- Kannada News Photo gallery six senses fort barwara Hotel Price six senses fort Hotel Photos Katrina Kaif Marriage venue six senses fort
ಕತ್ರಿನಾ ಮದುವೆಯಾಗುತ್ತಿರುವ ಹೋಟೆಲ್ನಲ್ಲಿ ಒಂದು ರಾತ್ರಿ ಕಳೆಯಲು ಐದು ಲಕ್ಷ ಪಾವತಿಸಬೇಕು
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 7ರಿಂದ 12ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ.
Updated on: Nov 13, 2021 | 2:30 PM

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆದಿನಾಂಕ ನಿಗದಿಯಾಗಿದೆ. ಡಿಸೆಂಬರ್ 7ರಿಂದ 12ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆ.

ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿಮದುವೆ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈ ಹೋಟೆಲ್ ನಲ್ಲಿ ಒಂದು ರಾತ್ರಿ ಕಳೆಯೋಕೆ 80 ಸಾವಿರದಿಂದ ಐದು ಲಕ್ಷದವರೆಗೆ ಪಾವತಿಸಬೇಕು.

ಸುಮಾರು ಒಂದು ವಾರಗಳ ಕಾಲ ಮದುವೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ರೀತಿಯ ಶಾಸ್ತ್ರಗಳು ನೆರವೇರಲಿದೆ. ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಆಮಂತ್ರಣ ಹೋಗಿದೆ.

ವಿಕ್ಕಿ ಹಿಂದು, ಕತ್ರಿನಾ ಕೈಫ್ ಮುಸ್ಲಿಂ. ಈ ಕಾರಣಕ್ಕೆ ಎರಡೂ ಧರ್ಮದ ಪ್ರಕಾರ ಮದುವೆ ಕಾರ್ಯ ನಡೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ, ಆರು ದಿನಗಳ ಕಾಲ ಮದುವೆ ಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ.

ವಿವಾಹ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸೆಲೆಬ್ರಿಟಿ ಮದುವೆ ಆದ ಕಾರಣ ಸಾಕಷ್ಟು ಭದ್ರತೆ ಕೂಡ ಒದಗಿಸಲಾಗುತ್ತಿದೆ.

ಕೊವಿಡ್ ಕಡಿಮೆ ಆಗಿದೆ. ಈ ಕಾರಣಕ್ಕೆ ಮದುವೆ ಅದ್ದೂರಿಯಾಗಿ ನಡೆಯಲಿದೆ. ಈ ಹೈ ಪ್ರೊಫೈಲ್ ಕಲ್ಯಾಣಕ್ಕೆ ಕುಟುಂಬದವರು, ಆಪ್ತರು, ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.









