‘ಕೆಜಿಎಫ್​ ಸಿನಿಮಾ ಕಥೆ ಆಧರಿಸಿಯೇ ‘ಪುಷ್ಪ’ ಚಿತ್ರ ರೆಡಿ ಆಯ್ತು’; ಹೋಲಿಕೆ ಮಾಡಿ ಕಿಡಿಕಾರಿದ ನೆಟ್ಟಿಗರು

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​’ ಸಿನಿಮಾ ಸಖತ್​ ಮನರಂಜನೆ ನೀಡಿತ್ತು. ಬಡ ಕುಟುಂಬದ ಹುಡುಗನೊಬ್ಬ ಡಾನ್​ ಆಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದರ ಜತೆಗೆ ಕೆಜಿಎಫ್​ ಚಿನ್ನದ ಗಣಿಯನ್ನು ಕೂಡ ಹೈಲೈಟ್​ ಮಾಡಲಾಗಿದೆ.

‘ಕೆಜಿಎಫ್​ ಸಿನಿಮಾ ಕಥೆ ಆಧರಿಸಿಯೇ ‘ಪುಷ್ಪ’ ಚಿತ್ರ ರೆಡಿ ಆಯ್ತು’; ಹೋಲಿಕೆ ಮಾಡಿ ಕಿಡಿಕಾರಿದ ನೆಟ್ಟಿಗರು
ಯಶ್​-ಅಲ್ಲು ಅರ್ಜುನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 11, 2022 | 11:19 AM

‘ಪುಷ್ಪ’ ಸಿನಿಮಾದ (Pushpa Movie) ಬಗ್ಗೆ ಕನ್ನಡದ ಒಂದಷ್ಟು ಮಂದಿಗೆ ಸಿಟ್ಟಿದೆ. ಇದಕ್ಕೆ ಕಾರಣ ತೆಲುಗಿನವರು ‘ಒಂದು ‘ಪುಷ್ಪ’ 10 ‘ಕೆಜಿಎಫ್’​ಗೆ (KGF Movie) ಸಮ’ ಎನ್ನುವ ಮಾತನ್ನು ಹೇಳಿದ್ದರು. ಚಿತ್ರ ತೆರೆಕಂಡ ನಂತರದಲ್ಲಿ ಈ ಹೇಳಿಕೆಗೆ ಅರ್ಥವಿಲ್ಲ ಎಂಬುದು ಸಾಬೀತಾಯಿತು. ಅನೇಕರು ಟ್ವಿಟರ್​ನಲ್ಲಿ ‘ಪುಷ್ಪ’ ಚಿತ್ರವನ್ನು ಟೀಕೆ ಮಾಡೋಕೆ ಆರಂಭಿಸಿದರು. ‘ಯಶ್​ (Yash) ಅಭಿನಯದ ‘ಕೆಜಿಎಫ್’​  ಬೆಸ್ಟ್’​ ಎಂದು ಹೊಗಳಿಕೊಳ್ಳೋಕೆ ಶುರು ಮಾಡಿದರು. ‘ಪುಷ್ಪ’ ಸಿನಿಮಾ ಈಗ ಒಟಿಟಿಗೆ ಕಾಲಿಟ್ಟಿದೆ. ಚಿತ್ರಮಂದಿರದಲ್ಲಿ ಈ ಚಿತ್ರ ನೋಡದೇ ಇದ್ದ ಅನೇಕರು ಈಗ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಒಟಿಟಿಯಲ್ಲಿ ‘ಪುಷ್ಪ’ ನೋಡಿದ ನಂತರದಲ್ಲಿ ಕೆಲವರಿಗೆ ‘ಪುಷ್ಪ’ ಕಥೆಯ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳಲಾಗುತ್ತಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​’ ಸಖತ್​ ಮನರಂಜನೆ ನೀಡಿತ್ತು. ಬಡ ಕುಟುಂಬದ ಹುಡುಗನೊಬ್ಬ ಡಾನ್​ ಆಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದರ ಜತೆಗೆ ಕೆಜಿಎಫ್​ ಚಿನ್ನದ ಗಣಿಯನ್ನು ಕೂಡ ಹೈಲೈಟ್​ ಮಾಡಲಾಗಿದೆ. ‘ಪುಷ್ಪ’ ಚಿತ್ರದ ಕಥೆಯೂ ಇದೇ ರೀತಿ ಇದೆ ಎಂದು ಕೆಲವರು ಬರೆದುಕೊಂಡಿದ್ದಾರೆ. ಬಡ ಕುಟುಂಬದಿಂದ ಬಂದ ಹುಡುಗ ರಕ್ತಚಂದನ ದಂಧೆಗೆ ಇಳಿದು ಹೇಗೆ ಡಾನ್​ ಆಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಚಿತ್ರ ಹೇಳಲಾಗಿದೆ. ಹಾಗಾದರೆ, ನೆಟ್ಟಿಗರು ಮಾಡಿದ ಹೋಲಿಕೆ ಏನು? ಇಲ್ಲಿದೆ ಉತ್ತರ.

‘ಪುಷ್ಪ ಚಿತ್ರ ತಂಡದವರು ಕೆಜಿಎಫ್​ ಚಿತ್ರವನ್ನು ನೋಡಿ ಕಾಪಿ ಮಾಡುತ್ತಿದ್ದಾರೆ’ ಎಂದು ಅರ್ಥ ಬರುವ ರೀತಿಯಲ್ಲಿ ಟ್ವೀಟ್​ ಒಂದನ್ನು ಮಾಡಲಾಗಿದೆ. ಇದಕ್ಕೆ ಕೆಲವರು ‘ಕೆಜಿಎಫ್​ ಕಥೆ ಆಧರಿಸಿಯೇ ಪುಷ್ಪ ಸಿನಿಮಾ ರೆಡಿ ಆಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನು, ಈ ಟ್ವೀಟ್​ಗೆ ಒಂದು ಕಮೆಂಟ್​ ಬಂದಿದೆ. ಈ ಕಮೆಂಟ್​ನಲ್ಲಿ ಎರಡೂ ಚಿತ್ರಕ್ಕೆ ಇರುವ ಸಾಮ್ಯತೆ ವಿಚಾರಗಳು ಏನು ಎಂಬುದನ್ನು ಬರೆಯಲಾಗಿದೆ.

  • ಇಲ್ಲಿ ಕೋಲಾರದ ಚಿನ್ನ-ಅಲ್ಲಿ ರಕ್ತ ಚಂದನ
  • ಇಲ್ಲಿ ನಾಲ್ಕು ಗ್ಯಾಂಗ್​-ಅಲ್ಲಿಯೂ ನಾಲ್ಕು ಗ್ಯಾಂಗ್​
  • ಇಲ್ಲಿ ಎರಡು ಭಾಗ-ಅಲ್ಲಿಯೂ ಎರಡು ಭಾಗ
  • ಇಲ್ಲಿ ಹೀರೋಗೆ ತಂದೆ ಇಲ್ಲ-ಪುಷ್ಪ ಚಿತ್ರದಲ್ಲೂ ಇಲ್ಲ.
  • ಇಲ್ಲಿ ಸಂಜಯ್​ ದತ್​-ಅಲ್ಲಿ ಫಹಾದ್​ ಫಾಸಿಲ್​

ಆದರೆ, ಕೆಲವರು ಇದನ್ನು ಒಪ್ಪಿಲ್ಲ. ‘ಪುಷ್ಪ’ ಚಿತ್ರದ್ದು ಸ್ವಂತ ಕಥೆ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಮುಂದುವರಿದಿದೆ.

ಇದನ್ನೂ ಓದಿ: Yash Birthday: ಯಶ್​ ಬರ್ತ್​ಡೇಗೆ ವಿಶೇಷ ಕೇಕ್​​; ಗನ್​ ಹಿಡಿದು ನಿಂತ ರಾಕಿಂಗ್​ ಸ್ಟಾರ್​ 

Happy Birthday Yash: ಯಶ್​ ಹುಟ್ಟುಹಬ್ಬಕ್ಕೆ ‘ಕೆಜಿಎಫ್​ 2’ ಹೊಸ ಪೋಸ್ಟರ್​; ರಿಲೀಸ್​ ಡೇಟ್​ ಬಗ್ಗೆ ಇದ್ದ ಅನುಮಾನ ಕ್ಲಿಯರ್​

Published On - 7:38 am, Tue, 11 January 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್