ಜೋರಾಗಿದೆ ಕತ್ರಿನಾ-ವಿಕ್ಕಿ ಮದುವೆ ತಯಾರಿ; ಇತರೆ ಸೆಲೆಬ್ರಿಟಿಗಳಿಗೆ ಕಿರಿಕಿರಿ: ಕಾರಣ ಏನು?

Katrina Kaif | Vicky Kaushal: ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರನ್ನೂ ಮದುವೆಗೆ ಆಹ್ವಾನಿಸಲಾಗುತ್ತಿದೆ. ಮುಂಬೈ, ದೆಹಲಿ ಮುಂತಾದ ನಗರಗಳಿಂದ ಸ್ನೇಹಿತರು ಜೈಪುರಕ್ಕೆ ಆಗಮಿಸಲಿದ್ದಾರೆ.

ಜೋರಾಗಿದೆ ಕತ್ರಿನಾ-ವಿಕ್ಕಿ ಮದುವೆ ತಯಾರಿ; ಇತರೆ ಸೆಲೆಬ್ರಿಟಿಗಳಿಗೆ ಕಿರಿಕಿರಿ: ಕಾರಣ ಏನು?
ವಿಕ್ಕಿ ಕೌಶಲ್​, ಕತ್ರಿನಾ ಕೈಫ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 15, 2021 | 8:35 AM

ಬಾಲಿವುಡ್​ನಲ್ಲೀಗ ಮದುವೆ ಸೀಸನ್​ ಶುರು ಆಗಿದೆ. ಕತ್ರಿನಾ ಕೈಫ್​ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal)​ ಅವರು ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ಅವರ ಕುಟುಂಬದವರಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಮೂಲಗಳಿಂದ ಈ ಸುದ್ದಿ ಖಚಿತಗೊಂಡಿದೆ. ವಿಕ್ಕಿ-ಕತ್ರಿನಾ ಮದುವೆ (Katrina Kaif Vicky Kaushal marriage) ರಾಜಸ್ಥಾನದ ಐಷಾರಾಮಿ ಹೋಟೆಲ್​ನಲ್ಲಿ ನಡೆಯಲಿದೆ. ಡಿಸೆಂಬರ್​ 7ರಿಂದ 9ರವರೆಗೆ ನಡೆಯಲಿರುವ ಈ ಅದ್ದೂರಿ ಮದುವೆ ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಹಾಗಾಗಿ ತಯಾರಿ ಈಗಲೇ ಜೋರಾಗಿದೆ. ಮದುವೆ ಹೇಗೆ ನಡೆಯಬೇಕು ಎಂದು ಈ ಸ್ಟಾರ್​ ಜೋಡಿ ನಿರ್ಧರಿಸಿದೆ. ಅದೇನೋ ಸರಿ, ಆದರೆ ಇವರ ಮದುವೆಯಿಂದಾಗಿ ಬೇರೆ ಸೆಲೆಬ್ರಿಟಿಗಳಿಗೆ ತೊಂದರೆ ಆಗುತ್ತಿದೆ. ಮದುವೆ ಮುಗಿಯುವವರೆಗೂ ಜೈಪುರದಲ್ಲಿ ಬಾಡಿಗೆ ಕಾರುಗಳ ಅಭಾವ ಉಂಟಾಗಲಿದೆ!

ಹೌದು, ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರನ್ನೂ ಮದುವೆ ಆಹ್ವಾನಿಸಲಾಗುತ್ತಿದೆ. ಮುಂಬೈ, ದೆಹಲಿ ಮುಂತಾದ ನಗರಗಳಿಂದ ಸ್ನೇಹಿತರು ಜೈಪುರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರ ಓಡಾಟಕ್ಕಾಗಿ ಜೈಪುರದಲ್ಲಿ ಇರುವ ಎಲ್ಲ ಐಷಾರಾಮಿ ಬಾಡಿಗೆ ಕಾರುಗಳನ್ನು ಈಗಲೇ ಬುಕ್​ ಮಾಡಲಾಗಿದೆ. ಮದುವೆ ನಡೆಯುವ ದಿನಾಂಕಗಳು ಮಾತ್ರವಲ್ಲದೇ ಅದರ ಆಸುಪಾಸಿನ ದಿನಗಳಿಗೂ ಸೇರಿ ಕಾರುಗಳನ್ನು ಮುಂಗಡವಾಗಿ ಬುಕ್​ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಜೈಪುರ ಸುತ್ತಮುತ್ತ ಶೂಟಿಂಗ್​ ಮಾಡುತ್ತಿರುವ ಇತರೆ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳಿಗೆ ಕಾರಿನ ಅಭಾವ ಕಾಡಲಿದೆ ಎಂದು ವರದಿ ಆಗಿದೆ.

ವಿಕ್ಕಿ ಹಾಗೂ ಕತ್ರಿನಾ ಮದುವೆಗೆ ಬಾಲಿವುಡ್ ತಾರೆಯರಾದ ಕಬೀರ್ ಖಾನ್, ರೋಹಿತ್ ಶೆಟ್ಟಿ, ವರುಣ್ ಧವನ್, ನತಾಶಾ ದಲಾಲ್, ಕರಣ್ ಜೋಹರ್ ಮೊದಲಾದವರಿಗೆ ಈಗಾಗಲೇ ಆಹ್ವಾನ ಹೋಗಿದೆಯಂತೆ. ಕತ್ರಿನಾರ ಮಾಜಿ ಗೆಳೆಯ ರಣಬೀರ್​ಗೂ ಆಹ್ವಾನ ಹೋಗಿದ್ದು, ಆಲಿಯಾ ಭಟ್​ರೊಂದಿಗೆ ಅವರೂ ಮದುವೆಗೆ ಹಾಜರಿರಲಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾರಿಗೂ ಆಹ್ವಾನ ಹೋಗಿದ್ದು, ಅವರ ಗೆಳತಿಯೆಂದು ಹೇಳಲಾಗುವ ಕಿಯಾರಾ ಅಡ್ವಾನಿಯೊಂದಿಗೆ ಭಾಗಿಯಾಗಲಿದ್ದಾರೆ. ಈಗಾಗಲೇ ಕುಟುಂಬದವರು ರಾಜಸ್ಥಾನ ತಲುಪಿದ್ದು, ತಯಾರಿ ನಡೆಸುತ್ತಿದ್ದಾರೆ. ದೀಪಾವಳಿಯ ಸಮಯದಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಎಂಗೇಜ್​ಮೆಂಟ್ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಕತ್ರಿನಾ ಮದುವೆಯಾಗುತ್ತಿರುವ ಹೋಟೆಲ್​ನಲ್ಲಿ ಒಂದು ರಾತ್ರಿ ಕಳೆಯಲು ಐದು ಲಕ್ಷ ಪಾವತಿಸಬೇಕು

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?

Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!