‘ಕಾಂಗ್ರೆಸ್ನವರು ಸಿನಿಮಾದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ’: ಸಿಎಂ ಬೊಮ್ಮಾಯಿ ಆರೋಪ
The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರ ಹಸ್ತಕ್ಷೇಪ ನಿಜವೇ ಎಂಬ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿದ್ದಾರೆ. ಆ ವಿಡಿಯೋ ಇಲ್ಲಿದೆ..
ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ (James Movie) ಸಿನಿಮಾಗೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಪರಭಾಷೆಯ ಚಿತ್ರಗಳ ರಿಲೀಸ್ ಹಿನ್ನೆಲೆಯಲ್ಲಿ ‘ಜೇಮ್ಸ್’ ಸಿನಿಮಾಗೆ ತೊಂದರೆ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಜೇಮ್ಸ್ ಸಿನಿಮಾದ ಸಮಸ್ಯೆ ಕುರಿತು ನಾನು ಫಿಲ್ಮ್ ಚೇಂಬರ್ನವರ ಬಳಿ ಮಾತನಾಡಿದ್ದೇನೆ. ಎಲ್ಲಾದರೂ ತೊಂದರೆ ಆಗಿದ್ದರೆ ಅದನ್ನು ಸರಿಪಡಿಸುವಂತೆ ಸೂಚನೆ ನೀಡಿದ್ದಾನೆ. ಅನವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಯಾರೂ ತೆಗೆಯಬಾರದು. ಸಂಬಂಧಪಟ್ಟವರನ್ನು ಕರೆಸಿ, ಸಮಸ್ಯೆ ಸರಿಪಡಿಸುವ ಅಧಿಕಾರ ಚೇಂಬರ್ಗೆ ಇದೆ. ಶಿವರಾಜ್ಕುಮಾರ್ ಅವರ ಬಳಿಯೂ ಮಾತನಾಡಿದ್ದೇನೆ. ಏನೇ ಸಮಸ್ಯೆ ಇದ್ದರೂ ಫಿಲ್ಮ್ ಚೇಂಬರ್ ಅಥವಾ ನನ್ನ ಗಮನಕ್ಕೆ ತನ್ನಿ ಅಂತ ಹೇಳಿದ್ದೇನೆ’ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರ ಹಸ್ತಕ್ಷೇಪ ನಿಜವೇ ಎಂಬ ಪ್ರಶ್ನೆಗೂ ಬಸವರಾಜ ಬೊಮ್ಮಾಯಿ ಉತ್ತರಿದ್ದಾರೆ. ‘ಅದು ನಿಜವಲ್ಲ. ಕಾಂಗ್ರೆಸ್ನವರು ಸಿನಿಮಾದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಆ ಮಟ್ಟಕ್ಕೆ ಅವರು ಇಳಿದಿದ್ದಾರೆ. ಬೇರೆ ಏನೂ ಇಲ್ಲ’ ಎಂದು ಬೊಮ್ಮಾಯಿ ಹೇಳಿದ್ದಾರೆ. ಸಿಎಂ ಸೂಚನೆ ಮೇರೆಗೆ ‘ಜೇಮ್ಸ್’ ಚಿತ್ರದ ಸಮಸ್ಯೆ ಬಗೆಹರಿಸಲು ಇಂದು (ಮಾ.24) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ.
ಇದನ್ನೂ ಓದಿ:
3 ದಿನ ಸಾರಿ ಕೇಳಿದ್ರು ಪುನೀತ್; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್’ ವಿಲನ್
ಪುನೀತ್ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ