AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahakali Temple: ಗ್ರಹಣ ಕಾಲದಲ್ಲಿ ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ನಡೆಯುತ್ತೆ ವಿಶೇಷ ಪೂಜೆ

ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ದೇವಸ್ಥಾನಗಳು ಮುಚ್ಚಿದರೂ, ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯ ತೆರೆದಿರುತ್ತದೆ. ಗ್ರಹಣಕ್ಕೆ ಕಾರಣರಾದ ರಾಹು-ಕೇತುಗಳ ಪ್ರಭಾವ ನಿಯಂತ್ರಿಸುವ ಶಕ್ತಿ ಮಹಾಕಾಳಿಗಿದೆ ಎಂಬ ನಂಬಿಕೆಯಿದೆ. ಇಲ್ಲಿ ವಿಶೇಷ ಚಂದ್ರ-ಕೇತು ಶಾಂತಿ ಹೋಮಗಳು ನಡೆಯುತ್ತವೆ. ಗ್ರಹಣ ಕಾಲದಲ್ಲಿ ಕಾಳಿ ಉಪಾಸನೆಯಿಂದ ಜಾತಕದ ಗ್ರಹದೋಷಗಳು ನಿವಾರಣೆಯಾಗುತ್ತವೆ. ಭಕ್ತರಿಗೆ ದರ್ಶನ ಹಾಗೂ ಪೂಜೆಗಳಿಗೆ ಅವಕಾಶವಿದೆ.

Mahakali Temple: ಗ್ರಹಣ ಕಾಲದಲ್ಲಿ ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ನಡೆಯುತ್ತೆ ವಿಶೇಷ ಪೂಜೆ
ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನImage Credit source: Pinterest
ಅಕ್ಷತಾ ವರ್ಕಾಡಿ
|

Updated on: Mar 03, 2026 | 2:39 PM

Share

ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಬಹುತೇಕ ದೇವಸ್ಥಾನಗಳ ಬಾಗಿಲು ಮುಚ್ಚಿದರೆ, ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಯಾಕೆಂದರೆ ಗ್ರಹಣ ಎಂದರೆ ಕತ್ತಲು. ಮಹಾಕಾಳಿಯು ಕತ್ತಲೆಯ ಅಧಿದೇವತೆ ಮತ್ತು ಕಾಲದ ಸಂಹಾರಕಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣಕ್ಕೆ ಕಾರಣರಾದ ರಾಹು ಮತ್ತು ಕೇತುಗಳು ತಾಮಸಿಕ ಗ್ರಹಗಳು. ಇವುಗಳ ಪ್ರಭಾವವನ್ನು ನಿಯಂತ್ರಿಸುವ ಶಕ್ತಿ ಕೇವಲ ಮಹಾಕಾಳಿಗೆ ಮಾತ್ರ ಇದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಕಾಳಿಯ ಉಪಾಸನೆ ಮಾಡುವುದರಿಂದ ಜಾತಕದಲ್ಲಿನ ಗ್ರಹದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಗ್ರಹಣ ಕಾಲದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಸೇರುವುದನ್ನು ಕಾಣಬಹುದು. ಚಂದ್ರಗ್ರಹಣದ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಮಧ್ಯಾಹ್ನ 3 ಗಂಟೆಯಿಂದ ಗ್ರಹಣ ಸಂದರ್ಭ ವಿಶೇಷ ಚಂದ್ರ ಶಾಂತಿ ಹೋಮ ನಡೆಯಲಿದ್ದು, ಗ್ರಹಣ ನಂತರ ಬಂಡೆಮಹಾಕಾಳಿ ಅಮ್ಮನಿಗೆ ಕುಂಭಾಭಿಷೇಕ ನೆರವೇರಲಿದೆ.

ಈ ಬಗ್ಗೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಶಶಿಕುಮಾರ್ ಅವರು ಟಿವಿ9 ಜೊತೆ ಮಾತಾಡಿದ್ದು, ಮಂಗಳವಾರ ಹುಣ್ಣಿಮೆ ಮತ್ತು ಚಂದ್ರಗ್ರಹಣದ ದಿನದಂದು ದೇವಾಲಯವು ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಅನಾದಿ ಕಾಲದಿಂದಲೂ ಗ್ರಹಣದಂತಹ ಸಂದರ್ಭಗಳಲ್ಲಿ ಪೂಜೆ, ಪುನಸ್ಕಾರ ಮತ್ತು ಜಪತಪಗಳನ್ನು ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ, ಗ್ರಹಣ ನಡೆಯುವ ಅವಧಿಯಲ್ಲಿ ದೇವಾಲಯವನ್ನು ಮುಚ್ಚಲಾಗುವುದಿಲ್ಲ ಎಂದು ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಭಕ್ತರು ದೇವಾಲಯಕ್ಕೆ ಬಂದು ದರ್ಶನ ಪಡೆಯಬಹುದು ಅಥವಾ ಮನೆಯಲ್ಲಿಯೇ ಜಪತಪಗಳನ್ನು ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಈ ದಿನ ವಿಶೇಷವಾಗಿ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಇದರೊಂದಿಗೆ ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಚಂದ್ರ ಶಾಂತಿ ಮತ್ತು ಕೇತು ಶಾಂತಿ ಹೋಮಗಳು ನಡೆಯಲಿವೆ. ಹೋಮದ ನಂತರ, ಹೋಮದ ಕಲಶದ ನೀರನ್ನು ತಾಯಿಗೆ ಅಭಿಷೇಕ ಮಾಡಲಾಗುವುದು. ಭೂಮಿಗೆ ಮತ್ತು ಮನುಷ್ಯರಿಗೆ ಉಂಟಾಗಬಹುದಾದ ತೊಂದರೆಗಳು ಮತ್ತು ಅವಘಡಗಳನ್ನು ನಿವಾರಿಸಲು ಈ ಪೂಜೆಗಳನ್ನು ಸಲ್ಲಿಸಲಾಗುತ್ತದೆ ಎಂದು ಅರ್ಚಕರು ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್