ಭಾವಿ ಪತ್ನಿ 3 ದಿನದಿಂದ ಫೋನ್ ಮಾಡಿಲ್ಲ ಎಂದು ಕಾನ್ಸ್ಟೇಬಲ್ ಆತ್ಮಹತ್ಯೆ
ಚನ್ನಪ್ಪ ರಾಠೋಡ್ಗೆ 5 ತಿಂಗಳ ಹಿಂದೆ ಕಕ್ಕೇರಿ ತಾಂಡಾದ ಯುವತಿ ಜತೆ ನಿಶ್ಚಿತಾರ್ಥವಾಗಿತ್ತು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಕ್ಕೇರಿ ತಾಂಡಾ ಯುವತಿ ಜೊತೆ ನಿಶ್ಚಿತಾರ್ಥ ನೆರವೇರಿತ್ತು.
ರಾಯಚೂರು: ಭಾವಿ ಪತ್ನಿ ಫೋನ್ ಮಾಡದಿದ್ದಕ್ಕೆ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೆಸರಟ್ಟಿ ತಾಂಡಾದಲ್ಲಿ ಸಂಭವಿಸಿದೆ. 28 ವರ್ಷ ವಯಸ್ಸಿನ ಕಾನ್ಸ್ಟೇಬಲ್ ಚನ್ನಪ್ಪ ರಾಠೋಡ್ ನೇಣಿಗೆ ಶರಣಾಗಿದ್ದಾರೆ. ಬೆಂಗಳೂರಿನ ಗುಪ್ತ ದಳದಲ್ಲಿ ಕಾನ್ಸ್ಟೇಬಲ್ ಆಗಿದ್ದ ಚನ್ನಪ್ಪ ಆತ್ಮಹತ್ಯೆ ಮಾಡಿಕೊಂಡವರು.
ಚನ್ನಪ್ಪ ರಾಠೋಡ್ಗೆ 5 ತಿಂಗಳ ಹಿಂದೆ ಕಕ್ಕೇರಿ ತಾಂಡಾದ ಯುವತಿ ಜತೆ ನಿಶ್ಚಿತಾರ್ಥವಾಗಿತ್ತು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಕ್ಕೇರಿ ತಾಂಡಾ ಯುವತಿ ಜೊತೆ ನಿಶ್ಚಿತಾರ್ಥ ನೆರವೇರಿತ್ತು. ಇದೀಗ, ಕಳೆದ 3 ದಿನದಿಂದ ಚನ್ನಪ್ಪ ರಾಠೋಡ್ಗೆ ಭಾವಿ ಪತ್ನಿ ಕರೆ ಮಾಡಿರಲಿಲ್ಲ. ಈ ವಿಚಾರಕ್ಕೆ ಮನನೊಂದ ಚನ್ನಪ್ಪ ರಾಠೋಡ್, ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನಪ್ಪ ರಾಠೋಡ್ ತಾಯಿ ರಾಮವ್ವ ಪೊಲೀಸರಿಗೆ ದೂರು ನೀಡಿದ್ದಾರೆ. ಲಿಂಗಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನನ್ನಿಂದಲೇ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಬಂತು; ಕ್ಷಮಿಸು ಮಾರಿಕಾಂಬ ದೇವಿ ಎಂದು ಡೆತ್ ನೋಟು ಬರೆದು ಆತ್ಮಹತ್ಯೆಗೆ ಶರಣು
Published On - 10:52 pm, Mon, 10 May 21