ಸ್ಟಂಟ್ ವಿಡಿಯೋ ಮೂಲಕ ಎಂಟ್ರಿ ಕೊಟ್ಟ ಕಿರೀಟಿ; ಶುಭಕೋರಿದ ಖ್ಯಾತ ನಟ ರಾಜಮೌಳಿ
ಕಿರೀಟಿ ಅವರ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್ನಲ್ಲಿ ಸಖತ್ ಸ್ಟಂಟ್ಸ್ಗಳನ್ನು ಮಾಡಿದ್ದಾರೆ ಕಿರೀಟಿ. ಈ ವಿಡಿಯೋ ನೋಡಿ ರಾಜಮೌಳಿ ಖುಷಿಪಟ್ಟಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಮಗ ಕಿರೀಟಿ ರೆಡ್ಡಿ (Kireeti Reddy) ಚಿತ್ರರಂಗಕ್ಕೆ ಕಾಲಿಡಲಿಡುವ ಸುದ್ದಿ ಇತ್ತೀಚೆಗೆ ಅಧಿಕೃತವಾಗಿತ್ತು. ಇಂದು (ಮಾರ್ಚ್ 4) ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿದೆ. ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರು ಆಗಮಿಸಿ ಕ್ಲ್ಯಾಪ್ ಮಾಡಿದ್ದಾರೆ.
ಕಿರೀಟಿ ಅವರ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್ನಲ್ಲಿ ಸಖತ್ ಸ್ಟಂಟ್ಸ್ಗಳನ್ನು ಮಾಡಿದ್ದಾರೆ ಕಿರೀಟಿ. ಈ ವಿಡಿಯೋ ನೋಡಿ ರಾಜಮೌಳಿ ಖುಷಿಪಟ್ಟಿದ್ದಾರೆ. ‘ಕಿರೀಟಿ ಬಳಿ ತುಂಬಾನೇ ಟ್ಯಾಲೆಂಟ್ ಇದೆ. ಅವರು ಸ್ಟಂಟ್ಸ್, ಡ್ಯಾನ್ಸ್, ನಟನೆ ಮಾಡುತ್ತಾರೆ. ಅವರು ಒಳ್ಳೆಯ ತಂಡ ಸೇರಿದ್ದಾರೆ ಅನ್ನೋದು ಖುಷಿಯ ವಿಚಾರ’ ಎಂದರು ರಾಜಮೌಳಿ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜೆನೀಲಿಯಾ, ಕನ್ನಡತಿ ಶ್ರೀಲೀಲಾ, ಹಿರಿಯ ನಟ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಇದರಿಂದ ತಂಡದ ತಾರಾ ಮೆರಗು ಹೆಚ್ಚಿದೆ.
ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮ ಆಗಿಲ್ಲ. ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದೆ. ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದ್ದು, ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರು ಈ ಸಿನಿಮಾದ ಭಾಗವಾಗಿದ್ದಾರೆ ಅನ್ನೋದು ವಿಶೇಷ.
‘ಈಗ’ ಸಿನಿಮಾ ನಿರ್ಮಾಣ ಮಾಡಿದ್ದ ಸಾಯಿ ಕೋರ್ರಾಪಾಟಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಲಿದ್ದಾರೆ. ‘ಬಾಹುಬಲಿ’ ಸಿನಿಮಾ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ಆರ್ಟ್ ಡೈರೆಕ್ಟರ್ ಆಗಿ ರವೀಂದರ್, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿಗೆ ಸಿನಿಮಾರಂಗದ ಮೇಲೆ ಆಸಕ್ತಿ ಬೆಳೆದಿತ್ತು. ‘ಜಾಕಿ’ ಚಿತ್ರ ತೆರೆಕಂಡಾಗ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಲಭ್ಯವಾಗಿತ್ತು. ಪುನೀತ್ ಕೂಡ ಆಗ ಕಿರೀಟಿಗೆ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಈಗ ಅವರು ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ.
ಇದನ್ನೂ ಓದಿ: ‘ಅಲ್ಲು ಅರ್ಜುನ್, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್ವುಡ್ನ ಹೊಗಳುತ್ತಿದ್ದರು’; ಆರ್ಜಿವಿ ಟೀಕೆ
ರಾಜಮೌಳಿ ಜತೆ ಪ್ರಭಾಸ್ ಮತ್ತೊಂದು ಸಿನಿಮಾ; ಗುಡ್ ನ್ಯೂಸ್ ತಿಳಿಸಿದ ‘ರಾಧೆ ಶ್ಯಾಮ್’ ಹೀರೋ