ಅನನ್ಯಾ ಪಾಂಡೆ ನಟನೆಯ ಸಿನಿಮಾಗಳನ್ನು ನೋಡುವ ಆಸಕ್ತಿ ಉಳಿದಿಲ್ಲ; ಕುಟುಕಿದ ಬಾಲಿವುಡ್ ನಟಿ
ಮಾಡೆಲ್ ಹಾಗೂ ನಟಿ ನೇಹಾ ಶರ್ಮಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ‘ಅನನ್ಯಾ ಪಾಂಡೆ ಹೆಸರು ಕೇಳಿದಾಗ ನಿಮ್ಮ ಮನದಲ್ಲಿ ಮೂಡುವ ಮೊದಲ ಆಲೋಚನೆ ಏನು’ ಎನ್ನುವ ಪ್ರಶ್ನೆ ಕೇಳಲಾಯಿತು.
ಖ್ಯಾತ ನಟ ಚಂಕಿ ಪಾಂಡೆ ಬಾಲಿವುಡ್ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ತಮ್ಮ ಮಗಳು ಅನನ್ಯಾ ಪಾಂಡೆ ಅವರನ್ನೂ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. 22ರ ಪ್ರಾಯದ ಈ ನಟಿ 2019ರಲ್ಲಿ ತೆರೆಕಂಡ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ‘ಪತಿ ಪತ್ನಿ ಔರ್ ವೋ’, ‘ಖಾಲಿ ಪೀಲಿ’ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ಆದರೆ, ಅವರಿಗೆ ಇನ್ನೂ ಬಾಲಿವುಡ್ನಲ್ಲಿ ಭದ್ರ ಬುನಾದಿ ಸಿಕ್ಕಿಲ್ಲ. ವಿಜಯ್ ದೇವರಕೊಂಡ ಜತೆಗಿನ ‘ಲೈಗರ್’ ಸಿನಿಮಾ ಬಗ್ಗೆ ಅವರಿಗೆ ಭರವಸೆ ಇದೆ. ಅದರ ಬಿಡುಗಡೆಗೂ ಮೊದಲೇ ಅವರ ಹೆಸರು ಡ್ರಗ್ಸ್ ಕೇಸ್ನಲ್ಲಿ ತಳುಕು ಹಾಕಿಕೊಂಡಿದೆ. ಈಗ ಅವರ ಬಗ್ಗೆ ಬಾಲಿವುಡ್ ನಟಿಯೊಬ್ಬರು ಕುಹಕವಾಡಿದ್ದಾರೆ.
ಮಾಡೆಲ್ ಹಾಗೂ ನಟಿ ನೇಹಾ ಶರ್ಮಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ‘ಅನನ್ಯಾ ಪಾಂಡೆ ಹೆಸರು ಕೇಳಿದಾಗ ನಿಮ್ಮ ಮನದಲ್ಲಿ ಮೂಡುವ ಮೊದಲ ಆಲೋಚನೆ ಏನು’ ಎನ್ನುವ ಪ್ರಶ್ನೆ ಕೇಳಲಾಯಿತು.
‘ನಾನು ಸಿನಿಮಾಗಳನ್ನು ಹೆಚ್ಚು ನೋಡುವುದಿಲ್ಲ ಮತ್ತು ಅನನ್ಯಾ ನಟನೆಯ ಯಾವ ಸಿನಿಮಾಗಳನ್ನೂ ನನಗೆ ನೋಡಬೇಕು ಎನಿಸಿಯೇ ಇಲ್ಲ. ಯಾವ ಸಿನಿಮಾದ ಟ್ರೇಲರ್ ನೋಡಿದಾಗ ನನಗೆ ಖುಷಿ ಆಗುತ್ತದೆಯೋ ಅವುಗಳನ್ನು ನಾನು ನೋಡೋಕೆ ಹೋಗುತ್ತೇನೆ. ಆದರೆ ಅನನ್ಯಾ ನಟನೆಯ ಸಿನಿಮಾಗಳ ಪ್ರೋಮೋಗಳು ಈ ವರೆಗೆ ನನಗೆ ಎಗ್ಸೈಟ್ ಎನಿಸಲೇ ಇಲ್ಲ’ ಎಂದರು ನೇಹಾ.
‘ಅನನ್ಯಾ ಈಗತಾನೇ ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು, ಐದು ವರ್ಷಗಳಲ್ಲಿ ಅವರು ಅದ್ಭುತ ಸಿನಿಮಾಗಳನ್ನು ಮಾಡಬಹುದು. ಆಗ ನನಗೆ ಅವರ ಸಿನಿಮಾ ನೋಡಬೇಕು ಎನಿಸಬಹುದು. ಆದರೆ, ಸದ್ಯದ ಮಟ್ಟಿಗೆ ಅವರ ಯಾವ ಸಿನಿಮಾ ಕೂಡ ನೋಡಬೇಕು ಎನಿಸಲೇ ಇಲ್ಲ’ ಎಂದಿದ್ದಾರೆ ಅವರು.
ಸದ್ಯ ಎನ್ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇತ್ತೀಚೆಗೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ವೈಯಕ್ತಿಕ ಕಾರಣ ನೀಡಿ ವಿಚಾರಣೆಗೆ ಹಾಜರಿ ಹಾಕಿರಲಿಲ್ಲ. ಅವರ ವಿರುದ್ಧ ಸೂಕ್ತ ಸಾಕ್ಷಿ ಸಿಕ್ಕರೆ ಬಂಧನ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: ಸಮೀರ್ ವಾಂಖೆಡೆ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ವಿಚಾರಣೆಯನ್ನೇ ಸ್ಕಿಪ್ ಮಾಡಿದ ಅನನ್ಯಾ ಪಾಂಡೆ
Aryan Khan: ಗಾಂಜಾ ಕುರಿತ ಆರ್ಯನ್- ಅನನ್ಯಾ ವಾಟ್ಸಾಪ್ ಚಾಟ್ ಬಹಿರಂಗ; ಕೊಕೇನ್ ಬಗ್ಗೆಯೂ ಮಾತನಾಡಿದ್ದ ಆರ್ಯನ್