‘ಜೇಮ್ಸ್​’ ಸಕ್ಸಸ್​ಮೀಟ್​ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ

‘ಜೇಮ್ಸ್​’ ಸಕ್ಸಸ್​ಮೀಟ್​ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 24, 2022 | 8:08 PM

ಮುಂಬರುವ ದಿನಗಳಲ್ಲಿ ಈ ಚಿತ್ರ ಮತ್ತಷ್ಟು ಹಣ ಬಾಚುವ ಸಾಧ್ಯತೆ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಪರಭಾಷೆಯವರೂ ಕೂಡ ಚಿತ್ರದ ಗಳಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಖುಷಿಯನ್ನು ಹಂಚಿಕೊಳ್ಳೋಕೆ ಬೆಂಗಳೂರಿನಲ್ಲಿ ಚಿತ್ರತಂಡ ಸಕ್ಸಸ್​ ಮೀಟ್ ಆಯೋಜಿಸಿದೆ.

ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದ ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಬಾಕ್ಸ್ ಆಫೀಸ್​ನಲ್ಲಿ ಅಕ್ಷರಶಃ ಅಬ್ಬರಿಸಿದೆ. ಈ ಚಿತ್ರ ನಾಲ್ಕೇ ದಿನಕ್ಕೆ ವಿಶ್ವ ಮಟ್ಟದ ಕಲೆಕ್ಷನ್​ನಲ್ಲಿ 100 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಈ ಮೂಲಕ ಅಪ್ಪು ಶತಕದ ಸರದಾರರಾಗಿದ್ದಾರೆ. ಪುನೀತ್​ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್ (James Box Office Collection) ಮಾಡಿರುವುದು ಸಹಜವಾಗಿಯೇ ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಮತ್ತಷ್ಟು ಹಣ ಬಾಚುವ ಸಾಧ್ಯತೆ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಪರಭಾಷೆಯವರೂ ಕೂಡ ಚಿತ್ರದ ಗಳಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಖುಷಿಯನ್ನು ಹಂಚಿಕೊಳ್ಳೋಕೆ ಬೆಂಗಳೂರಿನಲ್ಲಿ ಚಿತ್ರತಂಡ ಸಕ್ಸಸ್​ ಮೀಟ್ ಆಯೋಜಿಸಿದೆ. ಕಾರ್ಯಕ್ರಮದ ಲೈವ್​ ವಿಡಿಯೋ ಈ ಸ್ಟೋರಿಯಲ್ಲಿ.

ಇದನ್ನೂ ಓದಿ: ‘ಜೇಮ್ಸ್​’ ಚಿತ್ರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗೋಕೆ ನಾವು ಬಿಡಲ್ಲ: ಶಿವರಾಜ್​ಕುಮಾರ್​ ಭರವಸೆ

Puneeth Rajkumar: ಕನ್ನಡಿಗರ ಕಣ್ಮಣಿ ನಮ್ಮ ಅಪ್ಪು ಇನ್ಮುಂದೆ, ಡಾಕ್ಟರ್ ಪುನೀತ್ ರಾಜ್‍ಕುಮಾರ್..!