ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚೋನು ನೀನು ಅಂತ ಜಮೀರ್ರನ್ನು ಈಶ್ವರಪ್ಪ ಸದನದಲ್ಲಿ ಜರಿದರು
ಮಾತಿನ ಭರದಲ್ಲಿ ಈಶ್ವರಪ್ಪ, ಜಮೀರ್ ವಿರುದ್ಧ ಏಕವಚನದಲ್ಲಿ ಮಾತಾಡುತ್ತಾ, ‘ನೀನು ಬರೀ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚೋನು,’ ಅನ್ನುತ್ತಾರೆ. ಆಗ ಕಾಂಗ್ರೆಸ್ ಪಕ್ಷದ ಬೇರೆ ಶಾಸಕರು ಈಶ್ವರಪ್ಪ ವಿರುದ್ಧ ಮುಗಿಬೀಳುತ್ತಾರೆ.
ಬೆಂಗಳೂರು: ಗುರುವಾರ ಸದನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ನಡುವೆ ಮಾತಿನ ಜಟಾಪಟಿ ನಡೆಯಿತು. ಅಸಲಿಗೆ ವಾದ ನಡೆದಿದ್ದು ಈಶ್ವರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನಡುವೆ. ಇತ್ತೀಚಿಗೆ ಸಿದ್ದರಾಮಯ್ಯ ಸದನ ಇಲ್ಲವೇ ಸದನದ ಹೊರಗಡೆ ಮಾತಾಡುವಾಗ ಅವರು ಹೇಳಿರುವುದನ್ನು ಪುಷ್ಠೀಕರಿಸುವಂತೆ ಜಮೀರ್ ಮಾತಾಡುತ್ತಾರೆ. ಪ್ರಾಯಶಃ ತಾನು ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಇರುವೆನೆಂದು ತೋರಿಸಿಕೊಳ್ಳಲು ಅವರು ಹಾಗೆ ಮಾಡುತ್ತಿರಬಹುದು. ಹಾಗೆ ನೋಡಿದರೆ, ಸಿದ್ದರಾಮಯ್ಯ ಏನಾದರೂ ಹೇಳಿದಾಗ ಇನ್ನೊಬ್ಬ ಕಾಂಗ್ರೆಸ್ ಸದಸ್ಯ ಅದನ್ನು ಅನುಮೋದಿಸುವ ಅವಶ್ಯಕತೆ ಇರೋದಿಲ್ಲ.
ಓಕೆ, ಗುರುವಾರ ಸದನದಲ್ಲಿ ನಡೆದ ಘಟನೆಗೆ ವಾಪಸ್ಸಾಗೋಣ. ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಮಾತಾಡುವಾಗ ಜಮೀರ್ ಎದ್ದು ನಿಂತು ಏನನ್ನೋ ಹೇಳುತ್ತಾರೆ. ಆಗ ಈಶ್ವರಪ್ಪ ಜಮೀರ್ ಅವರೊಂದಿಗೆ ವಾದಕ್ಕೆ ಬೀಳುತ್ತಾರೆ. ಮಾತಿನ ಭರದಲ್ಲಿ ಈಶ್ವರಪ್ಪ, ಜಮೀರ್ ವಿರುದ್ಧ ಏಕವಚನದಲ್ಲಿ ಮಾತಾಡುತ್ತಾ, ‘ನೀನು ಬರೀ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚೋನು,’ ಅನ್ನುತ್ತಾರೆ.
ಆಗ ಕಾಂಗ್ರೆಸ್ ಪಕ್ಷದ ಬೇರೆ ಶಾಸಕರು ಈಶ್ವರಪ್ಪ ವಿರುದ್ಧ ಮುಗಿಬೀಳುತ್ತಾರೆ.
ಅವರಾಡಿದ ಮಾತು ಅವಹೇಳನಕಾರಿಯಾಗಿದೆ, ಶಾಸಕರೊಬ್ಬರಿಗೆ ಅವರು ‘ಲೇ’ ಅಂತ ಮಾತಾಡಿದ್ದಾರೆ, ಅದನ್ನು ಕಡತದಿಂದ ತೆಗೆದು ಹಾಕಬೇಕು ಅನ್ನುತ್ತಾರೆ. ಸಭಾಧ್ಯಕ್ಷ ಸ್ಥಾನವನ್ನಲಂಕರಿಸಿದ್ದ ಉಪಸಭಾಪತಿ ವಿಶ್ವನಾಥ ಚಂದ್ರಶೇಖರ ಮಾಮನಿ ಅವರು ಶಾಂತರಾಗಿ ಅಂತ ಹೇಳಿದರೂ ಅವರು ಕೂಗಾಡುವುದನ್ನು ಮುಂದುವರಿಸುತ್ತಾರೆ.
ಇದನ್ನೂ ಓದಿ: ರೈತ ಮಹಿಳೆಯ ನೋವು, ಅನುಭವಿಸುತ್ತಿರುವ ಯಾತನೆ ಕೇಳಿಸಿಕೊಂಡಾಗ ಯಡಿಯೂರಪ್ಪ ಸದನದಲ್ಲಿ ಆಡಿದ ಮಾತು ನೆನಪಾಗುತ್ತದೆ