ಭಾರತ ನೌಕಾಪಡೆಗೆ ಎರಡು ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​​ಗಳನ್ನು ಹಸ್ತಾಂತರ ಮಾಡಿದ ಯುಎಸ್​ ನೌಕಾಪಡೆ..

ಎಂಎಚ್​ 60 ಮಲ್ಟಿ ರೋಲ್​ ಹೆಲಿಕಾಪ್ಟರ್​ಗಳನ್ನು ಭಾರತಕ್ಕೆ ಔಪಚಾರಿಕವಾಗಿ ಹಸ್ತಾಂತರಿಸುವ ಸಮಾರಂಭ ಶುಕ್ರವಾರ ಅಮೆರಿಕದ ನೌಕಾನೆಲೆಯ ಉತ್ತರ ದ್ವೀಪ ಏರ್​ಸ್ಟೇಶನ್​ (NAS North Island)ನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಯುಎಸ್​ನ ಭಾರತದ ರಾಯಭಾರಿ ತಾರಾಂಜಿತ್​ ಸಂಧು ಹಾಜರಿದ್ದರು.

ಭಾರತ ನೌಕಾಪಡೆಗೆ ಎರಡು ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​​ಗಳನ್ನು ಹಸ್ತಾಂತರ ಮಾಡಿದ ಯುಎಸ್​ ನೌಕಾಪಡೆ..
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 17, 2021 | 9:51 AM

ಭಾರತ-ಯುಎಸ್​ ರಕ್ಷಣಾ ಸಂಬಂಧವನ್ನು ದೃಢಗೊಳಿಸುವ ಸಂಕೇತವಾಗಿ ಯುಎಸ್​ ನೌಕಾಪಡೆ (US Navy), ಭಾರತದ ನೌಕಾಪಡೆ (Indian Navy) ಗೆ ಎರಡು ಎಂಎಚ್​ 60 ಮಲ್ಟಿ ರೋಲ್​ ಹೆಲಿಕಾಪ್ಟರ್( MH-60R Multi Role Helicopters) ​​ಗಳನ್ನು ಹಸ್ತಾಂತರಿಸಿದೆ. ವಿದೇಶಿ ಮಿಲಿಟರಿ ಸೇಲ್​ನಡಿ ಯುಎಸ್​ನ ಲಾಕ್​ಹೀಡ್​ ​ಮಾರ್ಟಿನ್​ ಕಂಪನಿಯಿಂದ ಈ ಎಂಎಚ್​ 60 ಮಲ್ಟಿ ರೋಲ್​ ಹೆಲಿಕಾಪ್ಟರ್​ಗಳು ತಯಾರಿತವಾಗಿದ್ದು, ಭಾರತ 2.4 ಬಿಲಿಯನ್​ ಡಾಲರ್​ವೆಚ್ಚದಲ್ಲಿ ಒಟ್ಟು 24 ಹೆಲಿಕಾಪ್ಟರ್​ಗಳನ್ನು ಯುಎಸ್​ನಿಂದ ಖರೀದಿ ಮಾಡಿದೆ. ಅದರ ಮೊದಲ ಹಂತದಲ್ಲಿ ಎರಡು ಹೆಲಿಕಾಪ್ಟರ್​ಗಳು ಭಾರತದ ನೌಕಾಪಡೆಯನ್ನು ಸೇರಿಕೊಂಡಿವೆ.

ಎಂಎಚ್​ 60 ಮಲ್ಟಿ ರೋಲ್​ ಹೆಲಿಕಾಪ್ಟರ್​ಗಳನ್ನು ಭಾರತಕ್ಕೆ ಔಪಚಾರಿಕವಾಗಿ ಹಸ್ತಾಂತರಿಸುವ ಸಮಾರಂಭ ಶುಕ್ರವಾರ ಅಮೆರಿಕದ ನೌಕಾನೆಲೆಯ ಉತ್ತರ ದ್ವೀಪ ಏರ್​ಸ್ಟೇಶನ್​ (NAS North Island)ನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಯುಎಸ್​ನ ಭಾರತದ ರಾಯಭಾರಿ ತಾರಾಂಜಿತ್​ ಸಂಧು ಹಾಜರಿದ್ದರು. ಎರಡು ಹೆಲಿಕಾಪ್ಟರ್​ಗಳ ವರ್ಗಾವಣೆ ಬಳಿಕ ಟ್ವೀಟ್​ ಮಾಡಿದ ಸಂಧು, ಭಾರತ ಮತ್ತು ಯುಎಸ್​ ಸ್ನೇಹ ಆಕಾಶವನ್ನು ಸ್ಪರ್ಶಿಸುತ್ತಿದೆ ಎಂದು ಹೇಳಿದ್ದಾರೆ. ಈ ಎರಡೂ ದೇಶಗಳು ಕೇವಲ ರಕ್ಷಣಾ ವ್ಯಾಪಾರವಷ್ಟೇ ಅಲ್ಲ, ರಕ್ಷಣಾ ಕ್ಷೇತ್ರದಲ್ಲಿ ಸಹ-ಉತ್ಪಾದನೆ, ಸಹ-ಅಭಿವೃದ್ಧಿಯಲ್ಲೂ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ತಿಳಿಸಿದ್ದಾರೆ.

ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​ ವಿಶೇಷತೆಗಳು ಈ ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​ಗಳು ಮುಖ್ಯವಾಗಿ ಎಲ್ಲ ರೀತಿಯ ಹವಾಮಾನದಲ್ಲೂ ಕಾರ್ಯಾಚರಣೆ ನಡೆಸಬಹುದಾದ ಹೆಲಿಕಾಪ್ಟರ್​​ಗಳು. ಅತ್ಯಾಧುನಿಕ ಏಚಿಯಾನಿಕ್ಸ್​ಗಳನ್ನು ಒಳಗೊಂಡಿದ್ದು, ಹಲವು ರೀತಿಯ ವಿಶಿಷ್ಟು ಉಪಕರಣಗಳು, ಶಸ್ತ್ರಾಸ್ತ್ರಗಳನ್ನು ಸೇರಿಸಿ ನಿರ್ಮಾಣ ಮಾಡಲಾಗಿದೆ. ಸದ್ಯ ಭಾರತದ ಮೊದಲ ಬ್ಯಾಚ್​ನ ಸಿಬ್ಬಂದಿ ಯುಎಸ್​ನಲ್ಲಿ ಹೆಲಿಕಾಪ್ಟರ್​ ಸಂಬಂಧಿತ ತರಬೇತಿ ಪಡೆಯುತ್ತಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್​​​ ಅವರು 2020ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಒಂದು ವಾರ ಮೊದಲು ಈ ಹೆಲಿಕಾಪ್ಟರ್​ ಖರೀದಿ ವ್ಯವಹಾರ ಪೂರ್ಣಗೊಂಡಿತ್ತು.

ಇದನ್ನೂ ಓದಿ: Gold Rate Today: ಪ್ರೀತಿಪಾತ್ರರಿಗಾಗಿ ಚಿನ್ನ ಖರೀದಿಸಲು ಯೋಚಿಸುತ್ತಿದ್ದೀರಾ? ಚಿನ್ನದ ದರದಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ಪರಿಶೀಲಿಸಿ

US Navy handed over the first 2 MH-60R Multi Role Helicopters to the Indian Navy

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್