- Kannada News Photo gallery Mithali Raj added another feather to her cap in India vs South Africa Womens World Cup Match
Mithali Raj Fifty: ಎಲ್ಲ ದಾಖಲೆ ಉಡೀಸ್: ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್
India vs South Africa Women's World Cup: ಮಿಥಾಲಿ ರಾಜ್ 84 ಎಸೆತಗಳನ್ನು ಎದುರಿಸಿ 8 ಫೋರ್ ನೊಂದಿಗೆ 68 ರನ್ ಗಳಿಸಿ ಔಟಾದರು. ಈ ಅರ್ಧಶತಕದೊಂದಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ದಂತಕತೆ ಮಿಥಾಲಿ ರಾಜ್ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.
Updated on:Mar 27, 2022 | 1:27 PM



ಅಂತಿಮವಾಗಿ ಮಿಥಾಲಿ ರಾಜ್ 84 ಎಸೆತಗಳನ್ನು ಎದುರಿಸಿ 8 ಫೋರ್ ನೊಂದಿಗೆ 68 ರನ್ ಗಳಿಸಿ ಔಟಾದರು. ಈ ಅರ್ಧಶತಕದೊಂದಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ದಂತಕತೆ ಮಿಥಾಲಿ ರಾಜ್ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ಈ ಅರ್ಧಶತಕದ ಮೂಲಕ ಮಿಥಾಲಿ ರಾಜ್, ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 39 ವರ್ಷದ ಬಲಗೈ ಬ್ಯಾಟರ್ 2000ನೇ ಇಸವಿಯಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರೇ ತಮ್ಮ ಮೊದಲ ಅರ್ಧಶತಕ ಬಾರಿಸಿದ್ದರು.

2000-2022ರ ವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 38 ಪಂದ್ಯಗಳನ್ನು ಆಡಿರುವ ಮಿಥಾಲಿ ರಾಜ್, 1321 ರನ್ ಗಳೊಂದಿಗೆ 11 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಮಾಜಿ ತಾರೆ ಡೆಬೊರಾ ಆನ್ ಹ್ಯಾಕ್ಲೀ (10 ಅರ್ಧಶತಕ) ಅವರ ಹೆಸರಲ್ಲಿದ್ದ ವಿಶ್ವ ದಾಖಲೆ ಅಳಿಸಿಹಾಕಿದ್ದಾರೆ. ಇವರ ಬ್ಯಾಟ್ ನಿಂದ ವಿಶ್ವಕಪ್ ಟೂರ್ನಿಗಳಲ್ಲಿ 2 ಶತಕ ಕೂಡ ಬಂದಿದೆ.
Published On - 12:47 pm, Sun, 27 March 22
