ಕೊರೊನಾ ತೊಲಗಲಿ ಎಂದು ದೇವರ ಮೊರೆಹೋದ ಶಾಸಕ ಗೂಳಿಹಟ್ಟಿ ಶೇಖರ್!

ಕೊರೊನಾ ತೊಲಗಲಿ ಎಂದು ಬಿಜೆಪಿಯ ಈ ಶಾಸಕ ದೇವರ ಮೊರೆ ಹೋಗಿದ್ದಾರೆ. ಜೊತೆಗೆ ರಾಜ್ಯದ ಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಕೊರೊನಾ ತೊಲಗಲಿ ಎಂದು ದೇವರ ಮೊರೆಹೋದ ಶಾಸಕ ಗೂಳಿಹಟ್ಟಿ ಶೇಖರ್!
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹಂಚಿಕೊಂಡಿರುವ ಚಿತ್ರ


ಚಿತ್ರದುರ್ಗ: ಹೊಸದುರ್ಗದ ಬಿಜೆಪಿ ಶಾಸಕ‌ ಗೂಳಿಹಟ್ಟಿ ಶೇಖರ್ ಕೊರೊನಾ ಸಾಂಕ್ರಾಮಿಕವು ತೊಲಗಲಿ ಎಂದು ದೇವರ ಮೊರೆ ಹೋಗಿದ್ದಾರೆ. ಕಂಚೀಪುರ ಗ್ರಾಮದ ದಶರಥ ರಾಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಅವರು ಜಗತ್ತಿಗೆ ಆವರಿಸಿರುವ ಸಮಸ್ಯೆಯು ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರು. ಕೊರೊನಾ ತೊಲಗಲಿ, ಸಮೃದ್ಧ ಮಳೆ- ಬೆಳೆಯಾಗಲೆಂದು  ಅವರು ಪ್ರಾರ್ಥನೆ ಸಲ್ಲಿಸಿದರು. ಕಂಚೀಪುರವು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಗೂಳಿಹಟ್ಟಿ ಶೇಖರ್ ಕೊರೊನಾ ಸಂಕಷ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ್ದರು. ಇತ್ತೀಚೆಗೆ ಬಗರ್​ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ನೀಡಿದ್ದ ಸೂಚನೆ ಸುದ್ದಿಯಾಗಿತ್ತು. ಹೊಸದುರ್ಗ ತಾಲೂಕಿನ ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿರುವ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಅವರು ಹೇಳಿದ್ದರು ಮತ್ತು ಅದನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ಗೂಳಿಹಟ್ಟಿ ಶೇಖರ್ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್:

ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ; ಹಲವೆಡೆ ರೆಡ್​, ಆರೆಂಜ್ ಅಲರ್ಟ್​

ಇದನ್ನೂ ಓದಿ: ಕೋವಿಡ್​ನಿಂದ ನೇರ ದರ್ಶನ ಸಾಧ್ಯವಿಲ್ಲ;​ ಜಿಯೊ ಟೀವಿಯಲ್ಲಿ ಅಮರನಾಥ ಆರತಿಯ ನೇರಪ್ರಸಾರ ಕಣ್ತುಂಬಿಕೊಳ್ಳಿ, ಪೂಜೆ-ಹವನಗಳಲ್ಲಿ ಪಾಲ್ಗೊಳ್ಳಿ

(BJP MLA Gulihatty D Shekhar prays for end of Corona Virus)