ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ಮತ್ತೊಂದು ವಂಚನೆ ಪ್ರಕರಣ: ಪ್ರತಿಭಟನೆ, ರಾಜಾಜಿನಗರ ಪೊಲೀಸರಿಗೆ ದೂರು

Brindavan Property Pvt Ltd: ಕ್ಯಾಬ್ ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್ ಮುಂತಾದವರು ಬೃಂದಾವನ ಪ್ರಾಪರ್ಟಿಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ತಾವರೆಕರೆ, ಹೆಸರಘಟ್ಟ, ನೆಲಮಂಗಲ ಭಾಗಗಳಲ್ಲಿ ನಿವೇಶನ ತೋರಿಸಿ, ದಿನೇಶ್ ಗೌಡ ಸಂಸ್ಥೆ ವಂಚನೆ ಎಸಗಿದೆ.

ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ಮತ್ತೊಂದು ವಂಚನೆ ಪ್ರಕರಣ: ಪ್ರತಿಭಟನೆ, ರಾಜಾಜಿನಗರ ಪೊಲೀಸರಿಗೆ ದೂರು
ಬೃಂದಾವನ ಪ್ರಾಪರ್ಟಿಸ್ ಕಂಪನಿ ಹೆಸರಿನಲ್ಲಿ ಕಳೆದ ಐದು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ದಿನೇಶ್ ಗೌಡ

ಬೆಂಗಳೂರು: ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ವಂಚನೆ ಎಸಗಿರುವ ಮತ್ತೊಂದು ಪ್ರಕರಣ ವರದಿಯಾಗಿದೆ. ರಾಜಾಜಿನಗರದ ಮೂರನೆ ಹಂತದ ಬೃಂದಾವನ ಪ್ರಾಪರ್ಟಿಸ್ ಸಂಸ್ಥೆಯಿಂದ ನೂರಾರು ಜನರಿಗೆ ವಂಚನೆ ನಡೆದಿದೆ ಎಂದು ವರದಿಯಾಗಿದೆ. ಐದಾರು ಲಕ್ಷ ರೂಪಾಯಿಗೆ ನಗರದ ಹೊರವಲಯದಲ್ಲಿ ಸೈಟ್ ನೀಡುವುದಾಗಿ ಸಂಸ್ಥೆಯು ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿತ್ತು.

ದಿನೇಶ್ ಗೌಡ ಎಂಬಾತ ಬೃಂದಾವನ ಪ್ರಾಪರ್ಟಿಸ್ ಕಂಪನಿ ಹೆಸರಿನಲ್ಲಿ ಕಳೆದ ಐದು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಇದೀಗ ವಂಚನೆ ಆರೋಪ ಬೆಳಕಿಗೆ ಬರುತ್ತಿದ್ದಂತೆ ಬೃಂದಾವನ ಪ್ರಾಪರ್ಟಿ ಕಚೇರಿ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದಾನೆ. ಹಣ ಹೂಡಿಕೆ ಮಾಡಿರುವ ಸಾರ್ವಜನಿಕರು ಕಂಪನಿಯ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕ್ಯಾಬ್ ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್ ಮುಂತಾದವರು ಬೃಂದಾವನ ಪ್ರಾಪರ್ಟಿಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ತಾವರೆಕರೆ, ಹೆಸರಘಟ್ಟ, ನೆಲಮಂಗಲ ಭಾಗಗಳಲ್ಲಿ ನಿವೇಶನ ತೋರಿಸಿ, ದಿನೇಶ್ ಗೌಡ ಸಂಸ್ಥೆ ವಂಚನೆ ಎಸಗಿದೆ. ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ವಂಚನೆ ಬಗ್ಗೆ ದೂರು ನೀಡುವಂತೆ ಪೊಲೀಸರು ಹೂಡಿಕೆದಾರರಿಗೆ ಸೂಚಿಸಿದ್ದಾರೆ.

sites sale Brindavan Property Pvt Ltd company cheats investors in rajajinagar bangalore

ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ಮತ್ತೊಂದು ವಂಚನೆ ಪ್ರಕರಣ: ಪ್ರತಿಭಟನೆ, ರಾಜಾಜಿಗರ ಪೊಲೀಸರಿಗೆ ದೂರು

ಅಬ್ಬಬ್ಬಾ ತರಹೇವಾರಿ ವಂಚನೆಗಳು.. ಹಾಸನದಲ್ಲಿ ಬೇಬಿ ಟ್ಯಾಂಕರ್ ಮಾಫಿಯಾ! ಸೂತ್ರಧಾರ ಕಾನ್ಸ್​ಟೇಬಲ್​ ಸೇರಿ ಐವರ ವಿರುದ್ಧ ಕೇಸ್

(sites sale Brindavan Property Pvt Ltd company cheats investors in rajajinagar bangalore)

Click on your DTH Provider to Add TV9 Kannada