ಅಬ್ಬಬ್ಬಾ ತರಹೇವಾರಿ ವಂಚನೆಗಳು.. ಹಾಸನದಲ್ಲಿ ಬೇಬಿ ಟ್ಯಾಂಕರ್ ಮಾಫಿಯಾ! ಸೂತ್ರಧಾರ ಕಾನ್ಸ್​ಟೇಬಲ್​ ಸೇರಿ ಐವರ ವಿರುದ್ಧ ಕೇಸ್

Baby Tanker Mafia in Hassan: ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ದಂಧೆ ಬಯಲಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಹಾಸನ ನಗರ ಠಾಣೆ ಪೊಲೀಸರು ಆರು ಟ್ಯಾಂಕರ್​​ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬೇಬಿ ಟ್ಯಾಂಕರ್ ಅಳವಡಿಸಿರುವುದು ಪತ್ತೆಯಾಗಿದೆ!

ಅಬ್ಬಬ್ಬಾ ತರಹೇವಾರಿ ವಂಚನೆಗಳು.. ಹಾಸನದಲ್ಲಿ ಬೇಬಿ ಟ್ಯಾಂಕರ್ ಮಾಫಿಯಾ! ಸೂತ್ರಧಾರ ಕಾನ್ಸ್​ಟೇಬಲ್​ ಸೇರಿ ಐವರ ವಿರುದ್ಧ ಕೇಸ್
ಅಬ್ಬಬ್ಬಾ ತರಹೇವಾರಿ ವಂಚನೆಗಳು.. ಹಾಸನದಲ್ಲಿ ಬೇಬಿ ಟ್ಯಾಂಕರ್ ಮಾಫಿಯಾ! ಸೂತ್ರಧಾರ ಕಾನ್ಸ್​ಟೇಬಲ್​ ಸೇರಿ ಐವರ ವಿರುದ್ಧ ಕೇಸ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 17, 2021 | 10:22 AM

ಹಾಸನ: ಹಾಸನದಲ್ಲಿ ಪೆಟ್ರೋಲ್, ಡೀಸೆಲ್ ಸರಬರಾಜು ಸೋಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಬೇಬಿ ಟ್ಯಾಂಕರ್ ಮಾಫಿಯಾ ಬಯಲಿಗೆ ಬಂದಿದೆ. ಪೊಲೀಸ್ ಕಾನ್ಸ್​ಟೇಬಲ್​ ಭಾಸ್ಕರ್ ಸೇರಿ ಐವರ ವಿರುದ್ಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಬಹುಶಃ ಕರ್ನಾಟಕವಷ್ಟೇ ಅಲ್ಲ; ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕುಕೃತ್ಯ ಬಯಲಿದೆ ಬಂದಿದೆ ಎನ್ನಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜು ಮಾಡುವ ದೊಡ್ಡ ದೊಡ್ಡ ಟ್ಯಾಂಕರುಗಳಲ್ಲಿ ಒಳಗಡೆಯಿಂಲೇ ಗುಪ್ತವಾಗಿ ಸಣ್ಣ ಟ್ಯಾಂಕರ್ ಅನ್ನು ಮೊದಲೇ ಸಿದ್ಧ ಮಾಡಿಟ್ಟುಕೊಂಡು, ಅದರಲ್ಲಿ ಇಂಧನ ಉಳಿಸಿಕೊಂಡು ಪೆಟ್ರೋಲ್​ ಬಂಕ್​ ಮಾಲೀಕರನ್ನು‌ ವಂಚಿಸುತ್ತಿದ್ದ ಜಾಲ ಇದಾಗಿದೆ.

ಹಾಸನದ HPCLನಿಂದ ತಿಪಟೂರಿಗೆ ಪೆಟ್ರೋಲ್, ಡೀಸೆಲ್ ಸರಬರಾಜು ಮಾಡುತ್ತಿದ್ದ ಟ್ಯಾಂಕರ್​ಗಳಲ್ಲಿ ಈ ಕುವ್ಯವಸ್ಥೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಕಾನ್ಸ್​ಟೇಬಲ್ ಭಾಸ್ಕರ್ ಕುಟುಂಬದ ಹಲವರ ಹೆಸರಿನಲ್ಲಿ ಈ ಟ್ಯಾಂಕರ್​ಗಳು ಚಾಲ್ತಿಯಲ್ಲಿದ್ದವು. ತಮಗೆ ಸೇರಿದ 15 ಟ್ಯಾಂಕರ್​ಗಳ ಒಳಗೆ ಈ ವಿಶಿಷ್ಟ ವಿನ್ಯಾಸ (ಪುಟ್ಟ ಬೇಬಿ ಟ್ಯಾಂಕರ್ ಜೋಡಣೆ -Baby Tanker) ಮಾಡಿಕೊಂಡಿದ್ದರು. ಬರೋಬ್ಬರಿ ತಲಾ ಒಂದು ಟ್ಯಾಂಕರ್​​ಗೆ ನೂರು ಲೀಟರ್ ಕಡಿಮೆ ಬರುತ್ತಿತ್ತು.

ಬೇಬಿ ಟ್ಯಾಂಕರ್​ನಲ್ಲಿ ಭಾರೀ ವಂಚನೆ: ಇದರ ಬಗ್ಗೆ ಅನುಮಾನಗೊಂಡ ಪೆಟ್ರೋಲ್ ಬಂಕ್ ಮಾಲೀಕರುಗಳು ಪೊಲೀಸರಿಗೆ ದೂರು ನೀಡಿದ್ದರು. ತಿಪಟೂರು ನಗರ ಠಾಣೆಯಲ್ಲಿ ಮೊದಲು ಎಫ್​ಐಆರ್ ದಾಖಲಾಗಿ, ನಂತರ ಇದೀಗ ಹಾಸನ ನಗರ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿದೆ.

ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ದಂಧೆ ಬಯಲಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಹಾಸನ ನಗರ ಠಾಣೆ ಪೊಲೀಸರು ಆರು ಟ್ಯಾಂಕರ್​​ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬೇಬಿ ಟ್ಯಾಂಕರ್ (Petrol Bunk Baby Tanker Mafia) ಅಳವಡಿಸಿರುವುದು ಪತ್ತೆಯಾಗಿದೆ!

ಹಾಸನ ನಗರ ಠಾಣೆಯ ಕಾನ್ಸ್​ಟೇಬಲ್​ ಭಾಸ್ಕರ್ (Hassan constable) ಸೇರಿ ಐವರ ವಿರುದ್ದ ಕೇಸ್ ದಾಖಲಿಸಿಕೊಂಡಿದ್ದಾರೆ. ಅನೇಕ ದಿನಗಳಿಂದ‌ ಹೀಗೆ ಕೊಟ್ಯಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಬಿಜೆಪಿ ಮಾಜಿ ಎಂ​ಎಲ್​ಸಿ ಅಶ್ವಥ್ ನಾರಾಯಣ್ 12 ಕೋಟಿ ಸಾಲ ಕಟ್ಟಿಲ್ಲ -ಠೇವಣಿದಾರರ ಅಳಲು

(HPCL Petrol Bunk Baby Tanker Mafia in Hassan 5 booked including constable)

Published On - 10:03 am, Sat, 17 July 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್