Puneeth Rajkumar: ‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ
Puneeth Rajkumar workout: ಪುನೀತ್ ರಾಜ್ಕುಮಾರ್ ಅವರಂಥ ಶಿಸ್ತಿನ ವ್ಯಕ್ತಿಗೆ ಹೃದಯಾಘಾತ ಆಗಿದ್ದು ನಿಜಕ್ಕೂ ಶಾಕಿಂಗ್ ಸಂಗತಿ. ಅವರು ಅತಿಯಾಗಿ ಜಿಮ್ನಲ್ಲಿ ವರ್ಕೌಟ್ ಮಾಡಿದ್ದರು ಎಂಬ ವಿಚಾರವನ್ನು ಅವರ ಮನೆಯ ಸೆಕ್ಯೂರಿಟಿ ಸಿಬ್ಬಂದಿ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಫಿಟ್ನೆಸ್ಗೆ ಹೆಚ್ಚು ಗಮನ ನೀಡುತ್ತಿದ್ದರು. ಜಿಮ್ನಲ್ಲಿ ಹೆಚ್ಚು ಕಾಲ ವರ್ಕೌಟ್ ಮಾಡುತ್ತಿದ್ದರು. ಅಂಥ ಶಿಸ್ತಿನ ವ್ಯಕ್ತಿಗೆ ಹೃದಯಾಘಾತ ಆಗಿರುವುದು ನಿಜಕ್ಕೂ ಶಾಕಿಂಗ್ ಸಂಗತಿ. ಅವರು ಅತಿಯಾಗಿ ಜಿಮ್ನಲ್ಲಿ ವರ್ಕೌಟ್ ಮಾಡಿದ್ದರು ಎಂಬ ವಿಚಾರವನ್ನು ಅವರ ಮನೆಯ ಸೆಕ್ಯೂರಿಟಿ ಸಿಬ್ಬಂದಿ ಹೇಳಿದ್ದಾರೆ. ಶುಕ್ರವಾರ (ಅ.29) ಏನೆಲ್ಲ ಘಟನೆಗಳು ನಡೆದವು ಎಂಬುದನ್ನು ಅವರು ವಿವರಿಸಿದ್ದಾರೆ.
‘ಪುನೀತ್ ಸರ್ ಎರಡು ಕಡೆ ಜಿಮ್ ಮಾಡುತ್ತಿದ್ದರು. ಪಾರ್ಟಿಗೆ ಹೋಗಿಬಂದ ಮರುದಿನ ಅವರು ಇಲ್ಲೇ ವರ್ಕೌಟ್ ಮಾಡಿದರು. ಓವರ್ ಆಗಿ ಜಿಮ್ ಮಾಡಿದ್ದರು. ಅಷ್ಟು ಮಾಡಬಾರದಾಗಿತ್ತು. ನಂತರ ಅಶ್ವಿನಿ ಅಕ್ಕ ಫ್ಯಾಮಿಲಿ ಡಾಕ್ಟರ್ ಬಳಿ ಕರೆದುಕೊಂಡು ಹೋದರು. ಅಂದು ನಾನು ಬೆಳಗ್ಗೆ 8 ಗಂಟೆಗೆ ಡ್ಯೂಟಿಗೆ ಬಂದೆ. 11 ಗಂಟೆ ಪುನೀತ್ ಮತ್ತು ಅಶ್ವಿನಿ ಅಕ್ಕ ಮನೆಯಿಂದ ಹೊರಟರು. ಫ್ಯಾಮಿಲಿ ಡಾಕ್ಟರ್ ಬಂದು ಹೇಳಿದಾಗ ನಿಧನದ ವಿಚಾರ ತಿಳಿಸಿದರು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
Puneeth Rajkumar: ಅಶ್ಲೀಲ ಪದಗಳಿಂದ ಪುನೀತ್ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್ ಪುತ್ರಿ ಸಾನ್ವಿ ಗರಂ
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್

