AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯನ್​ ಖಾನ್​ ವಿರುದ್ಧದ ತನಿಖೆಗೆ ತೊಂದರೆ ಕೊಡುವವರಿಗೆ ಪಾಠ ಕಲಿಸೋಕೆ ಮುಂದಾದ ಸಮೀರ್​ ವಾಂಖೆಡೆ

ನಾನಾ ಜನರು ಮಾಡುತ್ತಿರುವ ಆರೋಪಗಳಿಂದ ಸಮೀರ್​ ಅವರ ತನಿಖೆಗೆ ತೊಂದರೆ ಆಗುತ್ತಿದೆ. ಜತೆಗೆ, ಅವರಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಕಾರಣಕ್ಕೆ ಸಮೀರ್​ ಮುಂಬೈನ ಸೆಷನ್​ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಆರ್ಯನ್​ ಖಾನ್​ ವಿರುದ್ಧದ ತನಿಖೆಗೆ ತೊಂದರೆ ಕೊಡುವವರಿಗೆ ಪಾಠ ಕಲಿಸೋಕೆ ಮುಂದಾದ ಸಮೀರ್​ ವಾಂಖೆಡೆ
ಸಮೀರ್​ ವಾಂಖೆಡೆ, ಆರ್ಯನ್​ ಖಾನ್​
TV9 Web
| Edited By: |

Updated on: Oct 25, 2021 | 2:01 PM

Share

ಡ್ರಗ್​ ಕೇಸ್​ನಲ್ಲಿ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್ ಅವರನ್ನು​ ಬಂಧಿಸಿದ ನಂತರ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಯಾರೋ ಹಿಂಬಾಲಿಸುತ್ತಿರುವ ಬಗ್ಗೆ ಇತ್ತೀಚೆಗೆ ಅವರು ದೂರಿದ್ದರು. ಈಗ ಅವರ ತನಿಖೆಗೆ ಪದೇಪದೇ ತೊಂದರೆ ಕೊಡುವ ಕಾರ್ಯ ನಡೆಯುತ್ತಿದೆ. ಇವರಿಗೆ ಪಾಠ ಕಲಿಸೋಕೆ ಅವರು ಮುಂದಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ಕೋರ್ಟ್​ ಮೆಟ್ಟಿಲೇರಿದ್ದಾರೆ.

ಆರ್ಯನ್​ ಖಾನ್​ ಎನ್​ಸಿಬಿ ವಶದಲ್ಲಿದ್ದಾಗಲೇ ಕೆಪಿ ಗೋಸಾವಿ ಎಂಬುವವರು ಸೆಲ್ಫಿ ತೆಗೆದುಕೊಂಡಿದ್ದರು. ಈ ವ್ಯಕ್ತಿ ಈಗ ನಾಪತ್ತೆ ಆಗಿದ್ದಾರೆ. ಗೋಸಾವಿ ಆಪ್ತ ಎನ್ನಲಾದ ಪ್ರಭಾಕರ್​ ಸೈಲ್​ ಅವರು ಸಮೀರ್​ ವಾಂಖೆಡೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ‘ಪಂಚನಾಮೆಯ ಖಾಲಿ ಹಾಳೆ ಮೇಲೆ ನಮ್ಮಿಂದ ಸಹಿ ಮಾಡಿಸಿಕೊಂಡರು. ಗೋಸಾವಿ ನಾಪತ್ತೆ ಆದ ಬಳಿಕ ಸಮೀರ್​ ವಾಂಖೆಡೆ ಅವರಿಂದ ನನಗೂ ಜೀವ ಬೆದರಿಕೆ ಇದೆ. 18 ಕೋಟಿ ರೂ. ಡೀಲ್​ ಬಗ್ಗೆ ನಾನು ಕೇಳಲ್ಪಟ್ಟಿದ್ದೇನೆ’ ಎಂದು ಪ್ರಭಾಕರ್​ ಸೈಲ್​ ಹೇಳಿದ್ದರು. ಈ ರೀತಿಯ ಆರೋಪಗಳಿಂದ ಸಮೀರ್​ ಅವರ ತನಿಖೆಗೆ ತೊಂದರೆ ಆಗುತ್ತಿದೆ. ಜತೆಗೆ, ಅವರಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಕಾರಣಕ್ಕೆ ಸಮೀರ್​ ಮುಂಬೈನ ಸೆಷನ್​ ಕೋರ್ಟ್​ ಮೆಟ್ಟಿಲೇರಿದ್ದಾರೆ.

‘ನನ್ನ ಕುಟುಂಬದವರ ವಿರುದ್ಧ ಏಕೆ ಆರೋಪಗಳನ್ನು ಮಾಡಲಾಗುತ್ತಿದೆ? ನನ್ನ ಕೆಲಸಕ್ಕೆ ತೊಂದರೆ ಮಾಡಲು ಈ ರೀತಿ ಮಾಡಲಾಗುತ್ತಿದೆ. ಮೃತಪಟ್ಟಿರುವ ನನ್ನ ಅಮ್ಮ, ನನ್ನ ತಂಗಿಯನ್ನು ಟಾರ್ಗೆಟ್​ ಮಾಡಿ ಬಯ್ಯಲಾಗುತ್ತಿದೆ’ ಎಂದು ಸಮೀರ್​ ವಾಂಖೆಡೆ ಮುಂಬೈ ಸೆಷನ್​ ಕೋರ್ಟ್​ಗೆ ಹೇಳಿದ್ದಾರೆ.

‘ನಾನು ಯಾವುದೇ ರೀತಿಯ ತನಿಖೆ ಅಥವಾ ವಿಚಾರಣೆಗೆ ಸಿದ್ಧನಿದ್ದೇನೆ. ನಾನು 15 ವರ್ಷದ ಕೆಲಸದ ಅನುಭವ ಹೊಂದಿದ್ದೇನೆ. ಆದರೆ, ಈ ಅವಧಿಯಲ್ಲಿ ನನ್ನ ವೈಯಕ್ತಿಕ ಜೀವನ ಮತ್ತು ನಾನು ಮಾಡುತ್ತಿರುವ ಕೆಲಸವನ್ನು ಗುರಿಯಾಗಿಸಿಕೊಂಡು ಈ ರೀತಿಯ ಆರೋಪಗಳನ್ನು ಯಾರೂ ಮಾಡಿಲ್ಲ. ನನ್ನ ತನಿಖೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಕೋರ್ಟ್​ ಬಳಿ ಸಮೀರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೀಗೆ ಆದ್ರೆ ಆರ್ಯನ್​ ಖಾನ್​ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಸಮೀರ್​ ವಾಂಖೆಡೆ ಸಿದ್ಧಪಡಿಸಿದ್ದಾರೆ ದೊಡ್ಡ ತಂತ್ರ

‘ಖಾಲಿ ಹಾಳೆಗೆ ಸಮೀರ್​ ವಾಂಖೆಡೆ ಸಹಿ ಮಾಡಿಸಿಕೊಂಡ್ರು’: ಆರ್ಯನ್​ ಬಂಧಿಸಿದ ಅಧಿಕಾರಿ ಮೇಲೆ ಗಂಭೀರ ಆರೋಪ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್