Nokia XR20: ಮತ್ತೆರಡು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನಿದರ ವಿಶೇಷ, ಬೆಲೆ ಎಷ್ಟು?
Nokia XR20, Nokia C30: ಈ ಫೋನ್ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಅದರಂತೆ 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಒಳಗೊಂಡಿರಲಿದೆ.
ನೀವು ಹೊಸ ನೋಕಿಯಾ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದ್ದೀರಾ? ಹಾಗಿದ್ರೆ ನೋಕಿಯಾ ಇದೀಗ ಮತ್ತೆರಡು ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ Nokia XR20, C30 ಸ್ಮಾರ್ಟ್‌ಫೋನ್ ಮತ್ತು Nokia 6310 ಹೆಸರಿನ ಫೀಚರ್ ಫೋನ್‌ಗಳು ಸೇರಿವೆ. ಇದರಲ್ಲಿ ನೋಕಿಯಾ 6310 ಅನ್ನು ಇದೇ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಕಂಪನಿ ತಿಳಿಸಿದೆ. ಆದರೆ, ಉಳಿದ ಎರಡು ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಯಾವಾಗ ಖರೀದಿಗೆ ಲಭ್ಯವಿರಲಿದೆ ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಈ ಸ್ಮಾರ್ಟ್ಫೋನ್ಗಳ ವೈಶಿಷ್ಟ್ಯಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ನೋಕಿಯಾ ಎಕ್ಸ್‌ಆರ್ 20 (Nokia XR20): ನೋಕಿಯಾ ಎಕ್ಸ್‌ಆರ್ 20 ಸ್ಮಾರ್ಟ್‌ಫೋನ್ ಮೂರು ವರ್ಷಗಳ ಅಪ್ಗ್ರೇಡ್ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 6.67-ಇಂಚಿನ ಪೂರ್ಣ-ಎಚ್‌ಡಿ + ಐಪಿಎಸ್ ಎಲ್ಸಿಡಿ ಡಿಸ್ಪ್ಲೇಯನ್ನು ನೀಡಲಾಗಿದೆ. ಇನ್ನು ಸೆಲ್ಫಿಗಳಿಗಾಗಿ ಹೋಲ್-ಪಂಚ್ ಕಟೌಟ್ ಕ್ಯಾಮೆರಾ ಇದರಲ್ಲಿದೆ. ಹಾಗೆಯೇ ಈ ಸ್ಮಾರ್ಟ್ಫೋನ್ನ ಟಚ್ ಸ್ಕ್ರೀನ್ ಕೈಗವಸು ಧರಿಸಿದರೂ, ಬೆರಳುಗಳು ನೆನೆದಿದ್ದರೂ ವರ್ಕ್ ಆಗಲಿದೆ. ಅಂದರೆ ನೀವು ಗ್ಲೌಸ್ ಧರಿಸಿ ಸ್ಕ್ರೀನ್ ಟಚ್ ಮಾಡಿದರೂ ಕಾರ್ಯನಿರ್ವಹಿಸುತ್ತದೆ. ಇನ್ನು ಇದರಲ್ಲಿ ಅಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರ್ಯಾಗನ್ (octa-core Qualcomm Snapdragon 480 SoC) 480 ಚಿಪ್ಸೆಟ್ ನೀಡಲಾಗಿದೆ. ಹಾಗೆಯೇ 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ನೋಕಿಯಾ ಎಕ್ಸ್‌ಆರ್ 20 ಹೊಂದಿದೆ. ಇದನ್ನು ಸ್ಟೊರೇಜ್ನ್ನು ಮೈಕ್ರೊ ಎಎಸ್ಡಿ ಕಾರ್ಡ್ ಮೂಲಕ 256ಜಿಬಿವರೆಗೆ ವಿಸ್ತರಿಸಬಹುದಾಗಿದೆ.
ಡ್ಯುಯಲ್ ರಿಯರ್ ಕ್ಯಾಮೆರಾಗಳ ವಿನ್ಯಾಸ ಇದರಲ್ಲಿ ನೀಡಲಾಗಿದ್ದು, ಅದರಂತೆ ಹಿಂಬದಿಯಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಇದರಲ್ಲಿರಲಿದೆ. ಇನ್ನು ಮುಂಭಾಗದಲ್ಲಿ, 8 ಮೆಗಾಪಿಕ್ಸೆಲ್ ಶೂಟರ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಫೋನ್‌ನ ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದ್ದು, 5 ಜಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 18W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿ ನೀಡಲಾಗಿದೆ. ಹಾಗೆಯೇ ಇದರ ಬ್ಯಾಟರಿ ಸಾಮರ್ಥ್ಯ 4,630mAh.
ನೋಕಿಯಾ ಸಿ 30 (Nokia C30): ನೋಕಿಯಾ ಸಿ 30, 6.82-ಇಂಚಿನ ಎಚ್‌ಡಿ + ಡಿಸ್ಪ್ಲೇ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 (ಗೋ ಎಡಿಷನ್) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಆಕ್ಟಾ-ಕೋರ್ ಯುನಿಸಾಕ್ ಎಸ್‌ಸಿ 9863 ಎ ಸೋಕ್ ಪ್ರೊಸೆಸರ್ ನೀಡಲಾಗಿದೆ. ಅನ್ನು 3 ಜಿಬಿ RAM ಮತ್ತು 64 ಜಿಬಿ ವರೆಗೆ ಆನ್‌ಬೋರ್ಡ್ ಸ್ಟೊರೇಜ್ ಇದರಲ್ಲಿರಲಿದೆ. ಇನ್ನು ಬಳಕೆದಾರರು ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿ ಸ್ಟೊರೇಜ್ ಸಾಮರ್ಥ್ಯವನ್ನು 256ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಈ ಫೋನ್ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಅದರಂತೆ 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಒಳಗೊಂಡಿರಲಿದೆ. ಇನ್ನು ಮುಂಭಾಗದಲ್ಲಿ ವಾಟರ್‌ಡ್ರಾಪ್ ಶೈಲಿಯ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ನೋಕಿಯಾ ಸಿ 30 ಯ ಇತರ ಗಮನಾರ್ಹ ವಿಶೇಷತೆಗಳೆಂದರೆ ಇದು 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 4.2, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಫಿಂಗರ್ಪ್ರಿಂಟ್ ಸೆನ್ಸಾರ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದರಲ್ಲಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ವೈರ್ಡ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ.
What do you get when you cross @Oficial_RC3 and @LisaFreestyle with our most durable phone yet, the #NokiaXR20?
Find out in the #ToughestTest
See more about the #NokiaXR20 here: https://t.co/mWfLD3hDTl pic.twitter.com/513vIHF4zM
— Nokia Mobile (@NokiaMobile) July 26, 2021
ಸದ್ಯ ಯುರೋಪ್ ದೇಶಗಳಲ್ಲಿ ನೋಕಿಯಾ ನೂತನ ಸ್ಮಾರ್ಟ್ಫೋನ್ಗಳು ಖರೀದಿಗೆ ಲಭ್ಯವಿದ್ದು, ನೋಕಿಯಾ ಎಕ್ಸ್‌ಆರ್ 20 ಬೆಲೆ (Nokia XR20) 499 ಯುರೋ. ( ಸುಮಾರು 43,800 ರೂ.). ಹಾಗೆಯೇ ನೋಕಿಯಾ ಸಿ 30 (Nokia C30) ಸ್ಮಾರ್ಟ್‌ಫೋನ್ 99 ಯುರೋಗೆ ಖರೀದಿಗೆ ಲಭ್ಯವಿದ್ದು, ಇದರ ಭಾರತೀಯ ಮೌಲ್ಯ ಸುಮಾರು 8700 ರೂ. ಇನ್ನು ನೋಕಿಯಾ 6310 ಫೀಚರ್ ಫೋನ್ಗೆ 40 ಯುರೋ ನಿಗದಿಪಡಿಸಲಾಗಿದ್ದು, ಭಾರತದಲ್ಲಿ ಈ ಫೋನ್ 3500 ರೂ.ಗೆ ಖರೀದಿಗೆ ಲಭ್ಯವಿರಲಿದೆ.
ಇದನ್ನೂ ಓದಿ: Viral Story: ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಟಾಯ್ಲೆಟ್
ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?
(Nokia XR20 Nokia C30 Smartphone Launched Price Specifications)