ಜಯಪ್ರದಾ ಕುಟುಂಬದಿಂದ ಅನ್ಯಾಯವಾಗಿದೆ, ದಯವಿಟ್ಟು ನ್ಯಾಯ ಕೊಡಿಸಿ: ಸಂಸದೆ ಸುಮಲತಾ ಬಳಿ ವಿಜಯಲಕ್ಷ್ಮಿ ಮನವಿ

ಜಯಪ್ರದಾ ಕುಟುಂಬದಿಂದ ಅನ್ಯಾಯವಾಗಿದೆ, ದಯವಿಟ್ಟು ನ್ಯಾಯ ಕೊಡಿಸಿ: ಸಂಸದೆ ಸುಮಲತಾ ಬಳಿ ವಿಜಯಲಕ್ಷ್ಮಿ ಮನವಿ
ಸಂಸದೆ ಸುಮಲತಾ ಅಂಬರೀಶ, ನಟಿ ವಿಜಯಲಕ್ಷ್ಮಿ (ಸಾಂದರ್ಭಿಕ ಚಿತ್ರ)

Sumalatha Ambareesh and Viajayalakshmi: ಕನ್ನಡದ ಖ್ಯಾತ ನಟಿ ವಿಜಯಲಕ್ಷ್ಮಿ ಅವರು ತಮ್ಮ ಸಹೋದರಿಗೆ ನ್ಯಾಯ ಕೊಡಿಸುವಂತೆ ಸಂಸದೆ ಸುಮಲತಾ ಅಂಬರೀಶ್ ಮೊರೆ ಹೋಗಿದ್ದಾರೆ. ನಟಿ ಜಯಪ್ರದಾ ಮತ್ತು ಅವರ ಕುಟುಂಬದಿಂದ ಅನ್ಯಾಯವಾಗಿದೆ ಎಂದು ಅವರು ವಿಡಿಯೊ ಮುಖಾಂತರ ತಿಳಿಸಿರುವ ಸಂದೇಶದಲ್ಲಿ ಆರೋಪಿಸಿದ್ಧಾರೆ.

TV9kannada Web Team

| Edited By: Apurva Kumar Balegere

Jul 27, 2021 | 5:36 PM

ಖ್ಯಾತ ನಟಿ ವಿಜಯಲಕ್ಷ್ಮಿ ಕಳೆದ ಕೆಲವು ಸಮಯದಿಂದ ತಾವು ಸಂಕಷ್ಟದಲ್ಲಿರುವುದರ ಕುರಿತು ಮಾಹಿತಿ ನೀಡಿ ಸಹಾಯವನ್ನು ಕೇಳಿದ್ದರು. ಈಗ ವಿಡಿಯೊ ಮೂಲಕ ಮನವಿ ಮಾಡಿ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರ ಸಹಾಯವನ್ನು ಯಾಚಿಸಿದ್ದಾರೆ. ವಿಜಯಲಕ್ಷ್ಮಿ ಅವರು ವಿಡಿಯೊದಲ್ಲಿ ಹೇಳಿರುವಂತೆ “ಸಹೋದರಿ ಉಷಾ ಅವರಿಗೆ ನಟಿ, ರಾಜಕಾರಣಿ ಜಯಪ್ರದಾ ಕುಟುಂಬದಿಂದ ಅನ್ಯಾಯವಾಗಿದೆ. ಯಾರೂ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಅಂಬರೀಶ್ ಅವರ ಬಳಿ ಸಹಾಯ ಕೇಳಲು ಪ್ರಯತ್ನಪಟ್ಟಿದ್ದೆ; ಸಾಧ್ಯವಾಗಲಿಲ್ಲ. ಈಗ ನನಗೆ ಉಳಿದಿರುವುದು ಒಂದೇ ದಾರಿ. ಸುಮಲತಾ ಅಂಬರೀಶ್ ಅವರು ಸಹಾಯ ಮಾಡಿದರೆ ಉಪಕಾರವಾಗುತ್ತದೆ” ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

ಕನ್ನಡದ ನಾಗಮಂಡಲ, ಸೂರ್ಯವಂಶ ಮೊದಲಾದ ಖ್ಯಾತ ಚಿತ್ರಗಳಲ್ಲಿ ಅಭಿನಯಿಸಿರುವ ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಹದಿನೈದು ವರ್ಷಗಳಿಂದ ತಮಿಳುನಾಡಿನಲ್ಲಿರುವ ಈರ್ವರೂ ಸೋದರಿಯರೂ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಉಷಾ ಅವರಿಗೆ ಜಯಪ್ರದಾ ಅವರ ಅಣ್ಣ ರಾಜ್​ಬಾಬು ಅವರಿಂದ ವಿಚ್ಛೇದನ ಪಡೆಯಲು ಪ್ರಯತ್ನಿಸುತ್ತಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಅವರಿಂದ  ಹಣಕಾಸಿನ ನೆರವೂ ಸಿಗುತ್ತಿಲ್ಲ. ಹಾಗೆಯೇ ಉಷಾ ಅವರಿಗೆ ಅವರ ಮಗುವನ್ನು ನೋಡಲೂ ಬಿಡುತ್ತಿಲ್ಲ. ಬಿಜೆಪಿಯ ರಾಜಕಾರಣಿ, ಮಹಿಳಾ ಹೋರಾಟಗಾರ್ತಿಯಾಗಿರುವ ಜಯಪ್ರದಾ ಅವರು ತಮ್ಮ ಕುಟುಂಬಕ್ಕೆ ಮಾಡಿರುವ ಅನ್ಯಾಯಕ್ಕೆ ಬಲಿಯಾಗಿದ್ದೇವೆ ಎಂದು ಆರೋಪಿಸಿರುವ ವಿಜಯಲಕ್ಷ್ಮಿ, ಸಹಾಯಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.

“ತಮಿಳು ಚಿತ್ರರಂಗದ ಹಿರಿಯರು ಸಹಾಯಕ್ಕೆ ಸ್ಪಂದಿಸದೇ ಕನ್ನಡದವರನ್ನು ಕೇಳಿ ಎನ್ನುತ್ತಾರೆ. ತಾನು ವಿಡಿಯೊದಿಂದ ಸಹಾಯ ಕೇಳಿದರೆ ಕೆಲಸ ಮಾಡಿ ಎಂದು ಜನ ಹೀಯಾಳಿಸುತ್ತಾರೆ. ಆದರೆ ತಾನು ದಿನದ 24 ಗಂಟೆಯೂ ಉಷಾ ಅವರ ಬಳಿಯಿದ್ದು ಆರೋಗ್ಯ ವಿಚಾರಿಸಬೇಕು. ಏಕೆ ಯಾರೂ ಉಷಾ ಅವರ ಪರ ಮಾತನಾಡುತ್ತಿಲ್ಲ. ಈಗಲ್ಲದೇ ಇನ್ಯಾವಾಗ ನಾವು ಇದರ ವಿರುದ್ಧ ಧ್ವನಿ ಎತ್ತುವುದು” ಎಂದು ಬಹಳ ನೋವಿನಿಂದ ಅವರು ಪ್ರಶ್ನಿಸಿದ್ದಾರೆ.

ಈ ಎಲ್ಲಾ ಕಾರಣದಿಂದ ವಿಡಿಯೊ ಮಾಡುತ್ತಿದ್ದು, ಒಂದು ವೇಳೆ ತಾನು ಸುಮಲತಾ ಅವರ ಬಳಿ ಸಹಾಯ ಕೇಳುವುದು ತಿಳಿದರೆ ಅದಕ್ಕೂ ಬಿಡುವುದಿಲ್ಲ. ಆದ್ದರಿಂದ ಈ ವಿಡಿಯೊವನ್ನು ದಯವಿಟ್ಟು ಯಾರಾದರೂ ಸುಮಲತಾ ಅವರಿಗೆ ತಲುಪಿಸಿ ಸಹಾಯ ಮಾಡಿ ಎಂದು ಅವರು ಪ್ರಾರ್ಥಿಸಿದ್ದಾರೆ. ಈ ಹಿಂದೆ ವಿಜಯಲಕ್ಷ್ಮಿಯವರು ನಟ ಶಿವರಾಜ್​ ಕುಮಾರ್ ಅವರಲ್ಲೂ ಉಷಾ ಅವರ ಚಿಕಿತ್ಸೆಗಾಗಿ ಮನವಿ ಮಾಡಿದ್ದರು.

ಇದನ್ನೂ ಓದಿ: ‘ನಾನು ಚಪ್ಪಲ್ಲಿಯಲ್ಲಿ ಹೊಡೆದೆ ಅಂತ ಜಗ್ಗೇಶ್​ ರಾಯರ ಮೇಲೆ ಆಣೆ ಮಾಡಿ ಹೇಳಲಿ’; ವಿಜಯಲಕ್ಷ್ಮಿ ಸವಾಲು

ಇದನ್ನೂ ಓದಿ: ಚಿಂತಾಜನಕ ಸ್ಥಿತಿಯಲ್ಲಿ ‘ಸೂರ್ಯವಂಶ’ ನಟಿ ವಿಜಯಲಕ್ಷ್ಮೀ ಸಹೋದರಿ; ಸಹಾಯಕ್ಕಾಗಿ ಶಿವಣ್ಣನಿಗೆ ಮನವಿ

(Well Known actress Vijayalakshmi requests Sumalatha Ambareesh to help with her sister’s health issue)

Follow us on

Related Stories

Most Read Stories

Click on your DTH Provider to Add TV9 Kannada