AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ಯಶ್​ ನಟನೆಯ ‘ಕೆಜಿಎಫ್​ 2’ ತಂಡದಿಂದ ಸರ್​ಪ್ರೈಸ್​; ಪವರ್​ಫುಲ್​ ಪೋಸ್ಟರ್​ ರಿಲೀಸ್​

ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್​, ರವೀನಾ ಟಂಡನ್​ ಮೊದಲಾದ ಮಹಿಳಾ ಕಲಾವಿದರು ಇರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ವಿಶೇಷ ಸಾಲುಗಳನ್ನು ಕೂಡ ಬರೆಯಲಾಗಿದೆ.

KGF Chapter 2: ಯಶ್​ ನಟನೆಯ ‘ಕೆಜಿಎಫ್​ 2’ ತಂಡದಿಂದ ಸರ್​ಪ್ರೈಸ್​; ಪವರ್​ಫುಲ್​ ಪೋಸ್ಟರ್​ ರಿಲೀಸ್​
ಕೆಜಿಎಫ್​ 2 ಪೋಸ್ಟರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 08, 2022 | 3:51 PM

ಯಶ್ (Yash) ನಟನೆಯ ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾ (KGF Chapter 2 Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಸಿನಿಮಾ ತಂಡ ಈಗ ನಿಧಾನವಾಗಿ ಪ್ರಚಾರ ಕಾರ್ಯ ಆರಂಭಿಸಿದೆ. ಮಾರ್ಚ್​ 27ರಂದು ಟ್ರೇಲರ್ ರಿಲೀಸ್ ಮಾಡುವ ಬಗ್ಗೆ ಈಗಾಗಲೇ ಘೋಷಣೆ ಆಗಿದೆ. ಈಗ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ‘ವಿಶ್ವ ಮಹಿಳಾ ದಿನಾಚರಣೆ’ (International Women’s Day) ಹಿನ್ನೆಲೆಯಲ್ಲಿ ಈ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ‘ಕೆಜಿಎಫ್​’ ಹಾಗೂ ‘ಕೆಜಿಎಫ್​ 2’ನಲ್ಲಿ ಬರುವ ಎಲ್ಲಾ ಪ್ರಮುಖ ಮಹಿಳಾ ಪಾತ್ರಗಳನ್ನು ಪೋಸ್ಟರ್​ನಲ್ಲಿ ತೋರಿಸಲಾಗಿದೆ.

ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್​, ರವೀನಾ ಟಂಡನ್​ ಮೊದಲಾದ ಮಹಿಳಾ ಕಲಾವಿದರು ಇರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ವಿಶೇಷ ಸಾಲುಗಳನ್ನು ಕೂಡ ಬರೆಯಲಾಗಿದೆ. ‘ನೀವು ಜನ್ಮ ನೀಡುತ್ತೀರಿ. ನೀವು ಪೋಷಿಸುತ್ತೀರಿ. ನೀವು ತ್ಯಾಗ ಮಾಡುತ್ತೀರಿ. ನೀವು ಪ್ರೀತಿಸುತ್ತೀರಿ. ನೀವು ಕಾಳಜಿ ವಹಿಸುತ್ತೀರಿ. ನೀವು ಶಕ್ತಿವಂತರು. ನೀವು ಸೃಷ್ಟಿಕರ್ತರು. ನೀವೇ ಬ್ರಹ್ಮಾಂಡ. ಅವರೆಲ್ಲರಿಗೂ ವಂದನೆಗಳು’ ಎಂದು ಬರೆಯಲಾಗಿದೆ.

ಪೋಸ್ಟರ್​ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. ಈ ಪೋಸ್ಟರ್​ನಲ್ಲಿ ರಿಲೀಸ್ ಡೇಟ್​ ಉಲ್ಲೇಖವಾಗಿಲ್ಲ. ಈ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಸಿನಿಮಾ ಬಿಡುಗಡೆ ದಿನಾಂಕವನ್ನು ಪೋಸ್ಟರ್​ನಲ್ಲಿ ಯಾಕೆ ಹಾಕಿಲ್ಲ?’ ಎಂದು ಕೇಳಿದ್ದಾರೆ. ಏಪ್ರಿಲ್​ 14ರಂದು ಸಿನಿಮಾ ತೆರೆಗೆ ಬರೋದು ಬಹುತೇಕ ಖಚಿತವಾಗಿದೆ. ಹೀಗಾಗಿ, ಪೋಸ್ಟರ್​ನಲ್ಲಿ ರಿಲೀಸ್ ದಿನಾಂಕ ಉಲ್ಲೇಖ ಮಾಡದ ಮಾತ್ರಕ್ಕೆ ಸಿನಿಮಾ ಬಿಡುಗಡೆ ದಿನಾಂಕ ವಿಳಂಬವಾಗುವುದಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಪಿಂಕ್​ವಿಲ್ಲಾ ವೆಬ್​ ಸೈಟ್​ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್,​ ‘ಕೆಜಿಎಫ್​ 2’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ಕೆಜಿಎಫ್​ನ ಮೊದಲ ಭಾಗ ಶೂಟ್​ ಮಾಡುವಾಗ ‘ಕೆಜಿಎಫ್​ 2’ನ ಕೆಲ ಪಾರ್ಟ್​ಗಳನ್ನು ಶೂಟ್​ ಮಾಡಲಾಗಿತ್ತು. ಇದು ಯಾವ ಭಾಷೆ ಅಥವಾ ಯಾವ ಮಾರುಕಟ್ಟೆ ಎನ್ನುವುದಲ್ಲ. ನಾವು ಎಷ್ಟು ಜನರಿಗೆ ರೀಚ್​ ಆಗುತ್ತೇವೆ ಎನ್ನುವುದು ಪ್ರಮುಖವಾಗುತ್ತದೆ. ಎಲ್ಲಾ ವಯಸ್ಸಿನವರು ಆನಂದಿಸಬಹುದಾದ ಕಥೆಯನ್ನು ಹೇಳುವ ಗುರಿಯನ್ನು ನಾನು ಹೊಂದಿದ್ದೇನೆ’ ಎಂದಿದ್ದರು.

ಇದನ್ನೂ ಓದಿ: Yash: ಮುಂಬೈನಲ್ಲಿ ಕಾಣಿಸಿಕೊಂಡ ಯಶ್​; ಇದರ ಹಿಂದಿರೋ ರಹಸ್ಯ ಏನು?

KGF Chapter 2: ‘ಕೆಜಿಎಫ್​ 2’ ಹೇಗಿದೆ? ಯಶ್​ ಕೊಟ್ರು ಸಂಪೂರ್ಣ ಮಾಹಿತಿ

Published On - 3:44 pm, Tue, 8 March 22

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು