ಬೋಲ್ಡ್ ಲುಕ್ನಲ್ಲಿ ಮಿಂಚುತ್ತಿದ್ದಾರೆ ಕಂಗನಾ; ಇಲ್ಲಿದೆ ಅವರ ಹಾಟ್ ಫೋಟೋಗಳು
ಹಲವು ಕಾಂಟ್ರವರ್ಶಿಯಲ್ ಸೆಲೆಬ್ರಿಟಿಗಳು ಈ ಶೋನ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಈ ರಿಯಾಲಿಟಿ ಶೋ ದಿನ ಕಳೆದಂತೆ ನಿರೀಕ್ಷೆ ಹೆಚ್ಚುತ್ತಿದೆ. ಕಂಗನಾ ರಣಾವತ್ ನಿರೂಪಣೆಗೆ ಒಂದು ಅಭಿಮಾನಿ ವರ್ಗ ಮೆಚ್ಚುಗೆ ಸೂಚಿಸುತ್ತಿದೆ.
Updated on: Mar 22, 2022 | 6:00 AM

ಕಂಗನಾ ರಣಾವತ್ ಅವರು ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರನ್ನು ಹೊಗಳುವುದಕ್ಕಿಂತ ಟೀಕೆ ಮಾಡುವವರೇ ಹೆಚ್ಚು. ಈಗ ಅವರು ‘ಲಾಕ್ ಅಪ್’ ಹೆಸರಿನ ಶೋ ಹೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಶೋ ಒಟಿಟಿ ಪ್ಲಾಟ್ಫಾರ್ಮ್ ‘ಆಲ್ಟ್ ಬಾಲಾಜಿ‘ಯಲ್ಲಿ ಪ್ರಸಾರ ಆರಂಭಿಸಿದೆ.

ಹಲವು ಕಾಂಟ್ರವರ್ಶಿಯಲ್ ಸೆಲೆಬ್ರಿಟಿಗಳು ಈ ಶೋನ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಈ ರಿಯಾಲಿಟಿ ಶೋ ದಿನ ಕಳೆದಂತೆ ನಿರೀಕ್ಷೆ ಹೆಚ್ಚುತ್ತಿದೆ. ಕಂಗನಾ ರಣಾವತ್ ನಿರೂಪಣೆಗೆ ಒಂದು ಅಭಿಮಾನಿ ವರ್ಗ ಮೆಚ್ಚುಗೆ ಸೂಚಿಸುತ್ತಿದೆ.

ಕಂಗನಾ ಭಿನ್ನ ಉಡುಗೆ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಅವರ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಕಂಗನಾ ಇದೇ ಮೊದಲ ಬಾರಿಗೆ ಒಂದು ಶೋಅನ್ನು ನಡೆಸಿಕೊಡುತ್ತಿದ್ದಾರೆ. ಅವರು ನಟನೆಯಲ್ಲಿ ಸಾಕಷ್ಟು ಪಳಗಿದ್ದಾರೆ. ಜತೆಗೆ ನಿರೂಪಣೆಯನ್ನೂ ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ.

ಬಿಗ್ ಬಾಸ್ ಮನೆಯ ರೀತಿಯಲ್ಲೇ ಜೈಲ್ ಸೆಟ್ಅನ್ನು ಹಾಕಲಾಗಿದೆ. ಒಟ್ಟು 72 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯಲಿದೆ. ಅಂತಿಮವಾಗಿ ಯಾರು ಇದನ್ನು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ.

ಕಪ್ಪು ಉಡುಗೆಯಲ್ಲಿ ಕಂಗನಾ ರಣಾವತ್

ಕಪ್ಪು ಉಡುಗೆಯಲ್ಲಿ ಕಂಗನಾ ರಣಾವತ್



















