‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್

‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್
ರವೀನಾ ಟಂಡನ್, ಸಂಜಯ್ ದತ್

Sanjay Dutt | Raveena Tandon: ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಅವರು ಒಪ್ಪಂದಕ್ಕೆ ಸಹಿ ಹಾಕುವುದು ಬಾಕಿ ಇದೆ. ಅಷ್ಟರಲ್ಲಿ ಕಥೆಯ ಫೈನಲ್​ ಡ್ರಾಫ್ಟ್​ ಸಿದ್ಧವಾಗಬೇಕಿದೆ.

TV9kannada Web Team

| Edited By: Madan Kumar

Jan 19, 2022 | 12:13 PM

1990ರ ದಶಕದಲ್ಲಿ ನಟಿ ರವೀನಾ ಟಂಡನ್​ (Raveena Tandon) ಅವರು ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಬಹುಬೇಡಿಕೆಯ ನಟಿಯಾಗಿ ಅವರು ಗುರುತಿಸಿಕೊಂಡಿದ್ದರು. ಅದೇ ರೀತಿ ಸಂಜಯ್​ ದತ್​ ಕೂಡ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದರು. ಈಗ ಇವರಿಬ್ಬರು ನಟಿಸಿರುವ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೊವಿಡ್​ ಕಾರಣದಿಂದ ಈ ಚಿತ್ರದ ರಿಲೀಸ್​ ತಡವಾಗಿದೆ. ಈ ಬಾಲಿವುಡ್​ ಕಲಾವಿದರ ಎಂಟ್ರಿಯಿಂದಾಗಿ ‘ಕೆಜಿಎಫ್​ 2’ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ. ರವೀನಾ ಟಂಡನ್​ ನಿಭಾಯಿಸಿರುವ ರಮಿಕಾ ಸೇನ್​ ಪಾತ್ರ ಹಾಗೂ ಸಂಜಯ್​ ದತ್​ (Sanjay Dutt) ಅಭಿನಯಿಸಿರುವ ಅಧೀರ ಪಾತ್ರದಿಂದಾಗಿ ಬೆಟ್ಟದಷ್ಟು ಹೈಪ್​ ಸೃಷ್ಟಿ ಆಗಿದೆ. ವಿಶೇಷ ಏನೆಂದರೆ, ಈ ಸಿನಿಮಾ ರಿಲೀಸ್​ ಆಗುವುದಕ್ಕೂ ಮುನ್ನವೇ ಇನ್ನೊಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಸಂಜಯ್​ ದತ್​ ಮತ್ತು ರವೀನಾ ಟಂಡನ್​ ಅವರು ಇನ್ನೊಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆ ಚಿತ್ರದಲ್ಲಿ ಕಾಮಿಡಿ ಡ್ರಾಮಾ ಕಥೆ ಇರಲಿದೆ.

‘ಮಿಡ್​ ಡೇ’ ಪ್ರಕಟಿಸಿರುವ ವರದಿ ಪ್ರಕಾರ ಸಂಜಯ್​ ದತ್​ ಮತ್ತು ರವೀನಾ ಟಂಡನ್​ ನಟಿಸಲಿರುವ ಈ ಸಿನಿಮಾಗೆ ಹೊಸ ನಿರ್ದೇಶಕರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯೊಂದು ಬಂಡವಾಳ ಹೂಡಲಿದೆ. ಸಂಜಯ್​ ದತ್​ ಮತ್ತು ರವೀನಾ ಟಂಡನ್ ಜೊತೆಗೆ ನಿರ್ಮಾಪಕರು ಈಗಾಗಲೇ ಮಾತುಕತೆ ನಡೆದಿದೆ. ಇಬ್ಬರಿಂದಲೂ ಗ್ರೀನ್​ ಸಿಗ್ನಲ್​ ಸಿಕ್ಕಿದೆ ಎನ್ನಲಾಗಿದೆ.

ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಅವರು ಒಪ್ಪಂದಕ್ಕೆ ಸಹಿ ಹಾಕುವುದು ಬಾಕಿ ಇದೆ. ಅಷ್ಟರಲ್ಲಿ ಕಥೆಯ ಫೈನಲ್​ ಡ್ರಾಫ್ಟ್​ ಸಿದ್ಧವಾಗಬೇಕಿದೆ. ಫೆಬ್ರವರಿ ವೇಳೆಗೆ ಈ ಸಿನಿಮಾ ಅಧಿಕೃತವಾಗಿ ಘೋಷಣೆ ಆಗುವ ನಿರೀಕ್ಷೆ ಇದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಜತೆಯಾಗಿ ನಟಿಸಿದ್ದರು. ಈ ಜೋಡಿ ತೆರೆಹಂಚಿಕೊಂಡಿದ್ದ ‘ಕ್ಷತ್ರಿಯಾ’ (1993), ‘ಆತಿಶ್​’ (1994) ಸಿನಿಮಾಗಳು ಹಿಟ್​ ಆಗಿದ್ದವು. 1996ರಲ್ಲಿ ತೆರೆಕಂಡ ‘ವಿಜೇತ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡಿತು.

ರವೀನಾ ಟಂಡನ್​ ಅವರು ಕನ್ನಡ ಸಿನಿಪ್ರಿಯರಿಗೆ ಪರಿಚಯಗೊಂಡಿದ್ದು ‘ಉಪೇಂದ್ರ’ ಸಿನಿಮಾ ಮೂಲಕ. 1999ರಲ್ಲಿ ಬಿಡುಗಡೆಯಾದ ಆ ಚಿತ್ರ ಸೂಪರ್​ ಹಿಟ್​ ಆಗಿತ್ತು. ಬಹುವರ್ಷಗಳ ಬಳಿಕ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೂಲಕ ಮತ್ತೆ ಕನ್ನಡದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸಂಜಯ್​ ದತ್​ ಅವರು ‘ಕೆಜಿಎಫ್​ 2’ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ ರಿಲೀಸ್​ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಂಜಯ್​ ದತ್​

‘ಈ ಪರಿಸ್ಥಿತಿ ಬರಲಿದೆ ಎಂಬುದನ್ನು ಮೊದಲೇ ನಿರೀಕ್ಷಿಸಿದ್ದೆವು; ‘ಕೆಜಿಎಫ್​ 2’ ರಿಲೀಸ್​ ಬಗ್ಗೆ ಯಶ್ ಮಾತು

Follow us on

Related Stories

Most Read Stories

Click on your DTH Provider to Add TV9 Kannada