ಸಮೀರ್​ ವಾಂಖೆಡೆ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ವಿಚಾರಣೆಯನ್ನೇ ಸ್ಕಿಪ್​ ಮಾಡಿದ ಅನನ್ಯಾ ಪಾಂಡೆ

ಎರಡು ದಿನ ಅನನ್ಯಾ ವಿಚಾರಣೆಗೆ ಹಾಜರಿ ಹಾಕಿದ್ದರು. ಸೋಮವಾರ (ಅಕ್ಟೋಬರ್​ 25) ಅವರು ಮತ್ತೆ ವಿಚಾರಣೆಗೆ ಬರಬೇಕಿತ್ತು. ಆರಂಭದಲ್ಲಿ ಅವರು ಬರುವುದು ವಿಳಂಬವಾಗಬಹುದು ಎಂದು ಅಧಿಕಾರಿಗಳು ಭಾವಿಸಿದ್ದರು.

ಸಮೀರ್​ ವಾಂಖೆಡೆ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ವಿಚಾರಣೆಯನ್ನೇ ಸ್ಕಿಪ್​ ಮಾಡಿದ ಅನನ್ಯಾ ಪಾಂಡೆ
ಸಮೀರ್​ ವಾಂಖೆಡೆ, ಅನನ್ಯಾ ಪಾಂಡೆ

ನಟಿ ಅನನ್ಯಾ ಪಾಂಡೆಗೆ ಸಂಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರವಾಗುತ್ತಿಲ್ಲ. ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿರುವ ಆರ್ಯನ್​ ಖಾನ್ ಜತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಅವರ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಇಂದು (ಅಕ್ಟೋಬರ್​ 25) ವಿಚಾರಣೆಗೆ ಅವರು ಹಾಜರಾಗಿಲ್ಲ. ಮತ್ತೊಂದು ದಿನ ಬರುವುದಾಗಿ ಅವರು ಎನ್​ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಎರಡು ದಿನ ಅನನ್ಯಾ ವಿಚಾರಣೆಗೆ ಹಾಜರಿ ಹಾಕಿದ್ದರು. ಸೋಮವಾರ (ಅಕ್ಟೋಬರ್​ 25) ಅವರು ಮತ್ತೆ ವಿಚಾರಣೆಗೆ ಬರಬೇಕಿತ್ತು. ಆರಂಭದಲ್ಲಿ ಅವರು ಬರುವುದು ವಿಳಂಬವಾಗಬಹುದು ಎಂದು ಅಧಿಕಾರಿಗಳು ಭಾವಿಸಿದ್ದರು. ಆದರೆ, ಅವರು ವೈಯಕ್ತಿಕ ಕಾರಣಗಳನ್ನು ನೀಡಿ ವಿಚಾರಣೆಗೆ ಹಾಜರಿ ಹಾಕಿಲ್ಲ. ಅವರು ಮತ್ತೊಂದು ದಿನ ಬರುವುದಾಗಿ ತಿಳಿಸಿದ್ದು, ಇದಕ್ಕೆ ಅವಕಾಶ ನೀಡಲು ಕೋರಿದ್ದಾರೆ ಎಂದು ವರದಿ ಆಗಿದೆ.

ಮುಂಬೈನ ಎನ್​ಸಿಬಿ ಕಚೇರಿಗೆ ಶುಕ್ರವಾರ (ಅ.22) ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಅನನ್ಯಾಗೆ ಸೂಚಿಸಲಾಗಿತ್ತು. ಆದರೆ ಅವರು ಬರೋಬ್ಬರಿ 3 ಗಂಟೆ ತಡವಾಗಿ ಬಂದಿದ್ದರು. ಇದರಿಂದ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅಸಮಾಧಾನಗೊಂಡಿದ್ದರು. ‘ಮನಸ್ಸಿಗೆ ಬಂದ ಸಮಯದಲ್ಲಿ ಆಗಮಿಸಲು ಇದು ಸಿನಿಮಾ ಪ್ರೊಡಕ್ಷನ್​ ಹೌಸ್​ ಅಲ್ಲ. ಇದು ಕೇಂದ್ರದ ತನಿಖಾ ಸಂಸ್ಥೆ. ಇನ್ಮೇಲೆ ಸರಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾಗಬೇಕು’ ಎಂದು ಅನನ್ಯಾ ಪಾಂಡೆಗೆ ಸಮೀರ್ ವಾಂಖೆಡೆ ಎಚ್ಚರಿಕೆ ನೀಡಿದ್ದರು ಎಂದು ವರದಿ ಆಗಿತ್ತು. ಇದಾದ ಬೆನ್ನಲ್ಲೇ ಅನನ್ಯಾ ವಿಚಾರಣೆಯನ್ನೇ ತಪ್ಪಿಸಿದ್ದಾರೆ.

ಆರ್ಯನ್​ ಖಾನ್​ ಬಂಧನದ ನಂತರದಲ್ಲಿ ಅವರ ಮೊಬೈಲ್​ ವಶಕ್ಕೆ ಪಡೆಯಲಾಗಿತ್ತು. ಮೊಬೈಲ್​ನಲ್ಲಿ ವಾಟ್ಸಾಪ್ ಸಂದೇಶಗಳನ್ನು ಎನ್​ಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನನ್ಯಾ ಮತ್ತು ಆರ್ಯನ್​ ಮಧ್ಯೆ ನಡೆದ ಚಾಟ್ಅನ್ನು ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದೆಯಂತೆ. ಈ ಚಾಟ್​ನಲ್ಲಿ  ಡ್ರಗ್​ಗೆ ಸಂಬಂಧಿಸಿ ಅನನ್ಯಾ ಮತ್ತು ಆರ್ಯನ್​ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆರ್ಯನ್​ ಖಾನ್​ಗೆ ಅನನ್ಯಾ ಪಾಂಡೆ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬರ್ಥದಲ್ಲಿ ವಾಟ್ಸಾಪ್​ ಚಾಟ್​​ಗಳು ಇರುವುದು ಕಂಡು ಬಂದಿದೆ. ಈ ಕಾರಣಕ್ಕೆ ಅನನ್ಯಾ ಅವರನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ಎನ್​ಸಿಬಿ ಮೂಲಗಳು ತಿಳಿಸಿವೆ. ಡ್ರಗ್ಸ್​ ತೆಗೆದುಕೊಳ್ಳುವುದರ ಜತೆಗೆ ಅದನ್ನು ಪೂರೈಕೆ ಮಾಡುವುದು ಕೂಡ ಅಪರಾಧವೇ. ಹೀಗಾಗಿ, ಅನನ್ಯಾ ಪಾಂಡೆ ವಿರುದ್ಧ ಈ ರೀತಿಯ ಸಾಕ್ಷ್ಯಗಳು ಸಿಕ್ಕರೆ ಎನ್​ಸಿಬಿ ಅವರನ್ನು ಬಂಧಿಸಬಹುದು. ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Ananya Panday: ‘ಇದು ಫಿಲ್ಮ್​ ಪ್ರೊಡಕ್ಷನ್​ ಹೌಸ್​ ಅಲ್ಲ’: ವಿಚಾರಣೆಗೆ ತಡವಾಗಿ ಬಂದ ಅನನ್ಯಾಗೆ ಸಮೀರ್​ ವಾಂಖೆಡೆ ಕ್ಲಾಸ್

Click on your DTH Provider to Add TV9 Kannada