ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

ಪುನೀತ್​ ರಾಜ್​ಕುಮಾರ್​ ಅವರ ಹೃದಯಾಘಾತಕ್ಕೆ ಜಿಮ್ ವರ್ಕೌಟ್ ಕಾರಣ ಎಂಬ ಭಾವನೆ ಹಲವರಲ್ಲಿ ಬೇರೂರಿದೆ. ಹಾಗಾಗಿ ಜಿಮ್​ಗೆ ತೆರಳಲು ಅನೇಕರು ಹಿಂದೇಡು ಹಾಕುತ್ತಿದ್ದಾರೆ.

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ
ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 11, 2021 | 10:09 AM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅಪ್ಪು ವರ್ಕೌಟ್​ ಮಾಡುವ ವಿಡಿಯೋಗಳು (Puneeth Rajkumar workout video) ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಅಷ್ಟೊಂದು ಫಿಟ್​ ಆಗಿದ್ದವರು ಹೃದಯಾಘಾತದಿಂದ (Heart Attack) ಮೃತಪಟ್ಟಿರುವುದನ್ನು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಜಿಮ್​ನಲ್ಲಿ ವರ್ಕೌಟ್​ ಮಾಡುವುದಕ್ಕೂ ಹೃದಯಾಘಾತಕ್ಕೂ ಸಂಬಂಧ ಇದೆ ಎಂಬ ಭಾವನೆ ಅನೇಕರಲ್ಲಿ ಮೂಡಿದೆ. ಹಾಗಾಗಿ ಅಪ್ಪು ನಿಧನದ ಬಳಿಕ ಜಿಮ್​ಗೆ ಬರುವವರ ಸಂಖ್ಯೆಗಳಲ್ಲಿ ಗಣನೀಯ ಇಳಿಕೆ ಆಗಿದೆ. ಜಿಮ್ (Gym) ಮಾಡುವ ಯುವಕರಿಗೆ ಅಪ್ಪು ನಿಧನದ ಸುದ್ದಿ ಬಿಗ್ ಶಾಕ್ ಆಗಿದೆ. ಫಿಟ್ನೆಸ್ ಪ್ರಿಯರು ಕಳೆದ 2 ವಾರದಿಂದ ಜಿಮ್ ಕಡೆ ಮುಖ ಮಾಡುತ್ತಿಲ್ಲ. ಇದು ಜಿಮ್​ ಮಾಲೀಕರ ಆತಂಕಕ್ಕೆ ಕಾರಣ ಆಗಿದೆ.

ಪುನೀತ್​ ರಾಜ್​ಕುಮಾರ್​ ನಿಧನ ಬಳಿಕ ಎರಡು ದಿನ ಹಲವೆಡೆ ಜಿಮ್ ಬಂದ್ ಮಾಡಿ ಸಂತಾಪ ಸೂಚಿಸಲಾಗಿತ್ತು. ಇದೀಗ ಜಿಮ್​ ಓಪನ್ ಆಗಿದ್ದರೂ ಕೂಡ ಜನರು ವರ್ಕೌಟ್​ ಮಾಡಲು ಹೋಗುತ್ತಿಲ್ಲ. ರಾಜ್ಯಾದ್ಯಂತ ಜಿಮ್ ಬಗ್ಗೆ ಯುವಕರ ನಿರ್ಲಕ್ಷ್ಯದ ಮಾತು ಕೇಳಿಬರುತ್ತಿದೆ. ಪೋಷಕರು ಕೂಡ ಜಿಮ್​ಗೆ ಹೋಗದಂತೆ ಮಕ್ಕಳನ್ನು ತಡೆಯುತ್ತಿದ್ದಾರೆ. ಔಟ್ ಡೋರ್ ಫಿಟ್ನೆಸ್​ಗೆ ಆದ್ಯತೆ ಕೊಡವಂತೆ ಸಲಹೆ ನೀಡುತ್ತಿದ್ದಾರೆ.

ರಾಜ್ಯದ್ಯಂತ ಶೇ.50ರಷ್ಟು ಮಂದಿ ಜಿಮ್‌ ಹೋಗಲು ಒಲವು ತೋರುತ್ತಿಲ್ಲ. ಬೆಂಗಳೂರಿನಲ್ಲಿ ಶೇ.60ರಷ್ಟು ಜನರು ಜಿಮ್​ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪುನೀತ್​ ಅವರ ಹೃದಯಾಘಾತಕ್ಕೆ ಜಿಮ್ ವರ್ಕೌಟ್ ಕಾರಣ ಎಂಬ ಭಾವನೆ ಹಲವರಲ್ಲಿ ಬೇರೂರಿದೆ. ‘ಪ್ರತಿ ದಿನ 130 ಯುವಕ-ಯುವತಿಯರು ಜಿಮ್​ಗೆ ಬರುತಿದ್ದರು. ಆದರೆ ಈಗ 50ರಿಂದ 70 ಜನರು ಮಾತ್ರ ಬರುತ್ತಿದ್ದಾರೆ. ಕೊರೊನಾ ಸಂಕಷ್ಟದಿಂದ ಈಗಷ್ಟೇ ಹೊರ ಬರುತ್ತಿದ್ದೇವೆ. ಇಂಥ ಹೊತ್ತಿನಲ್ಲಿ ಮತ್ತೆ ತೊಂದರೆಯಾಗುತ್ತಿದೆ’ ಎಂದಿದ್ದಾರೆ ಕತ್ತರಿಗುಪ್ಪೆಯ ಜಿಮ್ ಟ್ರೈನರ್ ಸುರೇಶ್.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಕಡೆಗಳಲ್ಲಿ ಜಿಮ್​ ಪರಿಸ್ಥಿತಿ ಇದೇ ರೀತಿ ಆಗಿದೆ. ಕಲಬುರಗಿ ನಗರದಲ್ಲಿ ಪ್ರತಿ ದಿನ ತುಂಬಿರುತ್ತಿದ್ದ ಜಿಮ್​ಗಳು ಇದೀಗ ಖಾಲಿ ಹೊಡೆಯುತ್ತಿವೆ. ಒಂದು ಶಿಫ್ಟ್​ನಲ್ಲಿ ನಲವತ್ತು ಜನರು ಮೊದಲು ಬರುತ್ತಿದ್ದರು. ಇದೀಗ ಹತ್ತು ಜನ ಬರುತ್ತಿದ್ದಾರೆ. ಹೀಗಾಗಿ ಬಾಡಿಗೆ ಕಟ್ಟೋದು ಹೇಗೆ ಅನ್ನೋ ಚಿಂತೆ ಜಿಮ್ ಮಾಲೀಕರನ್ನು ಕಾಡುತ್ತಿದೆ.

ಸರಿಯಾದ ಕ್ರಮದಲ್ಲಿ ವರ್ಕೌಟ್​ ಮಾಡಿದರೆ ಯಾವುದೇ ತೊಂದರೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. ಜಿಮ್​​ಗೆ ತೆರಳುವ ಮುನ್ನ ಹೃದಯಕ್ಕೆ ಸಂಬಂಧಿಸಿದ ಒಂದಷ್ಟು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ವೈದ್ಯರಿಂದ ಕೇಳಿಬರುತ್ತದೆ.

ಇದನ್ನೂ ಓದಿ

‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ

ಸಕ್ರೆಬೈಲು ಆನೆ ಮರಿಗೆ ಪುನೀತ್​ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ

Published On - 9:59 am, Thu, 11 November 21

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ