AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್​ನಿಂದ ನೇರ ದರ್ಶನ ಸಾಧ್ಯವಿಲ್ಲ;​ ಜಿಯೊ ಟೀವಿಯಲ್ಲಿ ಅಮರನಾಥ ಆರತಿಯ ನೇರಪ್ರಸಾರ ಕಣ್ತುಂಬಿಕೊಳ್ಳಿ, ಪೂಜೆ-ಹವನಗಳಲ್ಲಿ ಪಾಲ್ಗೊಳ್ಳಿ

Amarnath Aarti 2021: ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದ ಈ ವರ್ಷ ಲಕ್ಷಾಂತರ ಜನರಿಗೆ ಪವಿತ್ರ ಶ್ರೀ ಅಮರನಾಥ ಗುಹಾಲಿಂಗ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇವಸ್ಥಾನ ಸಮಿತಿಯು ವರ್ಚುವಲ್‌ ವಿಧಾನದಲ್ಲಿ ದರ್ಶನ, ಹವನ ಮತ್ತು ಪ್ರಸಾದದ ಸೌಲಭ್ಯವನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿದೆ. ದರ್ಶನ, ಹವನ, ಪ್ರಸಾದ ಮತ್ತು ಅರ್ಚಕರನ್ನೂ ಭಕ್ತರು ಆನ್‌ಲೈನ್‌ನಲ್ಲಿಯೇ ತಮ್ಮ ಹೆಸರಿನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ. ನಂತರ ಪ್ರಸಾದವನ್ನು ಅವರ ಮನೆಬಾಗಿಲಿಗೆ ತಲುಪಿಸಲಾಗುವುದು.

ಕೋವಿಡ್​ನಿಂದ ನೇರ ದರ್ಶನ ಸಾಧ್ಯವಿಲ್ಲ;​ ಜಿಯೊ ಟೀವಿಯಲ್ಲಿ ಅಮರನಾಥ ಆರತಿಯ ನೇರಪ್ರಸಾರ ಕಣ್ತುಂಬಿಕೊಳ್ಳಿ, ಪೂಜೆ-ಹವನಗಳಲ್ಲಿ ಪಾಲ್ಗೊಳ್ಳಿ
ಕೋವಿಡ್​ನಿಂದ ನೇರ ದರ್ಶನ ಸಾಧ್ಯವಿಲ್ಲ;​ ಜಿಯೊ ಟೀವಿಯಲ್ಲಿ ಅಮರನಾಥ ಆರತಿಯ ನೇರಪ್ರಸಾರ ಕಣ್ತುಂಬಿಕೊಳ್ಳಿ, ಪೂಜೆ-ಹವನಗಳಲ್ಲಿ ಪಾಲ್ಗೊಳ್ಳಿ
TV9 Web
| Updated By: ಸಾಧು ಶ್ರೀನಾಥ್​|

Updated on: Jul 17, 2021 | 9:22 AM

Share

ಜಮ್ಮು: ದೂರ ಸಂಪರ್ಕ ಸೇವಾ ಸಂಸ್ಥೆ ರಿಲಯನ್ಸ್ ಜಿಯೊದ ಜಿಯೊ ಟೀವಿ, ಶ್ರೀ ಅಮರನಾಥ ದೇಗುಲದ ಆರತಿಯನ್ನು (Amarnath Aarti 2021) ನೇರಪ್ರಸಾರವನ್ನು ಮಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಕ್ತರು ಈ ಪವಿತ್ರ ದೇವಾಲಯಕ್ಕೆ ನೇರವಾಗಿ ಭೇಟಿ ನೀಡಿ ದರ್ಶನ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಭಕ್ತರಿಗೆ ನೆರವಾಗಲು ಜಿಯೊ ಟೀವಿ ಈ ನೇರಪ್ರಸಾರ ಮಾಡುತ್ತಿದೆ.

ಕಡಿದಾದ ಭೂಪ್ರದೇಶ ಮತ್ತು ಸವಾಲಿನ ಪರಿಸ್ಥಿತಿಯಲ್ಲಿಯೂ ಕಂಪನಿಯು (Reliance Jio), ನೇರಪ್ರಸಾರಕ್ಕೆ ಅಗತ್ಯವಿರುವ ನೆಟ್‌ವರ್ಕ್‌ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಅತ್ಯಲ್ಪ ಅವಧಿಯಲ್ಲಿಯೇ ಸ್ಥಾಪಿಸಿದೆ.

ಭಕ್ತರಿಗೆ ನೇರವಾಗಿ ಬಂದು ದರ್ಶನ ಪಡೆದಷ್ಟೇ ಒಳ್ಳೆಯ ಅನುಭವ ಕೊಡುವ ನಿಟ್ಟಿನಲ್ಲಿ, ಶ್ರೀ ಅಮರನಾಥ ದೇವಾಲಯ ಸಮಿತಿಯ ಆರಂಭಿಸಿದ ವಿವಿಧ ಆನ್‌ಲೈನ್‌ ಸೇವೆಗಳನ್ನು ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕ ರೋಗದ (COVID-19) ಕಾರಣದಿಂದ ಈ ವರ್ಷ ಲಕ್ಷಾಂತರ ಜನರಿಗೆ ಪವಿತ್ರ ಶ್ರೀ ಅಮರನಾಥ ಗುಹಾಲಿಂಗ ದೇಗುಲಕ್ಕೆ (Shri Amarnathji Shrine) ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇವಸ್ಥಾನ ಸಮಿತಿಯು (Shri Amarnathji Shrine Board -SASB) ವರ್ಚುವಲ್‌ ವಿಧಾನದಲ್ಲಿ ದರ್ಶನ, ಹವನ ಮತ್ತು ಪ್ರಸಾದದ ಸೌಲಭ್ಯವನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿದೆ. ದರ್ಶನ, ಹವನ, ಪ್ರಸಾದ ಮತ್ತು ಅರ್ಚಕರನ್ನೂ ಭಕ್ತರು ಆನ್‌ಲೈನ್‌ನಲ್ಲಿಯೇ ತಮ್ಮ ಹೆಸರಿನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ. ನಂತರ ಪ್ರಸಾದವನ್ನು ಅವರ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ದೇವಸ್ಥಾನ ಸಮಿತಿಯ ವಕ್ತಾರರು ತಿಳಿಸಿದ್ದಾರೆ.

ಆನ್‌ಲೈನ್‌ ಸೇವೆಯನ್ನು ಆರಂಭಿಸಿರುವ ಕಾರಣ ವಿಶ್ವದಾದ್ಯಂತ ಇರುವ ಶಿವನ ಭಕ್ತರು ಆನ್‌ಲೈನ್‌ನಲ್ಲಿಯೇ ಪೂಜೆ, ಹವನಗಳನ್ನು ಮಾಡಿಸುತ್ತಿದ್ದಾರೆ. ಈಗ ರಿಲಯನ್ಸ್ ಜಿಯೊ, ಜಿಯೊ ಟೀವಿಯಲ್ಲಿ ಅಮರನಾಥ ದೇಗುಲದ ಆರತಿಯ ನೇರಪ್ರಸಾರವನ್ನು ಪರಿಚಯಿಸುವ ಮೂಲಕ ಭಕ್ತರಿಗೆ ತನ್ಮಯಗೊಳಿಸುವ ಅನುಭವ ನೀಡುತ್ತಿದೆ. ವಿವಿಧ ಆಪ್‌ಗಳ ಮೂಲಕ ಒದಗಿಸಲಾಗುವ ಈ ಸೇವೆಯಿಂದ ದೇಶದಾದ್ಯಂತ ಲಕ್ಷಾಂತರ ಭಕ್ತರಿಗೆ ಸಹಾಯವಾಗಲಿದೆ.

ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ 2021ರ ಅಮರನಾಥ ಯಾತ್ರೆಯನ್ನು ಅಮರನಾಥ ದೇಗುಲ ಸಮಿತಿಯು ರದ್ದುಗೊಳಿಸಿತ್ತು. ಹಾಗಾಗಿ ಭಕ್ತರು ಈ ವರ್ಷ ಈ ಪವಿತ್ರ ಯಾತ್ರಾಸ್ಥಳದ ದರ್ಶನ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಭಕ್ತರು ಈ ಯಾತ್ರಾಸ್ಥಳದ ಜೊತೆಗಿನ ಸಂಬಂಧವನ್ನು ಮುಂದುವರಿಸುವ ನಿಟ್ಟಿನಲ್ಲಿ ಜಿಯೊ ಡಿಜಿಟಲ್‌ ಲೈಫ್ ಬೆಂಬಲದೊಂದಿಗೆ ಜಿಯೊ ಸಂಸ್ಥೆಯು ಆರತಿಯ ನೇರಪ್ರಸಾರ ಆರಂಭಿಸಿದೆ. ಜಿಯೊ ಟೀವಿಯಲ್ಲಿ ಈ ನೇರಪ್ರಸಾರವಾಗುತ್ತಿದ್ದು, ಜಿಯೊಮೀಟ್‌ನ ಮೂಲಕ ಭಕ್ತರು ತಮ್ಮ ಅರ್ಚಕರ ಜೊತೆಯಲ್ಲಿ ದೇಗುಲದ ವರ್ಚುವಲ್‌ ಪೂಜಾಕೊಠಡಿಯಲ್ಲಿ ಸೇರಿ, ಅವರ ಹೆಸರು ಮತ್ತು ಗೋತ್ರಗಳನ್ನು ಹೇಳಿ ಹವನ, ಪೂಜೆ ನಡೆಸಲು ಸಾಧ್ಯವಿದೆ.

ಇದಲ್ಲದೆ, ಜಿಯೊ ಸಾವ್‌ನಲ್ಲಿ ಶ್ರೀ ಅಮರನಾಥ ದೇವರ ಭಜನೆ, ಭಕ್ತಿಗೀತೆಗಳನ್ನು ಒಳಗೊಂಡ ‘ಚಲೋ ಅಮರನಾಥ್’ ಎಂಬ ಪ್ಲೇಲಿಸ್ಟ್ ಕೂಡ ಲಭ್ಯವಿದೆ. ಜಿಯೊ ಚಾಟ್‌ನಲ್ಲಿರುವ ಅಮರನಾಥ ದರ್ಶನ ವಾಹಿನಿಯು ನೇರಪ್ರಸಾರ, ಆರತಿಯ ಸಮಯ, ಕೊಡುಗೆಗಳು ಮತ್ತು ದೇಣಿಗೆಯನ್ನು ಸಲ್ಲಿಸುವ ವಿಧಾನಗಳ ಕುರಿತಾದ ಮಾಹಿತಿ ಲಭ್ಯವಿದೆ. ಅಲ್ಲದೆ ಆರತಿಯ ನೇರ ಮತ್ತು ಮುದ್ರಿತ ಪ್ರಸಾರಗಳೂ ಇರುತ್ತವೆ.

‘ಬಹಳ ಕಷ್ಟಕರವಾದ ಪ್ರದೇಶದಲ್ಲಿ, ಸವಾಲಿನ ಪರಿಸ್ಥಿತಿಯಲ್ಲಿ, ಜಿಯೊ ಮೂಲಭೂತ ಸೌಕರ್ಯಗಳು, ವ್ಯವಸ್ಥೆ ಮತ್ತು ಆರತಿಯ ನೇರಪ್ರಸಾರಕ್ಕೆ ಅಗತ್ಯವಿರುವ ಬ್ಯಾಂಡ್‌ವಿಡ್ತ್‌ಗಳನ್ನು ಸ್ಥಾಪಿಸಿದೆ. ಬೇರೆ ಬೇರೆ ಫ್ಲಾಟ್‌ಫಾರಂಗಳಲ್ಲಿ ಮತ್ತು ಆಪ್‌ಗಳ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಜಿಯೊ ಇಷ್ಟೊಂದು ಒಳ್ಳೆಯ ಸೇವೆಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ’ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಲೈವ್ ಮತ್ತು ಕ್ಯಾಚ್-ಅಪ್ ಟೀವಿ ಅಪ್ಲಿಕೇಶನ್ ಆದ ಜಿಯೋ ಟೀವಿ, 650ಕ್ಕೂ ಹೆಚ್ಚು ವಿವಿಧ ಪ್ರಕಾರಗಳ ವಾಹಿನಿಗಳನ್ನು ಹೊಂದಿದೆ. ದೇಗುಲದಿಂದ ಆರತಿಯ ನೇರಪ್ರಸಾರ ಮಾಡಲಿಕ್ಕಾಗಿಯೇ ಜಿಯೊಟೀವಿಯಲ್ಲಿ ಶ್ರೀ ಅಮರನಾಥ ದೇಗುಲ ಸಮಿತಿಯು ದರ್ಶನ ವಾಹಿನಿಯನ್ನು ಪರಿಚಯಿಸಿದೆ.

ನಿರ್ದಿಷ್ಟ ಸಮಯದಲ್ಲಿ ವೀಕ್ಷಕರು ಆರತಿಯ ನೇರಪ್ರಸಾರವನ್ನು ವೀಕ್ಷಿಸಬಹುದು. ಮುದ್ರಿತ ಕಾರ್ಯಕ್ರಮವನ್ನು ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಜಿಯೊಟೀವಿಯಲ್ಲಿ ವೀಕ್ಷಿಸಬಹುದಾಗಿದೆ. ಪ್ರತಿದಿನ ಬೆಳಿಗ್ಗೆ 6ರಿಂದ 6.30 ಮತ್ತು ಸಂಜೆ 5ರಿಂದ 5.30ಕ್ಕೆ ಎರಡು ಮಹಾ ಆರತಿಗಳು ನಡೆಯುತ್ತವೆ.

ಆನ್‌ಲೈನ್‌ನಲ್ಲಿ ಅಮರನಾಥಲಿಂಗದ ದರ್ಶನ ಪಡೆಯಲು, ತಮ್ಮ ಹೆಸರಿನಲ್ಲಿ ಫೂಜೆ ಮಾಡಿಸಲು ಭಕ್ತರು, ದೇವಸ್ಥಾನದ ಸಮಿತಿಯ ಮೊಬೈಲ್‌ ಆಪ್‌ನಲ್ಲಿ  shriamarnathjishrine ವೆಬ್‌ಸೈಟ್‌ನಲ್ಲಿ Book Online Pooja / Hawan / Prasad ವಿಭಾಗಕ್ಕೆ ಭೇಟಿ ನೀಡಬೇಕು. ಬುಕ್ಕಿಂಗ್ ಪ್ರಕ್ರಿಯೆಗಳು ಮುಗಿದ ನಂತರ ಭಕ್ತರಿಗೆ ಜಿಯೊಮೀಟ್‌ನ ವರ್ಚುವಲ್‌ ರೂಮ್‌ನ ಲಿಂಕ್‌ ಅನ್ನು ಕಳಿಸಿಕೊಡಲಾಗುತ್ತದೆ. ನಿಗದಿಪಡಿಸಿದ ಸಮಯಕ್ಕೆ ಭಕ್ತರು ಆ ರೂಮ್‌ಗೆ ಜಾಯಿನ್ ಆಗಿ ಅರ್ಚಕರು ನಡೆಸುವ ಪೂಜೆ, ಹವನಗಳಲ್ಲಿ ಭಾಗಿಯಾಗಬಹುದು.

(Reliance Jio brings live Amarnath Aarti 2021 on Jio TV due to COVID-19 restrictions)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!