಂಡಿದ್ದಾರೆ.

ವೇಟ್ಲಿಫ್ಟರ್ ಸತೀಶ್ ಅವರು ವಿಡಿಯೋ ಹಂಚಿಕೊಂಡಿದ್ದು ಜೂನಿಯರ್ ಮೀರಾಬಾಯಿ ಚಾನು. ಇವರು ಎಲ್ಲರಿಗೆ ಸ್ಪೂರ್ತಿ  ಎಂದು ಶೀರ್ಷಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಭಿಪ್ರಾಯಗಳ ಸುರಿಮಳೆಯೇ ಬಂದಿದೆ. ಪುಟ್ಟ ಬಾಲಕಿಯು ಮೀರಾಬಾಯಿ ಅವರಂತೆ ಆಗಲು ಕನಸು ಕಾಣುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. ಇನ್ನು ಕೆಲವರು ವೀರಾಬಾಯಿ ಚಾನು ಅವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 21 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ.

ಇದನ್ನೂ ಓದಿ:

Tokyo Olympics 2020: ಸರ್ಕಾರದ ಬೆಂಬಲವಿಲ್ಲದೇ ಹೋಗಿದ್ದರೆ ನನಗೆ ಪದಕ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲ: ಮೀರಾಬಾಯಿ ಚಾನು

PHOTOS: ಭಾರತಕ್ಕೆ ವಾಪಸ್ಸಾದ ಬೆಳ್ಳಿ ಹುಡುಗಿ ಮೀರಾಬಾಯಿ ಚಾನು; ಡಿವೈಎಸ್​ಪಿ ಹುದ್ದೆ ನೀಡಿ ಗೌರವಿಸಿದ ಮಣಿಪುರ ಸರ್ಕಾರ

Click on your DTH Provider to Add TV9 Kannada