‘ಜೇಮ್ಸ್​’ ಚಿತ್ರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗೋಕೆ ನಾವು ಬಿಡಲ್ಲ: ಶಿವರಾಜ್​ಕುಮಾರ್​ ಭರವಸೆ

‘ದಯವಿಟ್ಟು ಅಭಿಮಾನಿಗಳು ಯಾರೂ ಆತಂಕ ಪಟ್ಟುಕೊಳ್ಳಬೇಡಿ.  ಜೇಮ್ಸ್​ ಸಿನಿಮಾಗೆ ತೊಂದರೆ ಆಗಲು ನಾವು ಬಿಡುವುದಿಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Mar 24, 2022 | 1:26 PM

ಪರಭಾಷೆ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ‘ಜೇಮ್ಸ್​’ (James Movie) ಸಿನಿಮಾಗೆ ಒಂದಷ್ಟು ಅಡೆತಡೆಗಳು ಆಗಿವೆ. ಬಹುತೇಕ ಕಡೆಗಳಲ್ಲಿ ಪ್ರದರ್ಶನಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿರುವ ‘ದಿ ಕಾಶ್ಮೀರ್​ ಫೈಲ್ಸ್​’ ಹಾಗೂ ಮಾ.25ರಂದು ತೆರೆ ಕಾಣಲಿರುವ ‘ಆರ್​ಆರ್​ಆರ್​’ ಸಿನಿಮಾಗಳಿಂದಾಗಿ ಪುನೀತ್​ ರಾಜ್​ಕುಮಾರ್​ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ ತೊಂದರೆಗೆ ಸಿಲುಕುತ್ತಿದೆ ಎಂಬ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿಬಂದಿತ್ತು. ಈ ಕುರಿತು ಶಿವರಾಜ್​ಕುಮಾರ್​ (Shivarajkumar) ಅವರು ಮಾತನಾಡಿದ್ದಾರೆ. ‘ಆರ್​ಆರ್​ಆರ್​’ ಬಿಡುಗಡೆ ಆದ ಬಳಿಕ ಅಪ್ಪು ಅಭಿಮಾನಿಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ. ‘ನಾನು ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದು ಇಷ್ಟೇ.. ದಯವಿಟ್ಟು ಯಾರೂ ಆತಂಕ ಪಟ್ಟುಕೊಳ್ಳಬೇಡಿ. ಸಿಎಂ ಹೇಳಿದ್ದಾರೆ, ಚೇಂಬರ್​ನವರ ಬಳಿಯೂ ಮಾತನಾಡುತ್ತಿದ್ದಾರೆ. ನಿಮಗೆ ನಿಮ್ಮ ನೆಚ್ಚಿನ ನಟನ ಸಿನಿಮಾ ಎಂಬ ಕಾರಣಕ್ಕೆ ಹಾಗೂ ನನಗೆ ನನ್ನ ತಮ್ಮನ ಸಿನಿಮಾ ಎಂಬ ಕಾರಣಕ್ಕೆ ಜಾಸ್ತಿ ಕನೆಕ್ಟ್​ ಆಗುತ್ತದೆ. ಜೇಮ್ಸ್​ ಚಿತ್ರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಲು ನಾವು ಬಿಡಲ್ಲ. ಸಿಎಂ ಕೂಡ ಭರವಸೆ ನೀಡಿದ್ದಾರೆ’ ಎಂದು ಶಿವರಾಜ್​ಕುಮಾರ್​​ ಹೇಳಿದ್ದಾರೆ.

ಇದನ್ನೂ ಓದಿ:

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್‌’ ಸಿನಿಮಾಗೆ ತೊಂದರೆಯಿಲ್ಲ: ಶಿವರಾಜ್​ಕುಮಾರ್​ ಹೇಳಿಕೆ

‘ಜೇಮ್ಸ್​​’ ಚಿತ್ರ ತೆಗೆಯದಂತೆ ಫಿಲ್ಮ್ ಚೇಂಬರ್​ಗೆ ಸಿಎಂ ಕಚೇರಿಯಿಂದ ಫೋನ್​​ ಕರೆ; ಮಹತ್ವದ ಸಭೆಗೆ ಸಿದ್ಧತೆ

Follow us on

Click on your DTH Provider to Add TV9 Kannada