- Kannada News Photo gallery Cricket photos IPL most wicket takers lasith malinga indian premier league
IPL Most Wickets: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್‌ಗಳು ಇವರೆ ನೋಡಿ
IPL Most Wickets: ಐಪಿಎಲ್ ಇತಿಹಾಸದಲ್ಲಿ ಲಸಿತ್ ಮಾಲಿಂಗ ಅತಿ ಹೆಚ್ಚು 170 ವಿಕೆಟ್ ಪಡೆದಿದ್ದಾರೆ. ಮಾಲಿಂಗ ಪ್ರಸ್ತುತ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.
Updated on: Mar 21, 2022 | 7:47 PM

IPL 2022 ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ ಮತ್ತು ಅದಕ್ಕೂ ಮೊದಲು ಪ್ರತಿಯೊಬ್ಬ ಅಭಿಮಾನಿಗಳು ತಿಳಿದುಕೊಳ್ಳಬೇಕಾದ ಕೆಲವು ಅಂಕಿಅಂಶಗಳಿವೆ. ಟಿ20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಹೊಂದಿದ್ದರೂ, ಬೌಲರ್‌ಗಳು ಪಂದ್ಯವನ್ನು ತಿರುಗಿಸುವಲ್ಲಿ ನಿಷ್ಣಾತರಾಗಿದ್ದಾರೆ. ಬೌಲಿಂಗ್‌ನಲ್ಲಿ ತನ್ನ ಛಾಪು ಮೂಡಿಸಿದ ಆಟಗಾರ ಯಾರು? ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು ಯಾರು? ಇಲ್ಲಿದೆ ವಿವರ.

ಐಪಿಎಲ್ ಇತಿಹಾಸದಲ್ಲಿ ಲಸಿತ್ ಮಾಲಿಂಗ ಅತಿ ಹೆಚ್ಚು 170 ವಿಕೆಟ್ ಪಡೆದಿದ್ದಾರೆ. ಮಾಲಿಂಗ ಪ್ರಸ್ತುತ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಈ ಲೀಗ್‌ನಲ್ಲಿ ಅವರ ಪ್ರದರ್ಶನ ಅದ್ಭುತವಾಗಿದೆ. ಮಾಲಿಂಗ ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ ಕೇವಲ 7.14 ರನ್ ಆಗಿತ್ತು.

ಡ್ವೇನ್ ಬ್ರಾವೋ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬ್ರಾವೋ ಐಪಿಎಲ್‌ನಲ್ಲಿ 167 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರು ಮಾಲಿಂಗ ಅವರ ವಿಶ್ವ ದಾಖಲೆಯನ್ನು ಮುರಿಯಬಹುದು.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದವರ ವಿಷಯದಲ್ಲಿ ಅಮಿತ್ ಮಿಶ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಮಿಶ್ರಾ 154 ಪಂದ್ಯಗಳಲ್ಲಿ 166 ವಿಕೆಟ್ ಪಡೆದಿದ್ದಾರೆ. ಮಿಶ್ರಾ ಇನ್ನಿಂಗ್ಸ್ ಒಂದರಲ್ಲಿ ಐದು ವಿಕೆಟ್ ಕಬಳಿಸಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಪಿಯೂಷ್ ಚಾವ್ಲಾ ಇದ್ದು, ಅವರು 157 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚಾವ್ಲಾ 7.88 ಎಕಾನಮಿ ದರದಲ್ಲಿ ರನ್ ನೀಡಿದ್ದಾರೆ.

ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ದಿಗ್ಗಜರನ್ನು ಸರಿಗಟ್ಟಲು ಆರ್ ಅಶ್ವಿನ್‌ಗೆ ಕೇವಲ 5 ವಿಕೆಟ್‌ಗಳ ಅಗತ್ಯವಿದೆ.




