ಹೇಗಿದ್ದ ಖುಷ್ಬೂ ಹೇಗಾದ್ರು ನೋಡಿ; ಅಚ್ಚರಿಯ ರೀತಿ ಸ್ಲಿಮ್​ ಆದ ‘ರಣಧೀರ’ ಚೆಲುವೆಯ ಸೀಕ್ರೆಟ್​ ಇಲ್ಲಿದೆ

ಹೇಗಿದ್ದ ಖುಷ್ಬೂ ಹೇಗಾದ್ರು ನೋಡಿ; ಅಚ್ಚರಿಯ ರೀತಿ ಸ್ಲಿಮ್​ ಆದ ‘ರಣಧೀರ’ ಚೆಲುವೆಯ ಸೀಕ್ರೆಟ್​ ಇಲ್ಲಿದೆ
ಖುಷ್ಬೂ

Kushboo Sundar: ಈ ಮೊದಲಿನ ಫೋಟೋ ಜತೆಗೆ ಇಂದಿನ ಫೋಟೋವನ್ನು ಅಕ್ಕಪಕ್ಕ ಇಟ್ಟು ಖುಷ್ಬೂ ಪೋಸ್ಟ್​ ಮಾಡಿದ್ದಾರೆ. ಎರಡೂ ಫೋಟೋದಲ್ಲಿನ ವ್ಯತ್ಯಾಸ ಕಂಡು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.

TV9kannada Web Team

| Edited By: Madan Kumar

Dec 05, 2021 | 11:48 AM

ಒಂದು ಕಾಲದ ಸ್ಟಾರ್​ ಹೀರೋಯಿನ್​ ಖುಷ್ಬೂ ಸುಂದರ್​ (Kushboo Sundar) ಅವರು ಈಗ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲೂ ಸಕ್ರಿಯರಾಗಿರುವ ಅವರು ಈಗ ಫಿಟ್ನೆಸ್ (Fitness)​ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಖುಷ್ಬೂ ಸಖತ್​ ದಪ್ಪ ಆಗಿದ್ದರು. ಅವರ ದೇಹದ ತೂಕ ಅಗತ್ಯಕ್ಕಿಂತ ಜಾಸ್ತಿ ಆಗಿತ್ತು. ಆದರೆ ಈಗ ಅವರು ಬದಲಾಗಿದ್ದಾರೆ. ಕಠಿಣ ಪರಿಶ್ರಮದಿಂದ ಬಳುಕುವ ಬಳ್ಳಿಯಂತೆ ಸ್ಲಿಮ್​ ಆಗಿದ್ದಾರೆ. ದೇಹದ ತೂಕ ಇಳಿಸಿಕೊಳ್ಳುವಲ್ಲಿ (Weight Loss) ತಾವು ಅನುಸರಿಸುತ್ತಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಸ್ಲಿಮ್​ ಅವತಾರದ ಫೋಟೋ (Kushboo Photos) ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

‘ಅಲ್ಲಿಂದ ಇಲ್ಲಿಯವರೆಗಿನ ಪಯಣ. 20 ಕೆಜಿ ಸಣ್ಣಗಾಗಿದ್ದೇನೆ. ತುಂಬ ಆರೋಗ್ಯಕರವಾಗಿದ್ದೇನೆ. ನಿಮ್ಮನ್ನು ನೀವು ನೋಡಿಕೊಳ್ಳಿ. ಆರೋಗ್ಯವೇ ಭಾಗ್ಯ. ನನಗೆ ಹುಷಾರಿಲ್ಲವೇ ಎಂದು ಕೆಲವರು ಕೇಳುತ್ತಿದ್ದೀರಿ. ನಿಮ್ಮ ಕಾಳಜಿಗೆ ಧನ್ಯವಾದ. ಈ ಹಿಂದೆ ಯಾವಾಗಲೂ ನಾನು ಇಷ್ಟು ಫಿಟ್​ ಆಗಿರಲಿಲ್ಲ. ತೂಕ ಕಡಿಮೆ ಮಾಡಿಕೊಂಡು ಫಿಟ್​ ಆಗುಲು ನಿಮ್ಮಲ್ಲಿ ಕನಿಷ್ಠ 10 ಜನರಿಗೆ ನಾನು ಸ್ಫೂರ್ತಿಯಾದರೆ ನಾನು ಗೆದ್ದಿದ್ದೇನೆ ಅಂತ ತಿಳಿದುಕೊಳ್ಳುತ್ತೇನೆ’ ಎಂದು ಖುಷ್ಬೂ ಹೇಳಿದ್ದಾರೆ.

ತಮ್ಮ ಈ ಮೊದಲಿನ ಫೋಟೋ ಜತೆಗೆ ಇಂದಿನ ಫೋಟೋವನ್ನು ಅಕ್ಕಪಕ್ಕ ಇಟ್ಟು ಖುಷ್ಬೂ ಪೋಸ್ಟ್​ ಮಾಡಿದ್ದಾರೆ. ಎರಡೂ ಫೋಟೋದಲ್ಲಿನ ವ್ಯತ್ಯಾಸ ಕಂಡು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. ಈ ಬದಲಾವನೆಯ ರಹಸ್ಯ ಏನು ಎಂದು ಕೂಡ ಅನೇಕರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಖುಷ್ಬೂ ಉತ್ತರ ನೀಡಿದ್ದಾರೆ. ‘ಪರಿಶ್ರಮ.. ಡಯೆಟ್​ ಜತೆಗೆ ವ್ಯಾಯಾಮ’ ಎಂದು ಅವರು ಕಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

1980 ಮತ್ತು 1990ರ ದಶಕದಲ್ಲಿ ಖುಷ್ಬೂ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಆಗಿದ್ದರು. ರವಿಚಂದ್ರನ್​ ಜತೆ ‘ರಣಧೀರ’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಕರುನಾಡಿನಲ್ಲಿ ಮನೆಮಾತಾಗಿದರು. ಬಳಿಕ ‘ಅಂಜದ ಗಂಡು’, ‘ಯುಗ ಪುರುಷ’ ಸಿನಿಮಾಗಳ ಮೂಲಕವೂ ಮೋಡಿ ಮಾಡಿದರು. ಕನ್ನಡ ಚಿತ್ರರಂಗದ ಜತೆ ಅವರು ಈಗಲೂ ನಂಟು ಹೊಂದಿದ್ದಾರೆ. ಇತ್ತೀಚೆಗೆ ಪುನೀತ್​ ರಾಜ್​ಕುಮಾರ್ ನಿಧನರಾದಾಗ ಅವರ ಆತ್ಮಕ್ಕೆ ಖುಷ್ಬೂ ಶಾಂತಿ ಕೋರಿದ್ದರು.

ಇದನ್ನೂ ಓದಿ:

ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

Follow us on

Related Stories

Most Read Stories

Click on your DTH Provider to Add TV9 Kannada