AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ನಿಂತಿದೆ ರಾಜಮೌಳಿ ‘ಆರ್​ಆರ್​ಆರ್’ ಭವಿಷ್ಯ; ಏನಿದು ಸಮಾಚಾರ?

ಮಹಾರಾಷ್ಟ್ರ ಸರ್ಕಾರ ಚಿತ್ರಮಂದಿರದಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಈ ಆದೇಶದ ನಂತರದಲ್ಲಿ ತೆರೆಗೆ ಬರುತ್ತಿರುವ ಹಿಂದಿಯ ಮೊದಲ ದೊಡ್ಡ ಬಜೆಟ್​ ಸಿನಿಮಾ ಎಂದರೆ ಅದು ‘ಸೂರ್ಯವಂಶಿ’.

‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ನಿಂತಿದೆ ರಾಜಮೌಳಿ ‘ಆರ್​ಆರ್​ಆರ್’ ಭವಿಷ್ಯ; ಏನಿದು ಸಮಾಚಾರ?
ಅಕ್ಷಯ್​ ಕುಮಾರ್​-ರಾಜಮೌಳಿ
TV9 Web
| Edited By: |

Updated on: Oct 24, 2021 | 6:01 PM

Share

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಸಿನಿಮಾ 2022ರ ಜನವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಬಗ್ಗೆ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಆ ಸಂದರ್ಭದಲ್ಲಿ ಸಾಕಷ್ಟು ಸಿನಿಮಾಗಳು ಕೂಡ ರಿಲೀಸ್​ಗೆ ರೆಡಿ ಇವೆ. ಈ ಮಧ್ಯೆ, ‘ಆರ್​ಆರ್​ಆರ್​’ ರಿಲೀಸ್​ ಭವಿಷ್ಯ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್​ ಆಫೀಸ್​ ಕಲೆಕ್ಷನ್​ ಆಧರಿಸಿ ನಿರ್ಧಾರವಾಗಲಿದೆ ಎನ್ನುವ ಸುದ್ದಿ ಜೋರಾಗಿದೆ.

ಅಕ್ಷಯ್​ ಕುಮಾರ್​ ನಟನೆಯ ‘ಬೆಲ್​ ಬಾಟಮ್​’  ಸಿನಿಮಾ ಕೆಲ ತಿಂಗಳ ಹಿಂದೆ ತೆರೆಗೆ ಬಂದಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಓಪನ್​ ಆಗಿರದ ಕಾರಣ ಹಣ ಗಳಿಕೆ ವಿಚಾರದಲ್ಲಿ ಸಿನಿಮಾ ಮಕಾಡೆ ಮಲಗಿತು. ಈಗ ಮಹಾರಾಷ್ಟ್ರ ಸರ್ಕಾರ ಚಿತ್ರಮಂದಿರದಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಈ ಆದೇಶದ ನಂತರದಲ್ಲಿ ತೆರೆಗೆ ಬರುತ್ತಿರುವ ಹಿಂದಿಯ ಮೊದಲ ದೊಡ್ಡ ಬಜೆಟ್​ ಸಿನಿಮಾ ಎಂದರೆ ಅದು ‘ಸೂರ್ಯವಂಶಿ’. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಹೇಗೆ ಕಲೆಕ್ಷನ್​ ಮಾಡುತ್ತದೆ ಎನ್ನುವ ಆಧಾರದ ಮೇಲೆ ಸಿನಿಮಂದಿಯ ಮನಸ್ಥಿತಿ ಈಗ ಹೇಗಿದೆ ಎಂಬುದು ಗೊತ್ತಾಗುತ್ತದೆ.

ಒಂದೊಮ್ಮೆ ‘ಸೂರ್ಯವಂಶಿ’ ಒಳ್ಳೆಯ ಕಲೆಕ್ಷನ್​ ಮಾಡಿದರೆ, ‘ಆರ್​ಆರ್​ಆರ್​’ ಸಿನಿಮಾ ಪ್ರಮೋಷನ್​ ಕಾರ್ಯ ಆರಂಭಿಸಲಿದೆ. ಈ ಚಿತ್ರ ಕಮಾಯಿಯಲ್ಲಿ ಸೋತರೆ ಚಿತ್ರತಂಡ ರಿಲೀಸ್​ ಡೇಟ್​ ಮುಂದೂಡುವ ಬಗ್ಗೆ ಆಲೋಚಿಸಬಹುದು ಎನ್ನುವ ಮಾತಿದೆ. ಒಟ್ಟಿನಲ್ಲಿ ‘ಸೂರ್ಯವಂಶಿ’ ಕಲೆಕ್ಷನ್​ ಆಧರಿಸಿ ಮುಂದಿನ ವಿಚಾರ ನಿರ್ಧಾರವಾಗಲಿದೆ.

ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ರಿಲೀಸ್​ ಡೇಟ್​ ಈಗಾಗಲೇ ಘೋಷಣೆ ಆಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ಜನವರಿ 13ರಂದು ತೆರೆಗೆ ಬರುತ್ತಿದೆ. ಬಿಗ್​ ಬಜೆಟ್​ ಸಿನಿಮಾ ಇದಾಗಿದ್ದು, ಈ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಂದರೆ ಜನವರಿ 14ರಂದು ‘ರಾಧೆ ಶ್ಯಾಮ್​’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಪ್ರಭಾಸ್​ ನಟನೆಯ ಈ ಸಿನಿಮಾ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.  ಪವನ್​ ಕಲ್ಯಾಣ್​ ಹಾಗೂ ರಾಣಾ ದಗ್ಗುಬಾಟಿ ಅಭಿನಯದ ‘ಭೀಮ್ಲಾ ನಾಯಕ್​’ ಸಿನಿಮಾ ಜನವರಿ 12ರಂದು ರಿಲೀಸ್​ ಆಗುತ್ತಿದೆ. ‘ಸೂರ್ಯವಂಶಿ’ ಸಿನಿಮಾ ಚೆನ್ನಾಗಿದ್ದು, ಯಶಸ್ಸು ಕಾಣದಿದ್ದರೆ ಇವುಗಳ ಪೈಕಿ ಕೆಲ ಸಿನಿಮಾಗಳ ರಿಲೀಸ್​ ಡೇಟ್​ ಕೂಡ ಮುಂದೂಡಲ್ಪಡಬಹುದು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

ಸೂರ್ಯವಂಶಿ ಬಿಡುಗಡೆಗೆ ಅಂತೂ ದಿನ ಕೂಡಿಬಂತು; ಇಂದು ದಿನಾಂಕ ಘೋಷಣೆ ಮಾಡಿದ ಅಕ್ಷಯ್​ ಕುಮಾರ್​-ಕತ್ರೀನಾ ಕೈಫ್​

ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
ಆಂಧ್ರಪ್ರದೇಶ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಜೀವ ದಹನ
ಆಂಧ್ರಪ್ರದೇಶ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಜೀವ ದಹನ