‘ಸೂರ್ಯವಂಶಿ’ ಯಶಸ್ಸಿನ ಬೆನ್ನಲ್ಲೇ ಬರ್ತಿದೆ ‘ಪೃಥ್ವಿರಾಜ್​’ ಚಿತ್ರದ ಅಪ್​ಡೇಟ್​; ಅಕ್ಷಯ್​ ಫ್ಯಾನ್ಸ್​ ಫುಲ್​ ಖುಷ್​

Prithviraj movie teaser: ‘ಪೃಥ್ವಿರಾಜ್​’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಸಂಜಯ್​ ದತ್​ ಮತ್ತು ಸೋನು ಸೂದ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ‘ಸೂರ್ಯವಂಶಿ’ ರೀತಿ ಈ ಚಿತ್ರ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಾಣುವ ನಿರೀಕ್ಷೆ ಇದೆ.

‘ಸೂರ್ಯವಂಶಿ’ ಯಶಸ್ಸಿನ ಬೆನ್ನಲ್ಲೇ ಬರ್ತಿದೆ ‘ಪೃಥ್ವಿರಾಜ್​’ ಚಿತ್ರದ ಅಪ್​ಡೇಟ್​; ಅಕ್ಷಯ್​ ಫ್ಯಾನ್ಸ್​ ಫುಲ್​ ಖುಷ್​
ಮಾನುಷಿ ಚಿಲ್ಲರ್​, ಅಕ್ಷಯ್​ ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 14, 2021 | 3:38 PM

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಸದ್ಯ ‘ಸೂರ್ಯವಂಶಿ’ (Sooryavanshi) ಚಿತ್ರದ ಗೆಲುವಿನ ಸಂಭ್ರಮದಲ್ಲಿದ್ದಾರೆ. ರೋಹಿತ್​ ಶೆಟ್ಟಿ ನಿರ್ದೇಶನ ಮಾಡಿರುವ ಈ ಚಿತ್ರ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದೆ. ಕತ್ರಿನಾ ಕೈಫ್​, ಅಕ್ಷಯ್​ ಕುಮಾರ್​ ಕಾಂಬಿನೇಷನ್​ಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​​ ನೀಡಿದ್ದಾರೆ. ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದರೂ ಜನರ ಕ್ರೇಜ್​ ಕಮ್ಮಿ ಆಗಿಲ್ಲ. ಈ ನಡುವೆ ಅಕ್ಷಯ್​ ಕುಮಾರ್​ ಅವರ ಮುಂದಿನ ಸಿನಿಮಾದ (Akshay Kumar Movies) ಬಗ್ಗೆ ಹೊಸ ಅಪ್​ಡೇಟ್​ ಸಿಗುತ್ತಿದೆ. ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ತೊಡಗಿಕೊಳ್ಳುವ ಅಕ್ಷಯ್​ ಕುಮಾರ್​ ಅವರು ಬಹುನಿರೀಕ್ಷಿತ ‘ಪೃಥ್ವಿರಾಜ್​’ ಚಿತ್ರದಲ್ಲೂ ನಟಿಸಿದ್ದಾರೆ. ಆ ಸಿನಿಮಾದ ಟೀಸರ್​ ಈಗ ಬಿಡುಗಡೆ ಆಗುತ್ತಿದೆ. ಆ ಕುರಿತಂತೆ ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ. ನ.19ರಂದು ಚಿತ್ರಮಂದಿರಗಳಲ್ಲಿ ‘ಬಂಟಿ ಔರ್​ ಬಬ್ಲಿ 2’ ಸಿನಿಮಾ ಜೊತೆಗೆ ‘ಪೃಥ್ವಿರಾಜ್​’ ಚಿತ್ರದ (Prithviraj Movie) ಟೀಸರ್​ ಬಿತ್ತರ ಆಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಕೇಳಿಬರುತ್ತಿರುವ ಎಗ್ಸೈಟಿಂಗ್​ ವಿಚಾರ ಏನೆಂದರೆ, ನಾಳೆಯೇ (ನ.15) ಈ ಚಿತ್ರದ ಟೀಸರ್​ ಬಿಡುಗಡೆ ಆಗಲಿದೆ.

ಹೌದು, ಅಕ್ಷಯ್​ ಕುಮಾರ್​ ಅಭಿಮಾನಿಗಳು ನ.19ರವರೆಗೂ ಕಾಯಬೇಕಾದ ಅನಿವಾರ್ಯತೆ ಇಲ್ಲ. ಸೋಮವಾರವೇ (ನ.15) ‘ಪೃಥ್ವಿರಾಜ್​’ ಸಿನಿಮಾದ ಟೀಸರ್​ ಆನ್​ಲೈನ್​ನಲ್ಲಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ಚಿತ್ರಕ್ಕೆ ಯಶ್​ ರಾಜ್​ ಫಿಲ್ಮ್ಸ್​ ಬಂಡವಾಳ ಹೂಡಿದೆ. ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ಮಾನುಷಿ ಚಿಲ್ಲರ್​ ನಟಿಸಿದ್ದಾರೆ. ಮಾನುಷಿ ಚಿಲ್ಲರ್​ ಅವರಿಗೆ ಇದು ಮೊದಲ ಸಿನಿಮಾ.

ಡಾ. ಚಂದ್ರಪ್ರಕಾಶ್​ ನಿರ್ದೇಶನ ಮಾಡಿರುವ ‘ಪೃಥ್ವಿರಾಜ್​’ ಸಿನಿಮಾದಲ್ಲಿ ಸಂಜಯ್​ ದತ್​ ಮತ್ತು ಸೋನು ಸೂದ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರು ಪೃಥ್ವಿರಾಜ್​ ಚೌಹಾಣ್​ ಪಾತ್ರವನ್ನು ನಿಭಾಯಿಸಿದ್ದಾರೆ. 2022ರ ಜನವರಿ 21ರಂದು ಈ ಚಿತ್ರ ಬಿಡುಗಡೆ ಆಗಲಿದೆ. ‘ಸೂರ್ಯವಂಶಿ’ ರೀತಿ ಈ ಚಿತ್ರ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಾಣುವ ನಿರೀಕ್ಷೆ ಇದೆ.

ಇದನ್ನೂ ಓದಿ:

ಬಾಕ್ಸ್​​ ಆಫೀಸ್​ನಲ್ಲಿ ಲಾಟರಿ ಹೊಡೆದ ಅಕ್ಷಯ್​ ಕುಮಾರ್​; ಗಳಿಕೆಯಲ್ಲಿ ‘ಸೂರ್ಯವಂಶಿ’ ಕಮಾಲ್​

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?