ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್ ಮತ್ತು ಡೆವಾಲ್ಡ್ ಬ್ರೂವಿಸ್ ಆಡಲಿದ್ದಾರೆ. ಸೂರ್ಯಕುಮಾರ್ ಮತ್ತು ಪೊಲಾರ್ಡ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ ಮುಂಬೈ ಪೊಲಾರ್ಡ್ ಗೆ 6 ಕೋಟಿ ಹಾಗೂ ಸೂರ್ಯಕುಮಾರ್ ಗೆ 8 ಕೋಟಿ ರೂ. ನೀಡಿದೆ. ಯುವ ಆಟಗಾರ ಬ್ರಾವಿಸ್ ಆಟದ ಶೈಲಿ ಎಬಿ ಡಿವಿಲಿಯರ್ಸ್ ಅವರಂತೆಯೇ ಇದೆ. ಹೀಗಾಗಿ ಇವರ ಮೇಲು ಹೆಚ್ಚಿನ ಭರವಸೆ ಇಡಲಾಗಿದೆ.