ಗಣೇಶ್ ಪುತ್ರಿ ಚಾರಿತ್ರ್ಯ ಬರ್ತ್ಡೇ ಪಾರ್ಟಿ ಫೋಟೋಗಳು; ಮುದ್ದು ಮಗಳಿಗೆ ‘ಗೋಲ್ಡನ್ ಸ್ಟಾರ್’ ವಿಶ್
Ganesh Daughter Charitrya: ನಟ ಗಣೇಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಕುಟುಂಬದವರಿಗಾಗಿ ಅವರು ಸದಾ ಸಮಯ ಮೀಸಲಿಡುತ್ತಾರೆ. ಇಂದು (ಮಾ.27) ಮಗಳು ಚಾರಿತ್ರ್ಯ ಹುಟ್ಟುಹಬ್ಬಕ್ಕೆ ಅವರು ಶುಭಕೋರಿದ್ದಾರೆ.
Updated on: Mar 27, 2022 | 2:31 PM

Golden Star Ganesh and Shilpa’s daughter Charitrya Birthday party photos

Golden Star Ganesh and Shilpa’s daughter Charitrya Birthday party photos

ಹಸಿರು ಬಣ್ಣದ ಮಿರಿಮಿರಿ ಮಿಂಚುವ ಗೌನ್ ಅನ್ನು ಚಾರಿತ್ರ್ಯ ಧರಿಸಿದ್ದಾಳೆ. ಬಣ್ಣಬಣ್ಣದ ಬಲೂನ್, ಬಗೆಬಗೆಯ ಲೈಟಿಂಗ್ಗಳಿಂದ ವಾತಾವರಣದ ರಂಗೇರಿಸಿ ಈ ಪಾರ್ಟಿ ಮಾಡಲಾಗಿದೆ. ನಟಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಪಾರ್ಟಿಯಲ್ಲಿ ಹಾಜರಿ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಫೋ ಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಕಮೆಂಟ್ಗಳ ಮೂಲಕ ಚಾರಿತ್ರ್ಯಗೆ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ನೂರು ಕಾಲ ಖುಷಿಯಾಗಿ ಬಾಳಲಿ ಎಂದು ಹಾರೈಸುತ್ತಿದ್ದಾರೆ.

ನಟನೆ ಮತ್ತು ಡ್ಯಾನ್ಸ್ನಲ್ಲಿ ಚಾರಿತ್ರ್ಯಗೆ ಹೆಚ್ಚು ಆಸಕ್ತಿ ಇದೆ. ಈಗಾಗಲೇ ‘ಚಮಕ್’ ಸಿನಿಮಾದಲ್ಲಿ ಆಕೆಯ ಅಭಿನಯವನ್ನು ಪ್ರೇಕ್ಷಕರು ನೋಡಿದ್ದಾರೆ. 2017ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ಅಪ್ಪ-ಮಗಳ ಪಾತ್ರದಲ್ಲಿ ಗಣೇಶ್ ಹಾಗೂ ಚಾರಿತ್ರ್ಯ ನಟಿಸಿದ್ದರು.
























