‘ಈ ಪರಿಸ್ಥಿತಿ ಬರಲಿದೆ ಎಂಬುದನ್ನು ಮೊದಲೇ ನಿರೀಕ್ಷಿಸಿದ್ದೆವು; ‘ಕೆಜಿಎಫ್​ 2’ ರಿಲೀಸ್​ ಬಗ್ಗೆ ಯಶ್ ಮಾತು

‘ಕೆಜಿಎಫ್​ 2’ ರಿಲೀಸ್​ ದಿನಾಂಕ ಮುಂದೂಡಲ್ಪಡಲಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಇತ್ತೀಚೆಗೆ ಯಶ್​ ಬರ್ತ್​ಡೇ ಪ್ರಯುಕ್ತ ‘ಕೆಜಿಎಫ್​ 2’ ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. ಈ ಪೋಸ್ಟರ್​ನಲ್ಲಿ ರಿಲೀಸ್​ ದಿನಾಂಕ ಏಪ್ರಿಲ್​ 14 ಎಂದು ಬರೆಯಲಾಗಿತ್ತು.

‘ಈ ಪರಿಸ್ಥಿತಿ ಬರಲಿದೆ ಎಂಬುದನ್ನು ಮೊದಲೇ ನಿರೀಕ್ಷಿಸಿದ್ದೆವು; ‘ಕೆಜಿಎಫ್​ 2’ ರಿಲೀಸ್​ ಬಗ್ಗೆ ಯಶ್ ಮಾತು
ಯಶ್​

ಕೊರೊನಾ ವೈರಸ್​ (CoronaVirus) ಮೂರನೆ ಅಲೆ (Covid 3rd Wave)  ಕಾಣಿಸಿಕೊಂಡಿದೆ. ವಿಶ್ವಾದ್ಯಂತ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಕೊವಿಡ್​ ಲಸಿಕೆ ನೀಡಿರುವುದರಿಂದ ಮೊದಲಿನಷ್ಟು ಸಾವು ಸಂಭವಿಸುತ್ತಿಲ್ಲ. ವೈರಸ್​ ಮೊದಲಿನಷ್ಟು ಹಾನಿ ಮಾಡುತ್ತಿಲ್ಲ ಎಂಬುದು ಜನರಿಗೆ ಮನವರಿಕೆ ಆಗಿದೆ. ಆದರೆ, ಅನಿಶ್ಚಿತತೆ ಮುಂದುವರಿದಿದೆ. ವೀಕೆಂಡ್ ಕರ್ಫ್ಯೂ ಹಾಗೂ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ನಿಯಮದಿಂದ ಹೊಸ ಸಿನಿಮಾಗಳು ರಿಲೀಸ್​ ಆಗುತ್ತಿಲ್ಲ. ಈಗಾಗಲೇ ದೊಡ್ಡ ಬಜೆಟ್​ನ ಸಾಕಷ್ಟು ಸಿನಿಮಾಗಳು ರಿಲೀಸ್​ ದಿನಾಂಕವನ್ನು ಮುಂದೂಡಿವೆ. ಹಾಗಾದರೆ, ‘ಕೆಜಿಎಫ್​ 2’ ಚಿತ್ರದ (KGF Chapter 2) ಕಥೆ ಏನು? ಈ ಬಗ್ಗೆ ಯಶ್​ (Yash) ಮಾತನಾಡಿದ್ದಾರೆ.

ಕಳೆದ ಜುಲೈ ತಿಂಗಳಲ್ಲೇ ‘ಕೆಜಿಎಫ್​ 2’ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕವನ್ನು 8 ತಿಂಗಳು ಮುಂದೂಡಿತ್ತು ಚಿತ್ರತಂಡ. ಸಿನಿಮಾ ಕೆಲಸ ಬಹುತೇಕ ಪೂರ್ಣಗೊಂಡ ಹೊರತಾಗಿಯೂ ಸಿನಿಮಾ ರಿಲೀಸ್​ ದಿನಾಂಕವನ್ನು ಇಷ್ಟು ದೂರಕ್ಕೆ ತಳ್ಳಿದ್ದೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಯಶ್​ ಕಡೆಯಿಂದ ಉತ್ತರ ಸಿಕ್ಕಿದೆ. ಈ ರೀತಿಯ ಪರಿಸ್ಥಿತಿ ಬರಲಿದೆ ಎಂಬ ಅನುಮಾನ ಅವರಿಗೆ ಮೊದಲೇ ಇತ್ತು. ಈ ಕಾರಣಕ್ಕೆ ಏಪ್ರಿಲ್​ ತಿಂಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಕೊವಿಡ್ ಮೂರನೇ ಅಲೆ ಶೀಘ್ರವೇ ಕಡಿಮೆ ಆಗಲಿದೆ ಎನ್ನುವ ಅಭಿಪ್ರಾಯ ಅವರದ್ದು.

‘ಶೀಘ್ರವೇ ಮೂರನೆ ಅಲೆ ಕಡಿಮೆ ಆಗಲಿದೆ. ತಜ್ಞರ ವರದಿ ಆಧರಿಸಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಸಿನಿಮಾ ರಿಲೀಸ್​ ದಿನಾಂಕವನ್ನು 8 ತಿಂಗಳ ಕಾಲ ಮುಂದೂಡಿದ್ದು ಏಕೆ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ನಾವು ಈ ರೀತಿಯ ಪರಿಸ್ಥಿತಿ ಬರುತ್ತದೆ ಎಂದು ನಿರೀಕ್ಷಿಸಿದ್ದೆವು. ಹೀಗಾಗಿ, ಸೇಫ್​ ರಿಲೀಸ್​ ದಿನಾಂಕವನ್ನು ಆಯ್ಕೆ ಮಾಡಿಕೊಂಡೆವು’ ಎಂದು ಯಶ್ ಮಾಧ್ಯಮ ಒಂದರ ಸಂದರ್ಶನದಲ್ಲಿ ಹೇಳಿದ್ದಾರೆ.

‘ಕೆಜಿಎಫ್​ 2’ ರಿಲೀಸ್​ ದಿನಾಂಕ ಮುಂದೂಡಲ್ಪಡಲಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಇತ್ತೀಚೆಗೆ ಯಶ್​ ಬರ್ತ್​ಡೇ ಪ್ರಯುಕ್ತ ‘ಕೆಜಿಎಫ್​ 2’ ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. ಈ ಪೋಸ್ಟರ್​ನಲ್ಲಿ ರಿಲೀಸ್​ ದಿನಾಂಕ ಏಪ್ರಿಲ್​ 14 ಎಂದು ಬರೆಯಲಾಗಿತ್ತು. ಈ ಮೂಲಕ ಮೊದಲು ತಿಳಿಸಿದ ದಿನಾಂಕದಂದೇ ಬರುವ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್ ಲಿಪ್ ಲಾಕ್; ವೈರಲ್ ಆಯ್ತು ಫೋಟೋ, ವಿಡಿಯೋ

‘ಕೆಜಿಎಫ್​ ಸಿನಿಮಾ ಕಥೆ ಆಧರಿಸಿಯೇ ‘ಪುಷ್ಪ’ ಚಿತ್ರ ರೆಡಿ ಆಯ್ತು’; ಹೋಲಿಕೆ ಮಾಡಿ ಕಿಡಿಕಾರಿದ ನೆಟ್ಟಿಗರು

Click on your DTH Provider to Add TV9 Kannada