‘ಅಲ್ಲು ಅರ್ಜುನ್​, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್​ವುಡ್​ನ ಹೊಗಳುತ್ತಿದ್ದರು’; ಆರ್​ಜಿವಿ ಟೀಕೆ

‘ಬಾಹುಬಲಿ’ ಹಾಗೂ ‘ಪುಷ್ಪ’ ಚಿತ್ರಗಳನ್ನು ಮೋದಿ ಹೊಗಳಿದ್ದರು. ಈ ಸಿನಿಮಾಗಳು ನಮ್ಮ ಹೆಮ್ಮೆ ಎಂದು ಕೊಂಡಾಡಿದ್ದರು. ಈ ವಿಚಾರದಲ್ಲಿ ರಾಮ್​ ಗೋಪಾಲ್​ ವರ್ಮಾ ಟಾಲಿವುಡ್​ಅನ್ನು ಟೀಕಿಸಿದ್ದಾರೆ.

‘ಅಲ್ಲು ಅರ್ಜುನ್​, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್​ವುಡ್​ನ ಹೊಗಳುತ್ತಿದ್ದರು’; ಆರ್​ಜಿವಿ ಟೀಕೆ
ಮೋದಿ- ರಾಮ್​ ಗೋಪಾಲ್​ ವರ್ಮಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 08, 2022 | 7:32 AM

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸದಾ ಸುದ್ದಿಯಲ್ಲಿರೋಕೆ ಇಷ್ಟಪಡುತ್ತಾರೆ. ಅವರು ಒಂದಿಲ್ಲೊಂದು ವಿಚಾರದಲ್ಲಿ ಟ್ವೀಟ್​ ಮಾಡುತ್ತಾ ಯಾರನ್ನಾದರೂ ಟೀಕೆ ಮಾಡುತ್ತಲೇ ಇರುತ್ತಾರೆ. ಇದರಿಂದ ಹಲವು ಬಾರಿ ವಿವಾದ ಹುಟ್ಟಿಕೊಂಡಿದ್ದೂ ಇದೆ. ಆರ್​ಜಿವಿ ಸಾಕಷ್ಟು ಯುವ ನಟಿಯರ ಜತೆ ಸಮಯ ಕಳೆಯುತ್ತಾರೆ, ಸಾಕಷ್ಟು ಸ್ಟಾರ್​ಗಳ ವಿರುದ್ಧ ನೇರವಾಗಿ ತೊಡೆತಟ್ಟುತ್ತಾರೆ. ಈ ಬಗ್ಗೆ ಅನೇಕರಿಂದ ಟೀಕೆಗೆ ಒಳಗಾಗಿದ್ದಾರೆ. ಆದರೆ, ಆರ್​ಜಿವಿ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಆ ಓಪನ್​ ಆಗಿಯೇ ಟ್ವೀಟ್​ ಮಾಡುವುದನ್ನು ಮುಂದುವರಿಸಿದ್ದಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಇಟ್ಟುಕೊಂಡು ಟಾಲಿವುಡ್​​ಅನ್ನು ಟೀಕೆ ಮಾಡಿದ್ದಾರೆ!

‘ತೆಲುಗು ಚಿತ್ರರಂಗ ಪ್ರಪಂಚದಾದ್ಯಂತ ಹೆಸರು ಮಾಡುತ್ತಿದೆ. ಟಾಲಿವುಡ್​ನ ಜನಪ್ರಿಯತೆಯು ಕೇವಲ ತೆಲುಗು ನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಪ್ರಪಂಚವು ಈಗ ಟಾಲಿವುಡ್ ಬಗ್ಗೆ ಚರ್ಚಿಸುತ್ತದೆ. ಬೆಳ್ಳಿತೆರೆಯಿಂದ ಒಟಿಟಿ ಪ್ಲಾಟ್‌ಫಾರ್ಮ್‌ ವರೆಗೆ ತೆಲುಗು ಸಿನಿಮಾ ಸದ್ದು ಮಾಡುತ್ತಿದೆ. ಹೊರ ದೇಶಗಳಲ್ಲೂ ಜನರು ತೆಲುಗು ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ’ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಮಾತನಾಡಿದ್ದರು.

ಪ್ರಭಾಸ್​, ರಾನಾ ದಗ್ಗುಬಾಟಿ, ತಮನ್ನಾ ಹಾಗೂ ಅನುಷ್ಕಾ ಶೆಟ್ಟಿ ನಟಿಸಿದ್ದ, ರಾಜಮೌಳಿ ನಿರ್ದೇಶನದ ‘ಬಹುಬಲಿ’ ಸರಣಿಯ ಎರಡೂ ಚಿತ್ರಗಳು ಹಿಟ್​ ಆಗಿದ್ದವು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಕಳೆದ ವರ್ಷಾಂತ್ಯಕ್ಕೆ ತೆರೆಕಂಡ ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರ ಕೂಡ ಒಳ್ಳೆಯ ಹೆಸರು ಮಾಡಿತ್ತು. ಈ ಚಿತ್ರಗಳನ್ನು ಮೋದಿ ಹೊಗಳಿದ್ದರು. ಈ ಸಿನಿಮಾಗಳು ನಮ್ಮ ಹೆಮ್ಮೆ ಎಂದು ಕೊಂಡಾಡಿದ್ದರು. ಈ ವಿಚಾರದಲ್ಲಿ ರಾಮ್​ ಗೋಪಾಲ್​ ವರ್ಮಾ ಟಾಲಿವುಡ್​ಅನ್ನು ಟೀಕಿಸಿದ್ದಾರೆ.

‘ಟಾಲಿವುಡ್​ ಮಂದಿ ಪ್ರಧಾನಿ ಮೋದಿ ಹೊಗಳಿದ ವಿಚಾರಕ್ಕೆ ಸಂತಸ ಪಡುವ ಅಗತ್ಯವಿಲ್ಲ. ಅವರು ‘ಬಾಹುಬಲಿ’ ಹಾಗೂ ‘ಪುಷ್ಪ’ ಚಿತ್ರಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ನಾವು ಪ್ರತಿ ವರ್ಷ ಮಾಡುವ ಇತರ 150 ಚಿತ್ರಗಳ ಬಗ್ಗೆ ಅವರು ಮಾತನಾಡಿಲ್ಲ. ರಾಜಮೌಳಿ ಹಾಗೂ ಅಲ್ಲು ಅರ್ಜುನ್ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್‌ವುಡ್ ಅನ್ನು ಹೊಗಳುತ್ತಿದ್ದರು’ ಎಂದಿದ್ದಾರೆ. ಈ ಮೂಲಕ ಆ ದಿಗ್ಗಜರು ಇರುವುದಕ್ಕೆ ಟಾಲಿವುಡ್​​​ನ ಖ್ಯಾತಿ ಹೆಚ್ಚಿದೆ. ಇದಕ್ಕೆ ಎಲ್ಲಾ ಚಿತ್ರಗಳು ಕಾರಣವಾಗಿಲ್ಲ. ಕೆಲವೇ ಸ್ಟಾರ್​ಗಳು ಇದಕ್ಕೆ ಸಹಾಯ ಮಾಡಿದ್ದಾರೆ ಎಂಬರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹುಡುಗಿಯ​ ಅಂಗದ ಬಗ್ಗೆ ಮಾತನಾಡಿ ಕಾಫಿ ಶಾಪ್​ನಲ್ಲಿ ಕೆನ್ನೆಗೆ ಏಟು ತಿಂದ ರಾಮ್​ ಗೋಪಾಲ್​ ವರ್ಮಾ

‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ