ಒಂಟಿಯಾಗಿರುವುದನ್ನು ನಿಜಕ್ಕೂ ದ್ವೇಷಿಸುತ್ತೇನೆ ಎಂದ ಖುಷ್ಬೂ; ಅಂಥದ್ದೇನಾಯ್ತು?

ಒಂಟಿಯಾಗಿರುವುದನ್ನು ನಿಜಕ್ಕೂ ದ್ವೇಷಿಸುತ್ತೇನೆ ಎಂದ ಖುಷ್ಬೂ; ಅಂಥದ್ದೇನಾಯ್ತು?
ಖುಷ್ಬೂ

ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್​ಗೂ ಈಗ ಕೊರೊನಾ ವೈರಸ್​ ಅಂಟಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಕ್ವಾರಂಟೈನ್​ ಆಗಿರುವುದರಿಂದ ಒಂಟಿಯಾಗಿರುವ ಪರಿಸ್ಥಿತಿ ಅವರಿಗೆ ಬಂದೊದಗಿದೆ.

TV9kannada Web Team

| Edited By: Rajesh Duggumane

Jan 10, 2022 | 6:03 PM

ಕೊವಿಡ್​ ಮೂರನೇ ಅಲೆ (Corona 3rd Wave) ಕಾಣಿಸಿಕೊಂಡಿದೆ. ಕೊವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಮಧ್ಯೆ ಸಾಕಷ್ಟು ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಕೊವಿಡ್​ ಅಂಟುತ್ತಿದೆ. ಸಿನಿಮಾ ಕೆಲಸಗಳಿಗಾಗಿ ನಾನಾ ಕಡೆ ಸುತ್ತಾಟ ನಡೆಸುವ ಹಲವರು ಕೊವಿಡ್​ ಸೋಂಕಿಗೆ ತುತ್ತಾಗಿದ್ದಾರೆ. ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್​ಗೂ ಈಗ ಕೊರೊನಾ ವೈರಸ್​ ಅಂಟಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಕ್ವಾರಂಟೈನ್​ ಆಗಿರುವುದರಿಂದ ಒಂಟಿಯಾಗಿರುವ ಪರಿಸ್ಥಿತಿ ಅವರಿಗೆ ಬಂದೊದಗಿದೆ.

‘ಕೊವಿಡ್​ ಎರಡು ಅಲೆಯನ್ನು ತಪ್ಪಿಸಿಕೊಂಡೆ. ಆದರೆ, ಈಗ ಕೊವಿಡ್​ ಪಾಸಿಟಿವ್​ ಆಗಿದೆ. ನಿನ್ನೆ ಸಂಜೆಯವರೆಗೂ ನನಗೆ ಕೊವಿಡ್​ ನೆಗೆಟಿವ್​ ಆಗಿತ್ತು. ಆದರೆ, ಈಗ ಪಾಸಿಟಿವ್​ ವರದಿ ಬಂದಿದೆ. ನಾನು ಐಸೋಲೇಷನ್​ನಲ್ಲಿದ್ದೇನೆ. ಒಂಟಿಯಾಗಿರುವುದನ್ನು ನಿಜಕ್ಕೂ ದ್ವೇಷಿಸುತ್ತೇನೆ. ಮುಂದಿನ ಐದು ದಿನಗಳಕಾಲ ನನಗೆ ಮನರಂಜನೆ ನೀಡಿ. ಕೊವಿಡ್​ ಲಕ್ಷಣ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಖುಷ್ಬೂ ಟ್ವೀಟ್​ ಮಾಡಿದ್ದಾರೆ.

ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಖುಷ್ಬೂ ಅವರು ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರರಂಗದಲ್ಲಿ ಅವರು ಹೆಚ್ಚಾಗಿ ಸಕ್ರಿಯರಾಗಿಲ್ಲ. ಆದಾಗ್ಯೂ ಕನ್ನಡ ಚಿತ್ರರಂಗದ ಬಗ್ಗೆ ಹಾಗೂ ಇಲ್ಲಿನ ಕಲಾವಿದರ ಬಗ್ಗೆ ಇರುವ ಗೌರವ ಅವರಿಗೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಸಾಕಷ್ಟು ಕಡೆಗಳಲ್ಲಿ ಅವರು ಸ್ಯಾಂಡಲ್​ವುಡ್​ ಹಾಗೂ ಸ್ಯಾಂಡಲ್​ವುಡ್​ ಕಲಾವಿದರ ಬಗ್ಗೆ ಮಾತನಾಡಿದ್ದಿದೆ. ನವೆಂಬರ್​ 9ರಂದು ಖುಷ್ಬೂ ಬೆಂಗಳೂರಿನಲ್ಲಿರುವ ಪುನೀತ್​ ರಾಜ್​ಕುಮಾರ್​ ಮನೆಗೆ ಆಗಮಿಸಿದ್ದರು. ಈ ವೇಳೆ ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​ಗೆ ಸಾಂತ್ವನ ಹೇಳಿದ್ದರು.

ಇದನ್ನೂ ಓದಿ: ರವಿಚಂದ್ರನ್​ ತಂದೆ ಅಂದು ಮಾಡಿದ್ದ ಸಹಾಯವನ್ನು ಖುಷ್ಬೂ ಇನ್ನೂ ಮರೆತಿಲ್ಲ; ‘ಕ್ರೇಜಿ ಸ್ಟಾರ್’​ ಹೇಳ್ತಾರೆ ಕೇಳಿ..

ಹೇಗಿದ್ದ ಖುಷ್ಬೂ ಹೇಗಾದ್ರು ನೋಡಿ; ಅಚ್ಚರಿಯ ರೀತಿ ಸ್ಲಿಮ್​ ಆದ ‘ರಣಧೀರ’ ಚೆಲುವೆಯ ಸೀಕ್ರೆಟ್​ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada