ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

ಈ ಕಹಿ ಘಟನೆ ನಡೆದಾಗ ಅಕ್ಷಯ್​ ಕುಮಾರ್​ ಅವರಿಗೆ ಕೇವಲ 6 ವರ್ಷ ವಯಸ್ಸು. ಅವರ ಜೊತೆ ಲಿಫ್ಟ್​ ಮ್ಯಾನ್​ ಅಸಭ್ಯವಾಗಿ ನಡೆದುಕೊಂಡಿದ್ದ. ಅದರಿಂದ ಅಕ್ಷಯ್​ ಮನಸ್ಸು ಘಾಸಿಗೊಂಡಿತ್ತು.

ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು
ಅಕ್ಷಯ್​ ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 24, 2021 | 9:07 AM

ಬಾಲ್ಯದಲ್ಲಿ ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಬಾಯಿ ಬಿಟ್ಟಿದ್ದಾರೆ. ಸ್ಟಾರ್​ ನಟ ಅಕ್ಷಯ್​ ಕುಮಾರ್​ ಕೂಡ ಈ ಬಗ್ಗೆ ಹೇಳಿಕೊಂಡಿದ್ದುಂಟು. ಬಾಲ್ಯದಲ್ಲಿದ್ದಾಗಲೇ ಅವರ ಮೇಲೆ ಲೈಂಗಿಕ ಶೋಷಣೆ ಆಗಿತ್ತು. ಆ ಘಟನೆಯಿಂದ ಅವರು ತುಂಬ ವಿಚಲಿತರಾಗಿದ್ದರು. ಅಲ್ಲದೇ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಈ ಶಾಕಿಂಗ್ ಸಂಗತಿಯ ಬಗ್ಗೆ ಅಕ್ಷಯ್​ ಕುಮಾರ್​ ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.​

ಈ ಕಹಿ ಘಟನೆ ನಡೆದಾಗ ಅಕ್ಷಯ್​ ಕುಮಾರ್​ ಅವರಿಗೆ ಕೇವಲ 6 ವರ್ಷ ವಯಸ್ಸು. ‘ನಾನು ಲಿಫ್ಟ್​ ಮೂಲಕ ನಮ್ಮ ಪಕ್ಕದ ಮನೆಗೆ ತೆರಳುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಜೊತೆ ಲಿಫ್ಟ್​ ಮ್ಯಾನ್​ ಅಸಭ್ಯವಾಗಿ ನಡೆದುಕೊಂಡ. ಆತ ಕೆಟ್ಟ ರೀತಿಯಲ್ಲಿ ನನ್ನನ್ನು ಸ್ಪರ್ಶಿಸಿದ. ಇದರಿಂದ ನನ್ನ​ ಮನಸ್ಸು ಘಾಸಿಗೊಂಡಿತು. ನೇರವಾಗಿ ಹೋಗಿ ನಮ್ಮ ತಂದೆಯ ಬಳಿ ಅಳಲು ತೋಡಿಕೊಂಡೆ. ಅಪ್ಪ ಹೋಗಿ ಪೊಲೀಸರಿಗೆ ದೂರು ನೀಡಿದರು’ ಎಂದು ಆ ಕಹಿ ಘಟನೆಯನ್ನು ಅಕ್ಷಯ್​ ಕುಮಾರ್​ ವಿವರಿಸಿದ್ದರು.

‘ತನಿಖೆ ನಡೆದಾಗ ಗೊತ್ತಾಗಿದ್ದು ಏನೆಂದರೆ ಆ ಲಿಫ್ಟ್​ ಮ್ಯಾನ್​ಗೆ ಇಂಥ ಛಾಳಿ ಮೊದಲಿನಿಂದಲೂ ಇತ್ತು. ಪೊಲೀಸರು ಕ್ರಮ ಕೈಗೊಂಡು ಆತನನ್ನು ಬಂಧಿಸಿದರು. ಚಿಕ್ಕ ವಯಸ್ಸಿನಲ್ಲಿ ನಾನು ನಾಚಿಕೆ ಸ್ವಭಾವದವನಾಗಿದ್ದೆ. ತಂದೆ-ತಾಯಿ ಬಳಿ ಈ ವಿಚಾರ ಹೇಳಿಕೊಂಡೆ. ಇಂದಿಗೂ ಕೂಡ ಒಂದು ಕೆಟ್ಟ ಪದ ಮಾತನಾಡುವುದು ನನಗೆ ಕಷ್ಟ ಆಗುತ್ತದೆ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದರು.

ಅನೇಕ ಕಲಾವಿದರಿಗೆ ಈ ರೀತಿಯ ಕಹಿ ಘಟನೆಗಳು ಆಗಿವೆ. ನಟಿ ನೀನಾ ಗುಪ್ತಾ ಅವರು ತಮ್ಮ ಆತ್ಮಚರಿತ್ರೆ ‘ಸಚ್​ ಕಹೂ ತೋ’ ಪುಸ್ತಕದಲ್ಲಿ ಇಂಥ ಕೆಲವು ಸಂಗತಿಗಳನ್ನು ವಿವರಿಸಿದ್ದಾರೆ. ಬಾಲಕಿ ಆಗಿದ್ದಾಗ ಒಮ್ಮೆ ಅವರು ಕಣ್ಣಿನ ಆಸ್ಪತ್ರೆಗೆ ಹೋಗಿದ್ದರು. ಆರಂಭದಲ್ಲಿ ಕಣ್ಣು ಪರಿಶೀಲಿಸಿದ ವೈದ್ಯರು ನಂತರ ದೇಹದ ಇತರ ಭಾಗಗಳನ್ನು ನೋಡಲು ಆರಂಭಿಸಿದರಂತೆ. ಆ ಅಂಗಗಳು ಕಣ್ಣಿಗೆ ಸಂಬಂಧಿಸಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ನೀನಾ ಗುಪ್ತಾ ಒಬ್ಬರೇ ಕುಳಿತು ಅತ್ತಿದ್ದರು. ಒಂದು ವೇಳೆ ತಾಯಿ ಬಳಿ ಹೇಳಿಕೊಂಡರೇ ತಮ್ಮದೇ ಏನೂ ತಪ್ಪಿರಬಹುದು ಅಂತ ಹೇಳಬಹುದು ಎಂಬ ಭಯದಲ್ಲಿ ಆ ವಿಚಾರವನ್ನು ನೀನಾ ಗುಪ್ತಾ ಮುಚ್ಚಿಟ್ಟರು.

ಇದನ್ನೂ ಓದಿ:

OMG 2: ‘ಓಹ್​ ಮೈ ಗಾಡ್​ 2’ ಪೋಸ್ಟರ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಅಕ್ಷಯ್​ ಕುಮಾರ್​; ಹೇಗಿದೆ ಹೊಸ ಗೆಟಪ್​?

‘ತಪ್ಪಾಗಿ ಈ ಡ್ಯಾನ್ಸ್​ ಮಾಡಿದ್ರೆ ನಿಮ್ಮ ಭವಿಷ್ಯಕ್ಕೆ ತೊಂದರೆ ಆಗಬಹುದು’: ಅಕ್ಷಯ್​ ಕುಮಾರ್​ ವಾರ್ನಿಂಗ್​

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್