AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiran Gosavi: ಆರ್ಯನ್​ ಸಿಕ್ಕಿಬಿದ್ದಾಗ ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟಿದ್ದ ಕಿರಣ್​ ಗೋಸಾವಿ ಅರೆಸ್ಟ್​;​ ಈ ವ್ಯಕ್ತಿ ಮೇಲಿನ ಆರೋಪ ಒಂದೆರಡಲ್ಲ

Aryan Khan: ಆರ್ಯನ್​ ಖಾನ್​ ಬಂಧನದ ಬಗ್ಗೆ ಅನುಮಾನ ಮೂಡುತ್ತಿದ್ದಂತೆಯೇ ಕಿರಣ್​ ಗೋಸಾವಿ ನಾಪತ್ತೆ ಆಗಿದ್ದರು. ಪುಣೆ ಪೊಲೀಸರು ಗೋಸಾವಿಗಾಗಿ ಈ ಮೊದಲಿನಿಂದಲೂ ಹುಡುಕಾಟ ನಡೆಸಿದ್ದರು. ಈಗ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Kiran Gosavi: ಆರ್ಯನ್​ ಸಿಕ್ಕಿಬಿದ್ದಾಗ ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟಿದ್ದ ಕಿರಣ್​ ಗೋಸಾವಿ ಅರೆಸ್ಟ್​;​ ಈ ವ್ಯಕ್ತಿ ಮೇಲಿನ ಆರೋಪ ಒಂದೆರಡಲ್ಲ
ಕಿರಣ್ ಗೋಸಾವಿ, ಆರ್ಯನ್ ಖಾನ್
TV9 Web
| Edited By: |

Updated on: Oct 28, 2021 | 8:58 AM

Share

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ (Aryan Khan) ಅವರ ಡ್ರಗ್ಸ್​ ಪ್ರಕರಣ ದಿನದಿಂದ ದಿನಕ್ಕೆ ಬೇರೆಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಎನ್​ಸಿಬಿ ಅಧಿಕಾರಿಗಳ ತನಿಖೆ ಬಗ್ಗೆಯೂ ಅನೇಕ ಅನುಮಾನಗಳು ವ್ಯಕ್ತವಾಗಿವೆ. ಅಚ್ಚರಿ ಎಂದರೆ ಐಷಾರಾಮಿ ಹಡಗಿನ ಮೇಲಿನ ದಾಳಿ ಸಂದರ್ಭದಲ್ಲಿ ಎನ್​ಸಿಬಿಗೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಕೂಡ ಹಾಜರಿದ್ದರು. ಆ ಪೈಕಿ ಪ್ರಮುಖವಾಗಿ ಕೇಳಿಬಂದ ಹೆಸರು ಕಿರಣ್​ ಗೋಸಾವಿ. ಆರ್ಯನ್​ ಖಾನ್​ ಸಿಕ್ಕಿಬಿದ್ದಾಗ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕಿರಣ್​ ಗೋಸಾವಿ (Kiran Gosavi ) ಖುಷಿಪಟ್ಟಿದ್ದರು. ಆದರೆ ಈಗ ಅವರು ಪುಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರ್ಯನ್​ ಖಾನ್​ ಬಂಧನದ ಬಗ್ಗೆ ಅನುಮಾನ ಮೂಡುತ್ತಿದ್ದಂತೆಯೇ ಕಿರಣ್​ ಗೋಸಾವಿ ನಾಪತ್ತೆ ಆಗಿದ್ದರು. ಅವರಿಗೂ ಎನ್​ಸಿಬಿಗೂ ಯಾವುದೇ ಸಂಬಂಧ ಇಲ್ಲ ಎಂದು ಎನ್​ಸಿಬಿ ಕಡೆಯಿಂದಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿತ್ತು. ಆದರೆ ಅವರನ್ನು ಈ ಪ್ರಕರಣದ ಪ್ರಮುಖ ಸಾಕ್ಷಿ ಎಂದು ಪರಿಗಣಿಸಲಾಗಿತ್ತು. ಕಿರಣ್​ ಗೋಸಾವಿ ನಾಪತ್ತೆ ಆದ ಬಳಿಕ ಅವರ ಬಾಡಿಗಾರ್ಡ್​ ಪ್ರಭಾಕರ್​ ಸೈಲ್​ ಕೆಲವು ಗಂಭೀರ ಆರೋಪ ಮಾಡಿದ್ದರು. ಎನ್​ಸಿಬಿ ಅಧಿಕಾರಿಗಳು ಖಾಲಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡರು. ಬಹುಕೋಟಿ ಡೀಲ್​ ನಡೆದಿದೆ. ತಮ್ಮ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂಬಿತ್ಯಾದಿ ಆರೋಪಗಳನ್ನು ಅವರು ಮಾಡಿದ್ದರು. ಇದರ ಬೆನ್ನಲೇ ಪುಣೆ ಪೊಲೀಸರು ಗೋಸಾವಿಯನ್ನು ಅರೆಸ್ಟ್​ ಮಾಡಿದ್ದಾರೆ.

ಗೋಸಾವಿ ಓರ್ವ ಖಾಸಗಿ ಡಿಟೆಕ್ಟೀವ್​ ಎಂದು ಹೇಳಲಾಗಿದೆ. ಅವರ ವಿರುದ್ಧ ಹಲವು ಕೇಸ್​ಗಳು ಇವೆ. ಅನೇಕರಿಗೆ ಮೋಸ ಮಾಡಿ ಎಸ್ಕೇಪ್​ ಆಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಪುಣೆ ಪೊಲೀಸರು ಗೋಸಾವಿಗಾಗಿ ಈ ಮೊದಲಿನಿಂದಲೂ ಹುಡುಕಾಟ ನಡೆಸಿದ್ದರು. ಈಗ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನಿಖೆ ಮುಂದುವರಿದಿದ್ದು, ಈ ವ್ಯಕ್ತಿಯ ಇನ್ನಷ್ಟು ಕರಾಮತ್ತುಗಳ ಬಗ್ಗೆ ಮಾಹಿತಿ ಸಿಗಬೇಕಿದೆ.

ಆರ್ಯನ್​ ಖಾನ್​ ಅರೆಸ್ಟ್​ ಆದ ದಿನ ಶಾರುಖ್​ ಮ್ಯಾನೇಜರ್​ ಜೊತೆ ಮಾತನಾಡಲು ಆರ್ಯನ್​ಗೆ ಗೋಸಾವಿಯ ಫೋನ್​ ನೀಡಲಾಗಿತ್ತು. ಅದರ ವಿಡಿಯೋ ಕೂಡ ಈಗಾಗಲೇ ವೈರಲ್​ ಆಗಿದೆ. ಅಂದು ಶಾರುಖ್​ ಮ್ಯಾನೇಜರ್​ ಜೊತೆ ಬಹುಕೋಟಿ ಡೀಲ್​ ಖುದುರಿಸುವ ಪ್ರಯತ್ನ ನಡೆದಿತ್ತು ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಇದನ್ನೂ ಓದಿ:

ಜೈಲಲ್ಲಿ ರಾಮ-ಸೀತೆಯ ಪುಸ್ತಕ ಓದುತ್ತಿರುವ ಆರ್ಯನ್​ ಖಾನ್​; ಜಾಮೀನು ಸಿಗದೇ ಸ್ಟಾರ್​ ಪುತ್ರ ಕಂಗಾಲು

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?