TikTok Star: ಕ್ರೇನ್ನಲ್ಲಿ ನಿಂತು ಲೈವ್ ವಿಡಿಯೋ ಮಾಡಲು ಹೋಗಿ ದುರಂತ ಅಂತ್ಯ ಕಂಡ ಟಿಕ್ಟಾಕ್ ಸ್ಟಾರ್; ಭಯಾನಕ ವಿಡಿಯೋ ವೈರಲ್
Crane Operator: ವೃತ್ತಿಯಲ್ಲಿ ಕ್ರೇನ್ ಚಾಲಕಿಯಾಗಿರುವ ಕ್ಸಿಯಾವೋ ಅವರಿಗೆ ಇನ್ನೂ 23ವರ್ಷ. ಇಬ್ಬರು ಮಕ್ಕಳ ತಾಯಿಯೂ ಹೌದು. ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದರು.
ಸೆಲ್ಫೀ ತೆಗೆದುಕೊಳ್ಳಲು ಹೋಗಿ ಅವಘಡ ಮಾಡಿಕೊಂಡು ಪ್ರಾಣಬಿಟ್ಟವರ ಬಗ್ಗೆ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ. ಹಾಗೇ, ಈಗ ಇಲ್ಲೊಬ್ಬಳು ಟಿಕ್ಟಾಕ್ ಸ್ಟಾರ್ (TikTok Star), ಲೈವ್ ವಿಡಿಯೋ(Live Video)ವೊಂದನ್ನು ಮಾಡಲು ಹೋಗಿ ಕ್ರೇನ್ನಿಂದ 160 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಅಂದಹಾಗೆ ಈ ದುರ್ಘಟನೆ ನಡೆದದ್ದು ಚೀನಾದಲ್ಲಿ. ಟಿಕ್ಟಾಕ್ ವಿಡಿಯೋಗಳ ಮೂಲಕವೇ ಖ್ಯಾತಳಾಗಿದ್ದ, ಟಿಕ್ಟಾಕ್ ಸ್ಟಾರ್ ಎನ್ನಿಸಿಕೊಂಡಿದ್ದ 23 ವರ್ಷ ಕ್ಸಿಯಾವೋ ಕ್ಯುಮಿ ವಿಡಿಯೋ ಮಾಡುತ್ತಿದ್ದಾಗಲೇ ಬಿದ್ದು ಮೃತಪಟ್ಟಿದ್ದಾಳೆ.
ಕ್ಸಿಯಾವೋ ವೃತ್ತಿಯಲ್ಲಿ ಕ್ರೇನ್ ಚಾಲಕಿ. ಅದರಲ್ಲೇ ಕುಳಿತು ಟಿಕ್ಟಾಕ್ ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದಳು. ಕ್ರೇನ್ ಚಾಲಕಿಯಾಗಿದ್ದ ಈಕೆ ತನ್ನ ವೃತ್ತಿಯ ಬಗ್ಗೆ ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ಪದೇಪದೆ ಏನಾದರೂ ಪೋಸ್ಟ್ ಹಾಕುತ್ತಿದ್ದಳು. ಆದರೆ ಈ ಬಾರಿ ದುರದೃಷ್ಟವಶಾತ್ 160 ಅಡಿ ಆಳಕ್ಕೆ ಬಿದ್ದಿದ್ದಾಳೆ. ಆಕೆ ಲೈವ್ನಲ್ಲಿ ಮಾತನಾಡುತ್ತಿದ್ದಂತೇ ಜಾರಿದ್ದಾಳೆ. ಅಷ್ಟರಲ್ಲಿ ಕ್ಯಾಮರಾ ಆಫ್ ಆಗಿದೆ..ಮಾತು ನಿಂತಿದೆ ಎಂದು ಸನ್ ಮಾಧ್ಯಮ ವರದಿ ಮಾಡಿದೆ.
ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಚೀನಾದ ಖ್ಯಾತ ಕಂಟೆಂಟ್ ಕ್ರಿಯೇಟರ್ ಮತ್ತು ಟಿಕ್ಟಾಕ್ ಆರ್ಟಿಸ್ಟ್ಗಳಲ್ಲಿ ಒಬ್ಬರಾಗಿದ್ದರು. ಇವರು @Xiaoquimei ಎಂಬ ಹೆಸರಿನಲ್ಲಿ ಟಿಕ್ಟಾಕ್ ಅಕೌಂಟ್ ಹೊಂದಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿಡಿಯೋವನ್ನು ಪೋಸ್ಟ್ ಮಾಡಿ, ಜನಮೆಚ್ಚುಗೆ ಗಳಿಸಿದ್ದರು. ಅನೇಕ ಅಭಿಮಾನಿಗಳೂ ಇದ್ದರು. ಇದೀಗ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Nokia XR20: ಮತ್ತೆರಡು ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನಿದರ ವಿಶೇಷ, ಬೆಲೆ ಎಷ್ಟು?
Published On - 6:27 pm, Tue, 27 July 21