KGF Chapter 2: ‘ಕೆಜಿಎಫ್ 2’ ಹೇಗಿದೆ? ಯಶ್ ಕೊಟ್ರು ಸಂಪೂರ್ಣ ಮಾಹಿತಿ
ಸಾಮಾನ್ಯವಾಗಿ ಮೊದಲ ಭಾಗ ಹಿಟ್ ಆದ ನಂತರದಲ್ಲಿ ಎರಡನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚುತ್ತದೆ. ಹೀಗಾದಾಗ ಸ್ಕ್ರಿಪ್ಟ್ನಲ್ಲಿ ಕೆಲ ಬದಲಾವಣೆ ಮಾಡಲಾಗುತ್ತದೆ. ‘ಕೆಜಿಎಫ್’ ವಿಚಾರದಲ್ಲೂ ಹಾಗೆಯೇ ಆಗಿದೆ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಯಶ್ ಉತ್ತರಿಸಿದ್ದಾರೆ.
‘ಕೆಜಿಎಫ್ 2’ (KGF 2) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಏಪ್ರಿಲ್ 14ರಂದು ಸಿನಿಮಾ ತೆರೆಗೆ ಬರುತ್ತಿದೆ. ಮಾರ್ಚ್ 27ರಂದು ಸಿನಿಮಾದ ಟ್ರೇಲರ್ ರಿಲೀಸ್ ಮಾಡುವ ಬಗ್ಗೆ ಇತ್ತೀಚೆಗೆ ಚಿತ್ರತಂಡ ಘೋಷಣೆ ಮಾಡಿತ್ತು. ಸಿನಿಮಾ ಹೇಗಿರಲಿದೆ ಎನ್ನುವ ಝಲಕ್ ಈ ಟ್ರೇಲರ್ನಲ್ಲಿ ಸಿಗಲಿದೆ. ‘ಕೆಜಿಎಫ್’ ಚಿತ್ರದ ಮೂಲಕ ಪ್ರಶಾಂತ್ ನೀಲ್ ತಮ್ಮ ಕೆಲಸ ಹೇಗಿರುತ್ತದೆ ಎನ್ನುವುದನ್ನು ಜಗತ್ತಿಗೆ ತೋರಿಸಿದ್ದಾರೆ. ‘ಕೆಜಿಎಫ್ 2’ ಮೊದಲ ಚಿತ್ರಕ್ಕಿಂತಲೂ ಅದ್ದೂರಿಯಾಗಿ ಮೂಡಿ ಬರುವ ನಿರೀಕ್ಷೆ ಇದೆ. ಈ ಬಗ್ಗೆ ನಟ ಯಶ್ (Yash) ಮಾತನಾಡಿದ್ದಾರೆ. ಸಿನಿಮಾ ಹೇಗಿರಲಿದೆ ಎಂಬ ಇಂಚಿಂಚು ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿದ್ದಾರೆ.
ಪಿಂಕ್ವಿಲ್ಲಾ ವೆಬ್ ಸೈಟ್ಗೆ ನೀಡಿದ ಸಂದರ್ಶನದಲ್ಲಿ ಯಶ್ ‘ಕೆಜಿಎಫ್ 2’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಕೆಜಿಎಫ್ನ ಮೊದಲ ಭಾಗ ಶೂಟ್ ಮಾಡುವಾಗ ‘ಕೆಜಿಎಫ್ 2’ನ ಕೆಲ ಪಾರ್ಟ್ಗಳನ್ನು ಶೂಟ್ ಮಾಡಲಾಗಿತ್ತು. ಇದು ಯಾವ ಭಾಷೆ ಅಥವಾ ಯಾವ ಮಾರುಕಟ್ಟೆ ಎನ್ನುವುದಲ್ಲ. ನಾವು ಎಷ್ಟು ಜನರಿಗೆ ರೀಚ್ ಆಗುತ್ತೇವೆ ಎನ್ನುವುದು ಪ್ರಮುಖವಾಗುತ್ತದೆ. ಎಲ್ಲಾ ವಯಸ್ಸಿನವರು ಆನಂದಿಸಬಹುದಾದ ಕಥೆಯನ್ನು ಹೇಳುವ ಗುರಿಯನ್ನು ನಾನು ಹೊಂದಿದ್ದೇನೆ’ ಎನ್ನುತ್ತಾರೆ ಯಶ್.
ಸಾಮಾನ್ಯವಾಗಿ ಮೊದಲ ಭಾಗ ಹಿಟ್ ಆದ ನಂತರದಲ್ಲಿ ಎರಡನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚುತ್ತದೆ. ಹೀಗಾದಾಗ ಸ್ಕ್ರಿಪ್ಟ್ನಲ್ಲಿ ಕೆಲ ಬದಲಾವಣೆ ಮಾಡಲಾಗುತ್ತದೆ. ‘ಕೆಜಿಎಫ್’ ವಿಚಾರದಲ್ಲೂ ಹಾಗೆಯೇ ಆಗಿದೆ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಯಶ್ ಉತ್ತರಿಸಿದ್ದಾರೆ. ‘ಮೊದಲ ಪಾರ್ಟ್ನಿಂದ ಸಿಕ್ಕ ಯಶಸ್ಸಿನಿಂದ ನಮಗೆ ಹೆಚ್ಚು ಆಲೋಚಿಸಲು ಸಾಧ್ಯವಾಯಿತು. ನಮ್ಮ ಗುರಿ ಬೆಳೆದಿದೆ. ಆದರೆ ಕಥೆ ಒಂದೇ ಆಗಿರುತ್ತದೆ. ಈ ಸಿನಿಮಾ ಕಣ್ಣುಗಳಿಗೆ (ದೃಶ್ಯಗಳು), ಕಿವಿಗಳಿಗೆ (ಹಿನ್ನೆಲೆ ಸಂಗೀತ), ಮನಸ್ಸಿಗೆ (ಭಾವನೆಗಳು) ರಸದೌತಣ ನೀಡಲಿದೆ’ ಎಂದು ಹೇಳಿದರು ಯಶ್.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ‘ಕೆಜಿಎಫ್ 2’ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ವೈರಸ್ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಹೊಸ ರಿಲೀಸ್ ಡೇಟ್ ತಿಳಿದುಕೊಳ್ಳಲು ಸಿನಿಪ್ರಿಯರು ಕಾಯುತ್ತಿದ್ದರು. ಆ ಕಾಯುವಿಕೆಗೆ ಈಗ ಬ್ರೇಕ್ ಬಿದ್ದಿದೆ. ಆದರೆ ಈ ವರ್ಷವೇ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ನಿರಾಸೆ ಆಗಿದೆ. ಈ ಬಹುನಿರೀಕ್ಷಿತ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಮುಂದಿನ ವರ್ಷ ಏ.14ರವರೆಗೂ ಕಾಯುವುದು ಅನಿವಾರ್ಯ ಆಗಿದೆ.
ಕೊವಿಡ್ ಎರಡನೇ ಅಲೆ ಈಗತಾನೆ ಕಡಿಮೆ ಆಗುತ್ತಿದೆ. ಅಷ್ಟರಲ್ಲಾಗಲೇ ಮೂರನೇ ಅಲೆಯ ಭೀತಿ ಹೆಚ್ಚುತ್ತಿದೆ. ಯಾವುದೇ ಕ್ಷಣದಲ್ಲೂ ಲಾಕ್ಡೌನ್ ಜಾರಿ ಆಗಬಹುದೇನೋ ಎಂಬ ಆತಂಕದಲ್ಲೇ ಎಲ್ಲ ಕ್ಷೇತ್ರದ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ. ಚಿತ್ರಮಂದಿರಗಳಲ್ಲಿ ಸದ್ಯ ಕೇವಲ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಈ ಎಲ್ಲ ಕಷ್ಟದ ಪರಿಸ್ಥಿತಿ ತಿಳಿಯಾಗಲು ಇನ್ನೂ ಕೆಲವು ತಿಂಗಳು ಸಮಯ ಬೇಕೇ ಬೇಕು. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು 2022ರ ಏಪ್ರಿಲ್ 14ಕ್ಕೆ ‘ಕೆಜಿಎಫ್ 2’ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದ್ದಾರೆ.
ಇದನ್ನೂ ಓದಿ: ಯಶ್ಗೆ ದಾರಿಬಿಟ್ಟುಕೊಟ್ಟ ಆಮಿರ್ ಖಾನ್
Yash: ಮುಂಬೈನಲ್ಲಿ ಕಾಣಿಸಿಕೊಂಡ ಯಶ್; ಇದರ ಹಿಂದಿರೋ ರಹಸ್ಯ ಏನು?
Published On - 5:56 pm, Fri, 4 March 22