2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?

TV9 Digital Desk

| Edited By: ಮದನ್​ ಕುಮಾರ್​

Updated on: Nov 05, 2021 | 8:16 AM

‘ನನ್ನ ಕೆನ್ನೆಗೆ ಗಟ್ಟಿಯಾಗಿ ಬಾರಿಸಿ’ ಎಂದು ಅಕ್ಷಯ್​ ಕುಮಾರ್​ ಕೂಗಿದಾಗ ಕತ್ರಿನಾ ಕೈಫ್​ ಜೋರಾಗಿ ಹೊಡೆದೇಬಿಟ್ಟಿದ್ದರು! ಆಗ ಸೆಟ್​ನಲ್ಲಿ ಇದ್ದವರೆಲ್ಲ ತಬ್ಬಿಬ್ಬಾಗಿ ನೋಡುತ್ತಿದ್ದರು.

2 ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್​; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?

Follow us on

ನಟ ಅಕ್ಷಯ್​ ಕುಮಾರ್​ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಬಗ್ಗೆ ಕಾಳಜಿ ತೋರಿಸಲು ಹಲವು ಮಂದಿ ಇದ್ದಾರೆ. ಜನ ಜಂಗುಳಿ ಇರುವಾಗ ಯಾರೂ ಅವರನ್ನು ಟಚ್​ ಮಾಡದಂತೆ ನೋಡಕೊಳ್ಳಲು ಬಾಡಿ ಗಾರ್ಡ್ಸ್​ ಇದ್ದಾರೆ. ಒಂದು ವೇಳೆ ಅಕ್ಷಯ್​ ಕುಮಾರ್​ ಮೇಲೆ ಯಾರಾದರೂ ಕೈ ಮಾಡಿದರೆ ಅವರ ಕಥೆ ಮುಗಿಯಿತು ಎಂದೇ ಅರ್ಥ. ಆದರೆ ಕತ್ರಿನಾ ಕೈಫ್​ ಅವರು ಎರಡು ಬಾರಿ ಅಕ್ಷಯ್​ ಕುಮಾರ್​ ಕೆನ್ನೆಗೆ ಬಾರಿಸಿದ್ದಾರೆ. ಹಾಗಿದ್ದರೂ ಕೂಡ ಅವರ ಮೇಲೆ ಅಕ್ಕಿ ಸಿಟ್ಟಾಗಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಅವರು ಸುಮ್ಮನಾಗಿದ್ದಾರೆ!

ಸಿಂಗ್​ ಈಸ್​ ಕಿಂಗ್​, ನಮಸ್ತೆ ಲಂಡನ್​, ತೀಸ್​ ಮಾರ್​ ಖಾನ್, ವೆಲ್​ಕಮ್​​ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ಮತ್ತು ಕತ್ರಿನಾ ಕೈಫ್​ ಜೊತೆಯಾಗಿ ನಟಿಸಿದ್ದಾರೆ. ಈಗ ಅವರು ‘ಸೂರ್ಯವಂಶಿ’ ಸಿನಿಮಾದಲ್ಲಿ ಮತ್ತೆ ಜೋಡಿಯಾಗಿದ್ದಾರೆ. ಈ ಚಿತ್ರ ಇಂದು (ನ.5) ವಿಶ್ವಾದ್ಯಂತ ಬಿಡುಗಡೆ ಆಗಿದೆ. ‘ಸೂರ್ಯವಂಶಿ’ ಶೂಟಿಂಗ್​ ವೇಳೆ ಅಕ್ಕಿ ಕೆನ್ನೆಗೆ ಕತ್ರಿನಾ ಬಾರಿಸಿದ್ದಾರೆ. ಚಿತ್ರೀಕರಣದಲ್ಲಿ ಕೆನ್ನೆಗೆ ಹೊಡೆಯುವ ದೃಶ್ಯ ಇದ್ದರೆ, ಯಾರೂ ಕೂಡ ನಿಜವಾಗಿಯೂ ಹೊಡೆಯುವುದಿಲ್ಲ. ಕೇವಲ ಹೊಡೆದಂತೆ ನಟಿಸುತ್ತಾರೆ. ಆದರೆ ಕತ್ರಿನಾ ನಿಜವಾಗಿಯೂ ಹೊಡೆದಿದ್ದಾರೆ.

‘ಸೂರ್ಯವಂಶಿ’ ಚಿತ್ರದಲ್ಲಿ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದು, ಅವರ ಪತ್ನಿ ಪಾತ್ರದಲ್ಲಿ ಕತ್ರಿನಾ ಕೈಫ್​ ಕಾಣಿಸಿಕೊಂಡಿದ್ದಾರೆ. ‘ಕೆನ್ನೆಗೆ ಹೊಡೆಯುವ ದೃಶ್ಯದಲ್ಲಿ ನಾನು ರೀಟೇಕ್​ ತೆಗೆದುಕೊಳ್ಳಲಿಲ್ಲ. ಅಕ್ಷಯ್​ ಕುಮಾರ್​ ಕೆನ್ನೆಗೆ ಒಂದೇ ಟೇಕ್​ನಲ್ಲಿ ಬಾರಿಸಿದೆ’ ಎಂದು ಕತ್ರಿನಾ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅಕ್ಷಯ್​ಕುಮಾರ್​ ವಿವರಿಸಿದ್ದಾರೆ. ‘ಹೊಡೆದಂತೆ ನಟಿಸಿದಾಗ ಕೆನ್ನೆ ಮತ್ತು ಕೈ ನಡುವೆ ಗ್ಯಾಪ್​ ಕಾಣಿಸುತ್ತದೆ. ಆ ಗ್ಯಾಪ್​ ತುಂಬಲು ಇವರು ನನಗೆ ನಿಜವಾಗಿಯೂ ಹೊಡೆದರು’ ಎಂದು ಅಕ್ಕಿ ಹೇಳಿದ್ದಾರೆ. ಸಿನಿಮಾದ ದೃಶ್ಯಗಳು ನೈಜವಾಗಿ ಮೂಡಿಬರಬೇಕು ಎಂಬುದು ಅಕ್ಷಯ್​ ಕುಮಾರ್​ ಅವರ ಮುಖ್ಯ ಉದ್ದೇಶ. ಹಾಗಾಗಿ ಅವರು ಈ ಹೊಡೆತವನ್ನು ಸಹಿಸಿಕೊಂಡರು.

ಈ ಹಿಂದೆ ‘ವೆಲ್​ಕಮ್​’ ಸಿನಿಮಾದ ಸಂದರ್ಭದಲ್ಲೂ ಹೀಗೆಯೇ ಆಗಿತ್ತು. ಕೆನ್ನೆಗೆ ಹೊಡೆಯಬೇಕಾದ ದೃಶ್ಯದ ಶೂಟಿಂಗ್​ ವೇಳೆ ಕತ್ರಿನಾ ತುಂಬ ಅಂಜಿಕೊಳ್ಳುತ್ತಿದ್ದರು. ಅದರಿಂದ ಚಿತ್ರೀಕರಣ ತಡವಾಗುತ್ತಿತ್ತು. ಲೇಟ್​ ಆಗುತ್ತಿದ್ದರಿಂದ ಅಕ್ಕಿ ಕೂಡ ರೋಸಿ ಹೋಗಿದ್ದರು. ‘ನನ್ನ ಕೆನ್ನೆಗೆ ಗಟ್ಟಿಯಾಗಿ ಬಾರಿಸಿ’ ಎಂದು ಅವರು ಕೂಗಿದಾಗ ಅನಿವಾರ್ಯವಾಗಿ ಕತ್ರಿನಾ ಜೋರಾಗಿ ಹೊಡೆದೇಬಿಟ್ಟಿದ್ದರು! ಆಗ ಇಡೀ ಸೆಟ್​ನಲ್ಲಿ ಇದ್ದವರೆಲ್ಲ ತಬ್ಬಿಬ್ಬಾಗಿ ನೋಡುತ್ತಿದ್ದರು. ಹೀಗೆ ‘ವೆಲ್​ಕಮ್​’ ಮತ್ತು ‘ಸೂರ್ಯವಂಶಿ’ ಸಿನಿಮಾದಲ್ಲಿ ಎರಡು ಬಾರಿ ಅಕ್ಕಿ ಕೆನ್ನೆಗೆ ಬಾರಿಸಿದ್ದಾರೆ ಕತ್ರಿನಾ ಕೈಫ್​.

ಇದನ್ನೂ ಓದಿ:

Sooryavanshi: ಅಕ್ಷಯ್​ ಕುಮಾರ್​ ಫ್ಯಾನ್ಸ್​ ‘ಸೂರ್ಯವಂಶಿ’ ಸಿನಿಮಾ ಯಾಕೆ ನೋಡಬೇಕು? ಇಲ್ಲಿವೆ 5 ಕಾರಣಗಳು

ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada