ಪ್ರೊಡಕ್ಷನ್​ ಹೌಸ್​ ಆರಂಭಿಸಿದ ‘ಕೆಜಿಎಫ್​ 2’ ವಿಲನ್​​; ಸಂಜಯ್​ ದತ್​ಗಿದೆ ದೊಡ್ಡ ಕನಸು

2010ಕ್ಕೂ ಮೊದಲು ಬಾಲಿವುಡ್​ನಲ್ಲಿ ಸಾಕಷ್ಟು ಸೂಪರ್​ಹಿಟ್​ ಚಿತ್ರಗಳು ತೆರೆಗೆ ಬಂದಿವೆ. ಅದಕ್ಕೆ ಹೋಲಿಕೆ ಮಾಡಿದರೆ, ಈಗ ಬಾಲಿವುಡ್​ ಕೊಂಚ ಮಂಕಾಗಿದೆ. ಆ ಸುವರ್ಣ ಯುಗವನ್ನು ಮರಳಿ ತರಬೇಕು ಎನ್ನುವ ಕನಸಿನೊಂದಿಗೆ ಈ ನಿರ್ಮಾಣ ಸಂಸ್ಥೆ ಆರಂಭವಾಗಿದೆ.

ಪ್ರೊಡಕ್ಷನ್​ ಹೌಸ್​ ಆರಂಭಿಸಿದ ‘ಕೆಜಿಎಫ್​ 2’ ವಿಲನ್​​; ಸಂಜಯ್​ ದತ್​ಗಿದೆ ದೊಡ್ಡ ಕನಸು
ಸಂಜಯ್ ದತ್
TV9kannada Web Team

| Edited By: Rajesh Duggumane

Feb 08, 2022 | 12:04 PM

ಸಂಜಯ್​ ದತ್ (Sanjay Dutt)​ ಅವರು ಕಳೆದ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಸಂಜಯ್ ದತ್​ ಅವರು ನಟನೆ ಬಿಟ್ಟು ಬೇರಾವ ವಿಚಾರಕ್ಕೂ ತಲೆಕೆಡಿಸಿಕೊಂಡವರಲ್ಲ. ‘ಹಿಂದಿ ಬಿಗ್​ ಬಾಸ್​ 5’ಅನ್ನು ಸಂಜಯ್ ದತ್​ ಹೋಸ್ಟ್​ ಮಾಡಿದ್ದು ಬಿಟ್ಟರೆ, ಕಿರುತೆರೆಯಲ್ಲಿ ಅವರು ಕೆಲಸ ಮಾಡಿಲ್ಲ. ಈಗ ಸಂಜಯ್ ದತ್​ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಲವತ್ತು ವರ್ಷಗಳ ಅನುಭವ ಹಾಗೂ ಗಳಿಕೆಯನ್ನು ಕೂಡಿಸಿ ಅವರು ನಿರ್ಮಾಣ ಸಂಸ್ಥೆ (Production House) ಒಂದನ್ನು ಆರಂಭಿಸಿದ್ದಾರೆ. ಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆ ಅವರದ್ದು. ಈ ಮೂಲಕ ನಿರ್ಮಾಪಕರಾಗಿಯೂ ಸಂಜಯ್​ ದತ್​ ಈಗ ಬಡ್ತಿ ಪಡೆದಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

2010ಕ್ಕೂ ಮೊದಲು ಬಾಲಿವುಡ್​ನಲ್ಲಿ ಸಾಕಷ್ಟು ಸೂಪರ್​ಹಿಟ್​ ಚಿತ್ರಗಳು ತೆರೆಗೆ ಬಂದಿವೆ. ಅದಕ್ಕೆ ಹೋಲಿಕೆ ಮಾಡಿದರೆ, ಈಗ ಬಾಲಿವುಡ್​ ಕೊಂಚ ಮಂಕಾಗಿದೆ. ಆ ಸುವರ್ಣ ಯುಗವನ್ನು ಮರಳಿ ತರಬೇಕು ಎನ್ನುವ ಕನಸಿನೊಂದಿಗೆ ಈ ನಿರ್ಮಾಣ ಸಂಸ್ಥೆ ಆರಂಭವಾಗಿದೆ. ‘ಥ್ರೀ ಡೈಮೆನ್ಶನ್​ ಮೋಷನ್​ ಪಿಕ್ಚರ್ಸ್​’ ಎಂಬ ಹೆಸರನ್ನು ಸಂಜಯ್​ ದತ್​ ಈ ನಿರ್ಮಾಣ ಸಂಸ್ಥೆಗೆ ಇಟ್ಟಿದ್ದಾರೆ.

ಬಾಲಿವುಡ್​ನಲ್ಲಿ ಭಿನ್ನ ಸಿನಿಮಾಗಳನ್ನು ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಅವರು ಈ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾವು ಚಿತ್ರರಂಗಕ್ಕೆ ಕಾಲಿಟ್ಟಾಗ ಹೀರೋಯಿಸಂ ಶುರುಮಾಡಿದೆವು. ಅದು ಈಗ ನಿಂತಿದೆ ಎನ್ನುವ ಭಾವನೆ ಕಾಡುತ್ತಿದೆ. ಹೀಗಾಗಿ, ಅದನ್ನು ಮತ್ತೆ ತರಬೇಕಿದೆ. ಅದಕ್ಕಾಗಿ ಈ ಸಿನಿಮಾ’ ಎಂದಿದ್ದಾರೆ ಸಂಜಯ್​ ದತ್.

1981ರಲ್ಲಿ ತೆರೆಗೆ ಬಂದ ‘ರಾಕಿ’ ಚಿತ್ರದ ಮೂಲಕ ಹೀರೋ ಆಗಿ ಬಣ್ಣದ ಬದುಕು ಆರಂಭಿಸಿದರು ಸಂಜಯ್​ ದತ್​. 80 ಹಾಗೂ 90ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿದ್ದರು. ಸಿದ್ಧಾಂತ್​ ಸಚ್​ದೇವ್​ ನಿರ್ದೇಶನದ ಹಾರರ್​-ಕಾಮಿಡಿ ಚಿತ್ರವನ್ನು ‘ಥ್ರೀ ಡೈಮೆನ್ಶನ್​ ಮೋಷನ್​ ಪಿಕ್ಚರ್ಸ್​’ ನಿರ್ಮಾಣ ಮಾಡುತ್ತಿದೆ. ನಾಲ್ಕು ಹೊಸ ಮುಖಗಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರು ಇಟ್ಟಿಲ್ಲ.

ತಮ್ಮ ಸಿನಿಮಾಗಳ ಬಗ್ಗೆ ಇತ್ತೀಚೆಗೆ ಅವರು ಮಾತನಾಡಿದ್ದರು. ‘2022 ಆರಂಭದಲ್ಲೇ ನನ್ನ ಮೂರು ಚಿತ್ರಗಳು ಬಿಡುಗಡೆ ಆಗಬೇಕಿದೆ. ಇದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಸಿನಿಮಾಗಳು ರಿಲೀಸ್​ ಆಗುವುದಕ್ಕೆ ಎದುರು ನೋಡುತ್ತಿದ್ದೇನೆ. ಆದರೆ, ಕೊವಿಡ್​ ಹೆಚ್ಚುತ್ತಿದೆ. ಹೀಗಾಗಿ ಎಲ್ಲವೂ ಅನಿಶ್ಚಿತವಾಗಿದೆ. ‘ಶಂಶೇರಾ’, ‘ಕೆಜಿಎಫ್ 2’ ಮತ್ತು ‘ಪೃಥ್ವಿರಾಜ್’ ಈ ಮೂರು ಚಿತ್ರಗಳು ಥಿಯೇಟರ್​ ರಿಲೀಸ್​​ಗಾಗಿಯೇ ಮಾಡಿದ್ದಾಗಿದೆ’ ಎಂದಿದ್ದರು ಸಂಜಯ್​ ದತ್​. ಯಶ್​ ನಟನೆಯ ‘ಕೆಜಿಎಫ್​ 2’ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್

 ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada