ಹಿಜಾಬ್ ಗೆಟಪ್ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು ಏಕೆ? ಇದು ‘ಹೋಮ್ ಮಿನಿಸ್ಟರ್’ ವಿಷಯ
‘ಹೋಮ್ ಮಿನಿಸ್ಟರ್’ ಸಿನಿಮಾದ ಒಂದು ದೃಶ್ಯಕ್ಕಾಗಿ ನಟ ಉಪೇಂದ್ರ ಅವರು ಈ ಗೆಟಪ್ ಧರಿಸಿದ್ದಾರೆ. ಆ ಫೋಟೋ ಈಗ ವೈರಲ್ ಆಗಿರುವ ಬಗ್ಗೆ ಉಪ್ಪಿ ಸ್ಪಷ್ಟನೆ ನೀಡಿದ್ದಾರೆ.
ನಟ ಉಪೇಂದ್ರ (Upendra) ಮತ್ತು ವೇದಿಕಾ ಅವರು ಜೋಡಿಯಾಗಿ ಕಾಣಿಸಿಕೊಂಡಿರುವ ‘ಹೋಮ್ ಮಿನಿಸ್ಟರ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಏ.1ರಂದು ಈ ಚಿತ್ರ ರಿಲೀಸ್ ಆಗಲಿದೆ. ಇತ್ತೀಚೆಗೆ ಉಪೇಂದ್ರ ಅವರು ಹುಡುಗಿ ರೀತಿ ಡ್ರೆಸ್ ಮಾಡಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ರಾಜ್ಯದಲ್ಲಿ ಹಿಜಾಬ್ (Hijab) ಬಗ್ಗೆ ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಉಪ್ಪಿ ಕೂಡ ಹಿಜಾಬ್ ರೀತಿಯ ಡ್ರೆಸ್ ಧರಿಸಿರುವ ಫೋಟೋ ವೈರಲ್ ಆಗಿದ್ದಕ್ಕೆ ಯಾವುದೇ ನೇರ ಸಂಬಂಧ ಇಲ್ಲ. ಈ ಸಿನಿಮಾದ ಶೂಟಿಂಗ್ ಬಹಳ ಹಿಂದೆಯೇ ಆಗಿತ್ತು. ಈ ಮೊದಲು ಕೂಡ ಈ ಫೋಟೋ ವೈರಲ್ ಆಗಿತ್ತು. ಆ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಹೋಮ್ ಮಿನಿಸ್ಟರ್’ ಸಿನಿಮಾ (Home Minister Movie) ಮೇಲೆ ಉಪ್ಪಿ ಅಭಿಮಾನಿಗಳಲ್ಲಿ ಇನ್ನಷ್ಟು ಕೌತುಕ ಹೆಚ್ಚಿದೆ. ಈ ಚಿತ್ರಕ್ಕೆ ಸುಜಯ್ ಕೆ. ಶ್ರೀಹರಿ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
ಈ ಕೆಲಸ ಮಾಡಿದ್ರೆ ಅಭಿಮಾನಿಗಳಿಗೆ ಸಿಗುತ್ತೆ ಉಪೇಂದ್ರ ಜೊತೆ ಊಟ ಮಾಡುವ ಚಾನ್ಸ್; ಏನಿದು ಟಾಸ್ಕ್?
ಕೊಂಬು ಇರುವ ಕುದುರೆ ಏರಿ ಬಂದ ಉಪೇಂದ್ರ; ನಿರ್ದೇಶನದ ಹೊಸ ಚಿತ್ರದಲ್ಲಿ ಹೇಗಿದೆ ನೋಡಿ ಉಪ್ಪಿ ಫಸ್ಟ್ ಲುಕ್
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

