ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು

TV9 Digital Desk

| Edited By: ಮದನ್​ ಕುಮಾರ್​

Updated on: Nov 14, 2021 | 12:19 PM

ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರು ಇನ್ನೇನು ನಿಧಾನವಾಗಿ ನಾರ್ಮಲ್​ ಜೀವನ ಶೈಲಿಗೆ ಹೊಂದಿಕೊಳ್ಳುತ್ತಿದ್ದಾರೆ ಎನ್ನುವಾಗಲೇ ವಂಚನೆ ಆರೋಪ ಎದುರಾಗಿದೆ. ಆ ಮೂಲಕ ಅವರ ಕುಟುಂಬಕ್ಕೆ ಮತ್ತೆ ಸಂಕಷ್ಟ ಬಂದಿದೆ.

ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು
ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರಿಗೆ ಒಂದರಮೇಲೊಂದು ಸಂಕಷ್ಟ ಬರುತ್ತಲೇ ಇದೆ. ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದಲ್ಲಿ ಅವರ ಪತಿ ರಾಜ್​ ಕುಂದ್ರಾ (Raj Kundra) ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಸದ್ಯಕ್ಕೆ ಅವರಿಗೆ ಜಾಮೀನು ಸಿಕ್ಕಿರುವುದರಿಂದ ಹೆಂಡತಿ-ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಅವರ ಕುಟುಂಬಕ್ಕೆ ಮತ್ತೊಂದು ಶಾಕ್​ ಎದುರಾಗಿದೆ. ಬರೋಬ್ಬರಿ 1.5 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅವರು ಕೆಲವು ಉದ್ಯಮಿಗಳಿಂದ ಭಾರಿ ಮೊತ್ತದ ಹಣ ಪಡೆದು ಮೋಸ (Cheating Case) ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು​ ಕೂಡ ದಾಖಲಾಗಿದೆ. ಇದರಿಂದ ಶಿಲ್ಪಾ ಶೆಟ್ಟಿ ಕುಟುಂಬ (Shilpa Shetty Family) ಮತ್ತೆ ಕಷ್ಟಕ್ಕೆ ಸಿಲುಕಿದೆ.

ಎಲ್ಲರಿಗೂ ಗೊತ್ತಿರುವಂತೆ ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್​ ವಿಚಾರದಲ್ಲಿ ತಜ್ಞರಾಗಿದ್ದಾರೆ. ಇತರರಿಗೂ ಅವರು ಯೋಗ ಹೇಳಿಕೊಡುತ್ತಾರೆ. ತಮ್ಮದೇ ಫಿಟ್ನೆಸ್​ ಕೇಂದ್ರಗಳನ್ನು ಹೊಂದಿರುವ ಅವರು, ದೇಶದ ಬೇರೆ ಬೇರೆ ನಗರದಲ್ಲಿ ಕೂಡ ಅದರ ಖಾತೆ ಆರಂಭಿಸಲು ಆಸಕ್ತಿ ತೋರಿಸಿದ್ದರು. ಅದಕ್ಕಾಗಿ ಕೆಲವು ಉದ್ಯಮಿಗಳಿಂದ 1.5 ಕೋಟಿ ರೂ. ಹಣ ಪಡೆದಿದ್ದರು. ಆದರೆ ಈಗ ಫಿಟ್ನೆಸ್​ ಕೇಂದ್ರವನ್ನೂ ಆರಂಭಿಸಿಲ್ಲ, ಹಣವನ್ನೂ ವಾಪಸ್​ ನೀಡಿಲ್ಲ ಎಂದು ಉದ್ಯಮಿಗಳು ಆರೋಪಿಸಿದ್ದಾರೆ. ಈ ಸಂಬಂಧ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವಿರುದ್ಧ ಕೇಸ್​ ದಾಖಲಿಸಿದ್ದಾರೆ.

ಮೋಸ ಮತ್ತು ನಕಲಿ ಸಹಿ ಮಾಡಿದ ಆರೋಪವನ್ನು ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವಿರುದ್ಧ ಹೊರಿಸಲಾಗಿದೆ. ಅಶ್ಲೀಲ ಸಿನಿಮಾ ನಿರ್ಮಾಣದ ಕೇಸ್​ನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ರಾಜ್​ ಕುಂದ್ರಾ ಅವರು ಹಲವು ದಿನಗಳ ಕಾಲ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಒಂದು ರೀತಿಯಲ್ಲಿ ಅವರು ಅಜ್ಞಾತವಾಸ ಅನುಭವಿಸುತ್ತಿದ್ದರು. ಆದರೆ ಇತ್ತೀಚೆಗೆ ಪತ್ನಿ ಶಿಲ್ಪಾ ಶೆಟ್ಟಿ ಜೊತೆ ಅವರು ಮನೆಯಿಂದ ಆಚೆ ಬಂದಿದ್ದರು. ಇನ್ನೇನು ನಿಧಾನವಾಗಿ ಅವರು ನಾರ್ಮಲ್​ ಜೀವನ ಶೈಲಿಗೆ ಹೊಂದಿಕೊಳ್ಳುತ್ತಾರೆ ಎನ್ನುವಾಗಲೇ ವಂಚನೆ ಆರೋಪ ಎದುರಾಗಿದೆ.

ಕೆಲವು ದಿನಗಳಿಂದ ಈಚೆಗೆ ಸೋಶಿಯಲ್​ ಮೀಡಿಯಾದಲ್ಲಿ ರಾಜ್​ ಕುಂದ್ರಾ ಖಾತೆಗಳು ನಾಪತ್ತೆ ಆಗಿವೆ. ಅಂದರೆ, ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಖಾತೆಗಳನ್ನು ಅವರು ಡಿಆ್ಯಕ್ಟಿವೇಟ್​ ಮಾಡಿದ್ದಾರೆ. ಯಾವುದೇ ಸೂಚನೆ ನೀಡದೇ ಅವರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಪತಿಯ ಈ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:

Shilpa Shetty:​ ಖ್ಯಾತ ನಟನನ್ನು ಅನುಕರಿಸಿ ಸುದ್ದಿಯಾದ ಶಿಲ್ಪಾ ಶೆಟ್ಟಿ; ಏನಿದು ಸಮಾಚಾರ? ವಿಡಿಯೋ ನೋಡಿ

Raj Kundra: ಶಿಲ್ಪಾ ಶೆಟ್ಟಿ ವರ್ತನೆಗೆ ತದ್ವಿರುದ್ಧವಾಗಿ ನಡೆದುಕೊಂಡ ರಾಜ್​ ಕುಂದ್ರಾ; ಅನುಮಾನ ಹುಟ್ಟಿಸಿದೆ ಈ ನಡೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada