‘ಅಪ್ಪ-ಅಮ್ಮನ ವೆಡ್ಡಿಂಗ್ ಆ್ಯನಿವರ್ಸರಿಗೆ ವಿಶ್ ಮಾಡ್ಬೇಕು, ವಿಡಿಯೋ ಕಾಲ್ ಮಾಡಿಕೊಡಿ ಪ್ಲೀಸ್’; ಆರ್ಯನ್ ಅಳಲು?
ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಅ.25ರಂದು 30ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಅವರಿಗೆ ವಿಶ್ ಮಾಡಬೇಕು ಎಂಬುದು ಆರ್ಯನ್ ಬಯಕೆ ಆಗಿತ್ತು.
ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿರುವ ಆರ್ಯನ್ ಖಾನ್ಗೆ ಸಂಕಷ್ಟ ಮುಂದುವರಿದಿದೆ. ಅವರಿಗೆ ಜಾಮೀನು ಕೊಡಿಸಲು ಶಾರುಖ್ ಖಾನ್ ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ. ಸದ್ಯ ಆರ್ಥರ್ ರೋಡ್ ಜೈಲಿನಲ್ಲಿ ಆರ್ಯನ್ ಖಾನ್ ದಿನ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಕುಟುಂಬದ ಪ್ರಮುಖ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅ.8ರಂದು ತಾಯಿ ಗೌರಿ ಖಾನ್ ಬರ್ತ್ಡೇ. ಅ.25ರಂದು ಶಾರುಖ್-ಗೌರಿ ವೆಡ್ಡಿಂಗ್ ಆ್ಯನಿವರ್ಸರಿ. ಈ ಎರಡನ್ನೂ ಆರ್ಯನ್ ಖಾನ್ ಮಿಸ್ ಮಾಡಿಕೊಂಡಿದ್ದಾರೆ. ಪುತ್ರನ ಬಂಧನದಿಂದಾಗಿ ಶಾರುಖ್ ಮನೆಯಲ್ಲಿ ಎಲ್ಲ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ.
ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಅ.25ರಂದು 30ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಅವರಿಗೆ ವಿಶ್ ಮಾಡಬೇಕು ಎಂಬುದು ಆರ್ಯನ್ ಬಯಕೆ ಆಗಿತ್ತು. ಆದರೆ ಜೈಲಿನಲ್ಲಿರುವ ಕಾರಣ ಅದು ಸಾಧ್ಯವಾಗಿಲ್ಲ. ಕೊನೇ ಪಕ್ಷ ವಿಡಿಯೋ ಕಾಲ್ ಮೂಲಕವಾದರೂ ವಿಶ್ ಮಾಡಬೇಕು ಎಂದು ಆರ್ಯನ್ ಬಯಸಿದರು. ದಯವಿಟ್ಟು ಒಂದು ವಿಡಿಯೋ ಕಾಲ್ ಮಾಡಿಕೊಡಿ ಎಂದು ಜೈಲು ಅಧಿಕಾರಿಗಳ ಬಳಿ ಅವರು ಅಂಗಲಾಚಿದರು ಎಂಬ ಮಾಹಿತಿ ಹರಿದಾಡುತ್ತಿದೆ. ಆರ್ಯನ್ ಖಾನ್ ಜೈಲು ವಾಸಕ್ಕೆ ಸಂಬಂಧಿಸಿದಂತೆ ಈ ರೀತಿಯ ಅನೇಕ ಅಂತೆ-ಕಂತೆಗಳು ಕೇಳಿಬರುತ್ತಿವೆ.
ಪುಸ್ತಕ ಓದುತ್ತಿರುವ ಆರ್ಯನ್:
ಹುಟ್ಟಿನಿಂದಲೇ ಶ್ರೀಮಂತಿಕೆಯ ಜೀವನ ಕಂಡಿರುವ ಆರ್ಯನ್ಗೆ ಜೈಲಿನಲ್ಲಿ ಹೊಂದಿಕೊಳ್ಳುವುದು ಕಷ್ಟ ಆಗುತ್ತಿದೆ. ಮಾನಸಿಕವಾಗಿ ಅವರು ಘಾಸಿಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಲು ಒಳ್ಳೆಯ ಪುಸ್ತಕಗಳು ಸಹಾಯ ಮಾಡಬಲ್ಲವು. ಕಳೆದ ಕೆಲವು ದಿನಗಳಿಂದ ಅವರು ಪುಸ್ತಕ ಓದಲು ಶುರು ಮಾಡಿದ್ದಾರೆ. ‘ದಿ ಲಯನ್ಸ್ ಗೇಟ್’ ಪುಸ್ತಕ ಓದಿ ಮುಗಿಸಿದ ಮೇಲೆ ಅವರು ರಾಮ ಮತ್ತು ಸೀತೆಯ ಕುರಿತ ಕೃತಿಯನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹಾಗಾಗಿ ಅವರ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆರ್ಯನ್ ಬಂಧನದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಸಂದರ್ಭದಲ್ಲಿ ಶಾರುಖ್ ಖಾನ್ ಕುಟುಂಬಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ:
Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್ ಮಗನ ವರ್ತನೆ
‘ಖಾಲಿ ಹಾಳೆಗೆ ಸಮೀರ್ ವಾಂಖೆಡೆ ಸಹಿ ಮಾಡಿಸಿಕೊಂಡ್ರು’: ಆರ್ಯನ್ ಬಂಧಿಸಿದ ಅಧಿಕಾರಿ ಮೇಲೆ ಗಂಭೀರ ಆರೋಪ