‘ಪ್ರೋಟೀನ್​​ಗಾಗಿ ನನ್ನ ಪತಿ ಕದ್ದು ಎದೆಹಾಲು ಕುಡಿದಿದ್ದ’; ವಿಲಕ್ಷಣ ವಿಚಾರ ಬಿಚ್ಚಿಟ್ಟ ಬಾಲಿವುಡ್​ ನಟನ ಪತ್ನಿ

2008ರಲ್ಲಿ ಲೇಖಕಿ ಹಾಗೂ ಫಿಲ್ಮ್​​ಮೇಕರ್​ ತಾಹೀರಾ ಕಶ್ಯಪ್​ ಅವರನ್ನು 2008ರಲ್ಲಿ ಆಯುಷ್ಮಾನ್​ ಖುರಾನಾ ವರಿಸಿದ್ದರು. ಈ ದಂಪತಿಗೆ ಮೊದಲು ಜನಿಸಿದ್ದು ಗಂಡುಮಗು.

‘ಪ್ರೋಟೀನ್​​ಗಾಗಿ ನನ್ನ ಪತಿ ಕದ್ದು ಎದೆಹಾಲು ಕುಡಿದಿದ್ದ’; ವಿಲಕ್ಷಣ ವಿಚಾರ ಬಿಚ್ಚಿಟ್ಟ ಬಾಲಿವುಡ್​ ನಟನ ಪತ್ನಿ
ತಾಹೀರಾ ಕಶ್ಯಪ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 04, 2021 | 9:47 PM

ಚಿತ್ರರಂಗದಲ್ಲಿ ಗುರುತಿಸಿಕೊಂಡ ಸಾಕಷ್ಟು ನಟ-ನಟಿಯರು ವಿಚಿತ್ರ ಗುಣಗಳನ್ನು ಹೊಂದಿರುತ್ತಾರೆ. ಈ ಬಗ್ಗೆ ಅವರು ಹೊರ ಜಗತ್ತಿಗೆ ಹೇಳಿಕೊಳ್ಳೋಕೆ ಇಷ್ಟಪಡುವುದಿಲ್ಲ. ಅಭಿಮಾನಿಗಳು ಏನು ಭಾವಿಸಿಬಿಡುತ್ತಾರೇನೋ ಎನ್ನುವ ಭಯ ಅವರನ್ನು ಕಾಡುತ್ತದೆ. ಆದರೆ, ಕೆಲ ವಿಚಾರಗಳು ಅವರ ಕುಟುಂಬದವರಿಂದ ಹೊರ ಬರುತ್ತದೆ. ಈಗ ಬಾಲಿವುಡ್​ ಖ್ಯಾತ ನಟ ಆಯುಷ್ಮಾನ್​ ಮಾಡಿದ ಒಂದು ಕಿತಾಪತಿ ಕೆಲಸದ ಬಗ್ಗೆ ಅವರ ಪತ್ನಿ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್​ ನಿಜಕ್ಕೂ ಶಾಕ್​ ಆಗಿದ್ದಾರೆ. ಹಾಗಾದರೆ, ಏನದು ಆ ವಿಚಾರ? ಎದೆ ಹಾಲು ಕದ್ದು ಕುಡಿದಿದ್ದು!

2008ರಲ್ಲಿ ಲೇಖಕಿ ಹಾಗೂ ಫಿಲ್ಮ್​​ಮೇಕರ್​ ತಾಹೀರಾ ಕಶ್ಯಪ್​ ಅವರನ್ನು 2008ರಲ್ಲಿ ಆಯುಷ್ಮಾನ್​ ಖುರಾನಾ ವರಿಸಿದ್ದರು. ಈ ದಂಪತಿಗೆ ಮೊದಲು ಜನಿಸಿದ್ದು ಗಂಡುಮಗು. ಈ ಬಗ್ಗೆ ತಾಹೀರಾ ‘ದಿ 7 ಸಿನ್ಸ್​ ಆಫ್​ ಬೀಯಿಂಗ್​ ಮದರ್​’ ಪುಸ್ತಕ ಬರೆದಿದ್ದು, ತಾಯ್ತನದ ಆನಂದವನ್ನು ಅವರು ವಿವರಿಸಿದ್ದಾರೆ. ಇದರ ಜತೆಗೆ ಅಚ್ಚರಿ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

ಮೊದಲ ಮಗುವಿಗೆ ಈ ದಂಪತಿ ವೀರಜ್​ವೀರ್​ ಎಂದು ನಾಮಕರಣ ಮಾಡಿದ್ದಾರೆ. ಮಗು ಜನಿಸಿದ ಒಂಭತ್ತು ತಿಂಗಳಿಗೆ ಚಿಕ್ಕ ಹನಿಮೂನ್​ಗೆ ಬ್ಯಾಂಕಾಕ್​ಗೆ ತೆರಳಿದ್ದರು. ಮಗುವಿಗಾಗಿ ಅವರು ಬಾಟಲಿಯಲ್ಲಿ ಎದೆಹಾಲು ಶೇಖರಿಸಿಟ್ಟಿದ್ದರು. ಆದರೆ, ಬಾಟಲಿಯಲ್ಲಿ ತುಂಬಿಸಿಟ್ಟ ಎದೆಹಾಲು ಖಾಲಿ ಆಗಿತ್ತು. ಇದು ಅವರಲ್ಲಿ ಅಚ್ಚರಿ ಮೂಡಿಸಿತ್ತು.

‘ನನ್ನ ಹುಡುಗ (ಆಯುಷ್ಮಾನ್​) ಬೆಡ್​ರೂಮ್​ನಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದ. ಅವನ ಕೈಯಲ್ಲಿ ಪ್ರೋಟೀನ್​ ಶೇಖ್​ ಇತ್ತು. ನಾನು ಬಾಟಲಿಯಲ್ಲಿ ಇಟ್ಟ ಎದೆಹಾಲು ಕಾಣೆಯಾದ ಬಗ್ಗೆ ಆತನಲ್ಲಿ ಕೇಳಿದೆ. ಆಯುಷ್ಮಾನ್ ತಾನು ಕುಡಿದು ಖಾಲಿ ಮಾಡಿರುವುದಾಗಿ ಹೇಳಿದ. ಅಷ್ಟೇ ಅಲ್ಲ, ಇದು ಒಳ್ಳೆಯ ಪ್ರೋಟೀನ್​ ಶೇಖ್​ ಎಂದ. ನಾನು ಅಯ್ಯೋ ಎಂದು ತಲೆಮೇಲೆ ಕೈಹೊತ್ತು ಕೂತೆ’ ಎಂದು ತಾಹೀರಾ ವಿವರಿಸಿದ್ದಾರೆ.

ಇದನ್ನೂ ಓದಿ: ‘ಸಿನಿಮಾಗೆ ರೆಸ್ಪಾನ್ಸ್ ಬರ್ತಿಲ್ಲ, ಭವಿಷ್ಯ ಇಲ್ಲಿಗೆ ಕೊನೆಯಾದ ಹಾಗೆ ಅನಿಸುತ್ತಿದೆ’; ‘ಭಜರಂಗಿ 2’ ಖಳನ ಕಣ್ಣೀರು

ಅನನ್ಯಾ ಪಾಂಡೆ ನಟನೆಯ ಸಿನಿಮಾಗಳನ್ನು ನೋಡುವ ಆಸಕ್ತಿ ಉಳಿದಿಲ್ಲ; ಕುಟುಕಿದ ಬಾಲಿವುಡ್​ ನಟಿ 

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್