ಕ್ಷಣಮಾತ್ರದಲ್ಲಿ ಲಕ್ಷ ಲಕ್ಷ ಹಣ ಎಗರಿಸಿ ಪರಾರಿಯಾದ ಖತರ್ನಾಕ್ ಗ್ಯಾಂಗ್; ಬ್ಯಾಂಕ್, ಕಛೇರಿಗೆ ಬರುವ ಜನರೆ ಟಾರ್ಗೆಟ್

ಹಣ ಕಳೆದುಕೊಂಡ ಶ್ರೀನಿವಾಸ್ ಮೊಪೆಡ್ ಬೈಕ್ ನಿಲ್ಲಿಸಿ, ಅದರಲ್ಲಿ ಏನೋ ದಾಖಲೆಗಳನ್ನ ತೆಗೆದುಕೊಂಡು ಅಲ್ಲಿಂದ ಮುಂದೆ ಹೋಗುತ್ತಾರೆ. ಆತ ಮುಂದೆ ಹೋದದ್ದೆ ತಡ ಮತ್ತೊಬ್ಬ ಬಂದು ಆಕಡೆ ಈಕಡೆ ನೋಡಿ ಏನನ್ನೋ ಎತ್ತಿಕೊಳ್ಳುವವನಂತೆ ಕೆಳಗೆ ಕುಳಿತುಕೊಳ್ಳುತ್ತಾನೆ.

ಕ್ಷಣಮಾತ್ರದಲ್ಲಿ ಲಕ್ಷ ಲಕ್ಷ ಹಣ ಎಗರಿಸಿ ಪರಾರಿಯಾದ ಖತರ್ನಾಕ್ ಗ್ಯಾಂಗ್; ಬ್ಯಾಂಕ್, ಕಛೇರಿಗೆ ಬರುವ ಜನರೆ ಟಾರ್ಗೆಟ್
ಬೈಕ್​ನಲ್ಲಿ ಹಣ ಕದಿಯುತ್ತಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನೆಲಮಂಗಲ: ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ಎಷ್ಟು ಜಾಗೃತವಾಗಿದ್ದರೂ ಸಾಲದು. ಕಣ್ಣು ಮುಚ್ಚಿ ಬಿಡುವುದರೊಳಗೆ ಕೈಯಲ್ಲಿದ್ದ ಹಣ ಕಳ್ಳತನವಾಗುವ ಕಾಲ ಈಗಾಗಲೇ ಬಂದೊದಗಿದೆ. ಇದಕ್ಕೆ ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿ ಬಳಿ ನಡೆದ ಘಟನೆಯೊಂದು ಉದಾಹರಣೆಯಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಎಂಬುವವರ ಸಹಾಯಕ ಶ್ರೀನಿವಾಸ್, ಬ್ಯಾಂಕ್​ನಲ್ಲಿ ಡಿಡಿ ತೆಗೆಯಲು ತಮ್ಮ ಬೈಕ್​ನಲ್ಲಿ ಹಣ ಇಟ್ಟುಕೊಂಡಿದ್ದರು. ಸಣ್ಣ ಕರೆಕ್ಷನ್​ಗೆ ಎಂದು ಸಬ್ ರಿಜಿಸ್ಟರ್ ಆಫೀಸ್ ಬಳಿ ಬಂದು ಗಾಡಿ ನಿಲ್ಲಿಸಿ ಒಳಗೆ ಹೋದರು. ಗಾಡಿ ನಿಲ್ಲಿಸಿದ ಕೆಲವೇ ಸೆಕೆಂಡುಗಳಲ್ಲಿ ಅದರಲ್ಲಿದ್ದ 3 ಲಕ್ಷದ 20 ಸಾವಿರ ಕಾಣೆಯಾಗಿದೆ.

ಹಣ ಕಳೆದುಕೊಂಡ ಶ್ರೀನಿವಾಸ್ ಮೊಪೆಡ್ ಬೈಕ್ ನಿಲ್ಲಿಸಿ, ಅದರಲ್ಲಿ ಏನೋ ದಾಖಲೆಗಳನ್ನ ತೆಗೆದುಕೊಂಡು ಅಲ್ಲಿಂದ ಮುಂದೆ ಹೋಗುತ್ತಾರೆ. ಆತ ಮುಂದೆ ಹೋದದ್ದೆ ತಡ ಮತ್ತೊಬ್ಬ ಬಂದು ಆಕಡೆ ಈಕಡೆ ನೋಡಿ ಏನನ್ನೋ ಎತ್ತಿಕೊಳ್ಳುವವನಂತೆ ಕೆಳಗೆ ಕುಳಿತುಕೊಳ್ಳುತ್ತಾನೆ. ಸ್ಕೂಟರ್ ಪಕ್ಕ ಕುಳಿತುಕೊಂಡವನೇ ಸ್ಕೂಟರ್ ಹಿಂಭಾಗದಲ್ಲಿ ತನ್ನ ಕೈಚಳಕ ತೋರಿ ಡಿಕ್ಕಿ ಓಪನ್ ಮಾಡುತ್ತಾನೆ. ಅದರಲ್ಲಿದ್ದ ಮೂರು ಲಕ್ಷದ ಇಪ್ಪತ್ತು ಸಾವಿರ ಹಣವನ್ನ ತೆಗೆದುಕೊಂಡು ಮತ್ತೊಂದು ಬೈಕ್​ನಲ್ಲಿ ಪರಾರಿಯಾಗುತ್ತಾನೆ.

ಕೆಲವೇ ಸೆಕೆಂಡುಗಳಲ್ಲಿ ನಡೆದ ಘಟನೆ
ಇಷ್ಟೆಲ್ಲ ನಡೆದಿರುವುದು ಕೇವಲ 15 ರಿಂದ 20 ಸೆಕೆಂಡ್​ಗಳಲ್ಲಿ. ಬೈಕ್ ಬಿಟ್ಟು ಸಬ್ ರಿಜಿಸ್ಟರ್ ಕಚೇರಿಗೆ ಹೋಗಿದ್ದ ಶ್ರೀನಿವಾಸ್, ಮತ್ತೆ ವಾಪಸ್ ಬಂದು ನೋಡುವಷ್ಟರಲ್ಲಿ ಅದರಲ್ಲಿದ್ದ ಮೂರು ಲಕ್ಷದ ಇಪ್ಪತ್ತು ಸಾವಿರ ಹಣ ಕಳುವಾಗಿತ್ತು.

ಅಂಚೆಪಾಳ್ಯದ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್, ಯಾವುದೋ ಜಮಿನೋಂದರ ನೋಂದಣಿ ಸಲುವಾಗಿ ತನ್ನ ಸಹಾಯಕ ಶ್ರೀನಿವಾಸ್​ಗೆ ಹಣ ಕೊಟ್ಟು ಕಳುಹಿಸಿದ್ದರು. ಈ ನಿಟ್ಟಿನಲ್ಲಿ ಬ್ಯಾಂಕ್ ಡಿಡಿ ಕಟ್ಟಲು ಹೋಗಿದ್ದ ಶ್ರೀನಿವಾಸ್ ಸಣ್ಣ ಕರೆಕ್ಷನ್ ಒಂದರ ಸಲುವಾಗಿ ಬ್ಯಾಂಕ್​ನಿಂದ ವಾಪಸ್ ಉಪನೋಂದಣಾಧಿಕಾರಿಗಳ ಕಚೇರಿ ಬಳಿ ಬಂದು ಬೈಕ್ ನಿಲ್ಲಿಸಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಯೊಬ್ಬ ಕ್ಷಣಮಾತ್ರದಲ್ಲೆ ಬೈಕ್​ನಲ್ಲಿದ್ದ ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಶ್ರೀನಿವಾಸ್​ನನ್ನ ಸುಮಾರು ಒಂದು ಗಂಟೆಯಿಂದ ಹಿಂಬಾಲಿಸುತ್ತಿದ್ದರಂದು ತಿಳಿದುಬಂದಿದೆ. ಎರಡು ಬೈಕ್​ನಲ್ಲಿ ಬಂದಿದ್ದ ಮೂವರ ತಂಡ, ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ

ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ಮತ್ತೊಂದು ವಂಚನೆ ಪ್ರಕರಣ: ಪ್ರತಿಭಟನೆ, ರಾಜಾಜಿನಗರ ಪೊಲೀಸರಿಗೆ ದೂರು

ಅಶ್ಲೀಲ ಸಿನಿಮಾ ದಂಧೆಗೆ ಹುಡುಗಿಯರನ್ನು ಹೇಗೆ ತಳ್ಳುತ್ತಿದ್ದರು? ಯುವತಿಯರನ್ನು ಬೆಚ್ಚಿ ಬೀಳಿಸುವ ವಿವರ ಇಲ್ಲಿದೆ

(Nelamangala Natorious gang stoles lakh together money and escaped and case booked)

Click on your DTH Provider to Add TV9 Kannada