AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryan Khan: ಗಾಂಜಾ ಕುರಿತ ಆರ್ಯನ್- ಅನನ್ಯಾ ವಾಟ್ಸಾಪ್ ಚಾಟ್ ಬಹಿರಂಗ; ಕೊಕೇನ್ ಬಗ್ಗೆಯೂ ಮಾತನಾಡಿದ್ದ ಆರ್ಯನ್

Ananya Pandey: ನಟ ಆರ್ಯನ್ ಖಾನ್ ಹಾಗೂ ಅನನ್ಯಾ ಪಾಂಡೆ ನಡುವಿನ ವಾಟ್ಸಾಪ್ ಚಾಟ್ ಸಂದೇಶ ಬಹಿರಂಗಗೊಂಡಿದೆ ಎಂದು ವರದಿಗಳು ತಿಳಿಸಿವೆ. ಈ ವೇಳೆ ಆರ್ಯನ್ ಸ್ನೇಹಿತರೊಂದಿಗೆ ಕೊಕೇನ್ ಕುರಿತೂ ಮಾತನಾಡಿದ ಮಾಹಿತಿಯೂ ಲಭ್ಯವಾಗಿದೆ.

Aryan Khan: ಗಾಂಜಾ ಕುರಿತ ಆರ್ಯನ್- ಅನನ್ಯಾ ವಾಟ್ಸಾಪ್ ಚಾಟ್ ಬಹಿರಂಗ; ಕೊಕೇನ್ ಬಗ್ಗೆಯೂ ಮಾತನಾಡಿದ್ದ ಆರ್ಯನ್
ಅನನ್ಯಾ ಪಾಂಡೆ, ಆರ್ಯನ್ ಖಾನ್ (ಸಾಂದರ್ಭಿಕ ಚಿತ್ರ)
TV9 Web
| Updated By: Digi Tech Desk|

Updated on:Oct 26, 2021 | 12:51 PM

Share

ಹೈಪ್ರೊಫೈಲ್‌ ಡ್ರಗ್ಸ್‌ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಪ್ರಕರಣದಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್ (Aryan Khan) ಹಾಗೂ ನಟಿ ಅನನ್ಯಾ ಪಾಂಡೆ (Ananya Pandey) ನಡುವಿನ ಚಾಟಿಂಗ್ ಬಯಲಾಗಿದೆ. ಅಚಿತ್​ ಕುಮಾರ್ ಬಳಿ ₹80,000ಕ್ಕೆ ಡ್ರಗ್ಸ್​ ಖರೀದಿ ಮತ್ತು ಮತ್ತಿಬ್ಬರ ಬಳಿ ಡ್ರಗ್ಸ್​ ಖರೀದಿಯ ಬಗ್ಗೆ ಮಾತನಾಡಿದ್ದು ಕೂಡ ಹೊರಬಂದಿದೆ. ಅನನ್ಯಾ ಅಲ್ಲದೆ ಮೂವರು ಸೆಲೆಬ್ರಿಟಿಗಳ ಮಕ್ಕಳ ಜತೆ ಚಾಟ್ ಮಾಡಲಾಗಿದೆ ಎಂದೂ ಕೂಡ ವರದಿಯಾಗಿದೆ. 2019ರ ಜುಲೈನಲ್ಲಿ ಆರ್ಯನ್ ಖಾನ್ (Aryan Khan)​,​ ಅನನ್ಯಾ (Ananya Pandey) ಚಾಟಿಂಗ್​ ನಡೆಸುವಾಗ ಗಾಂಜಾ ಬಗ್ಗೆ ಪ್ರಸ್ತಾಪವಾಗಿತ್ತು. ಆಗ ಅದಕ್ಕೆ ತುಂಬಾ ಡಿಮ್ಯಾಂಡ್ ಇದೆ ಎಂದಿದ್ದ ಅನನ್ಯಾ ಪಾಂಡೆ(Ananya Pandey) ಗೆ, ‘ನಾನು ಅದನ್ನು ರಹಸ್ಯವಾಗಿ ತೆಗೆದುಕೊಳ್ಳುತ್ತೇನೆ’ ಎಂದು ಆರ್ಯನ್ ಉತ್ತರಿಸಿದ್ದರು. ಇದಕ್ಕೆ ಅನನ್ಯಾ ಓಕೆ ಫೈನ್​ ಎಂದು ಉತ್ತರಿಸಿದ್ದರು ಎಂದು ವರದಿಗಳು ತಿಳಿಸಿವೆ.

ಇದಲ್ಲದೇ ನಟಿ ಅನನ್ಯಾ ಪಾಂಡೆಗೆ ಗಾಂಜಾ ತಂದಿದ್ದೀಯಾ ಎಂದು ಆರ್ಯನ್​ ಖಾನ್ ಪ್ರಶ್ನೆ ಮಾಡಿದ್ದು, ‘ಹಾ ತರುತ್ತಿರುವೆ’ ಎಂದು ಉತ್ತರ ಅನನ್ಯಾ ಪಾಂಡೆ ಉತ್ತರ ನೀಡಿದ್ದರು. ಇದೀಗ ಈ ಚಾಟ್​ಗಳು ಬಯಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದ್ದು, ಪ್ರಕರಣಕ್ಕೆ ಮತ್ತೊಂದು ತಿರುವು ಲಭಿಸಿದಂತಾಗಿದೆ. ಆರ್ಯನ್ ಕೊನೆಯ ಬಾರಿಗೆ 2021ರ ಏಪ್ರಿಲ್​ 18ರಂದು ಚಾಟ್ ಮಾಡಿದ್ದರು. ಆ ವೇಳೆ ತನ್ನ ಇತರ ಇಬ್ಬರು ಸ್ನೇಹಿತರೊಂದಿಗೆ ಮಾತನಾಡುತ್ತಾ ಆರ್ಯನ್, ‘ನಾಳೆ ಕೊಕೇನ್​ ಪಡೆಯೋಣ’ ಎಂದಿದ್ದರು. ಇದೂ ಕೂಡ ಬಹಿರಂಗಗೊಂಡಿದೆ. ಇದೇ ಮಾತುಕತೆಯ ವೇಳೆ ಆರ್ಯನ್ ಎನ್​ಸಿಬಿ ಕುರಿತು ಜೋಕ್ ಕೂಡ ಮಾಡಿದ್ದರು. ಅವರ ಸ್ನೇಹಿತರಿಗೆ ನಿಮ್ಮ ವಿರುದ್ಧ ಎನ್​ಸಿಬಿ  ಆಕ್ಟ್ ತರುತ್ತೇನೆ ಎಂದು ತಮಾಷೆ ಮಾಡಿದ್ದು ಕೂಡ ವರದಿಯಾಗಿದೆ.

ಇಂದು ನಡೆಯಲಿದೆ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಅವರ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ವಿಚಾರಣೆಯಲ್ಲಿ ಖ್ಯಾತ ವಕೀಲ ಮುಕುಲ್ ರೋಹಟಗಿ (Mukul Rohatagi) ಆರ್ಯನ್ ಪರ ವಾದ ಮಂಡಿಸಲಿದ್ದಾರೆ. ಅವರು ಆರ್ಯನ್ ಪರ ಜಾಮೀನಿಗಾಗಿ ವಾದ ಮಂಡಿಸುತ್ತಿರುವ ಮೂರನೇ ವಕೀಲರಾಗಿದ್ದಾರೆ. ಅಕ್ಟೋಬರ್ 2ರಂದು ಬಂಧನಕ್ಕೊಳಗಾಗಿದ್ದ ಆರ್ಯನ್, ಕೆಲ ಕಾಲ ಎನ್​ಸಿಬಿ ವಶದಲ್ಲಿದ್ದರು. ಅಕ್ಟೋಬರ್ 8ರಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಸ್ತುತ ಅಕ್ಟೋಬರ್ 30ರವರೆಗೆ ಅವರ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಈ ಹಿಂದೆ ಎರಡು ಬಾರಿ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ವಿಚಾರಣೆ ಕುತೂಹಲ ಕೆರಳಿಸಿದೆ. ಇದನ್ನೂ ಓದಿ:

Aryan Khan: ಆರ್ಯನ್ ಖಾನ್ ವಕೀಲರು ಮತ್ತೆ ಬದಲು; ಇಂದು ಮುಂಬೈ ಹೈಕೋರ್ಟ್​​ನಲ್ಲಿ ಜಾಮೀನು ಅರ್ಜಿಯ ವಿಚಾರಣೆ

‘ಅಪ್ಪ-ಅಮ್ಮನ ವೆಡ್ಡಿಂಗ್​ ಆ್ಯನಿವರ್ಸರಿಗೆ ವಿಶ್​ ಮಾಡ್ಬೇಕು, ವಿಡಿಯೋ ಕಾಲ್​ ಮಾಡಿಕೊಡಿ ಪ್ಲೀಸ್​’; ಆರ್ಯನ್​ ಅಳಲು?

Published On - 12:23 pm, Tue, 26 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ